ಅಂತರಾಷ್ಟ್ರೀಯ

ಭಾರತದ ವಾಯುದಾಳಿಯಲ್ಲಿ ಸತ್ತ ಉಗ್ರರೆಷ್ಟು? ಪ್ರತ್ಯಕ್ಷದರ್ಶಿಗಳು ಹೇಳುವುದೇನು?

Pinterest LinkedIn Tumblr


ಪಾಕಿಸ್ತಾನದ ಬಾಲ್​ಕೋಟ್​ನಲ್ಲಿ ಫೆಬ್ರವರಿ 26ರಂದು ಭಾರತ ಜೈಶ್​-ಇ-ಮೊಹಮ್ಮದ್​ ಉಗ್ರ ಸಂಘಟನೆಯ ಶಿಬಿರವನ್ನು ಗುರಿಯನ್ನಾಗಿಸಿಕೊಂಡು ವಾಯು ದಾಳಿ ನಡೆಸಿದ ಸ್ಥಳದಲ್ಲಿ 35 ಮೃತದೇಹಗಳನ್ನು ನೋಡಿದ್ದಾಗಿ ಅಲ್ಲಿನ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ದಾಳಿ ನಡೆದ ಒಂದು ಗಂಟೆಯ ನಂತರ ಆ ಮೃತದೇಹಗಳನ್ನು ಆ್ಯಂಬುಲೆನ್ಸ್​ನಲ್ಲಿ ಸಾಗಿಸಲಾಯಿತು ಎಂದು ಅವರು ಹೇಳಿದ್ದಾರೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಸುಮಾರು 12 ಮಂದಿ ತಾತ್ಕಾಲಿಕವಾದ ಮರದ ಒಂದೇ ಕಟ್ಟಡದಲ್ಲಿ ಇದ್ದರು. ಮತ್ತು ಇನ್ನು ಹಲವು ಮಂದಿ ಪಾಕಿಸ್ತಾನ ಸೇನೆಯಲ್ಲಿ ಸೇವೆ ಸಲ್ಲಿಸಿದವರು ದಾಳಿ ವೇಳೆ ಹತರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಈ ವಿಚಾರವನ್ನು ಮಾಧ್ಯಮದ ಮುಂದೆ ಯಾವುದೇ ಕಾರಣಕ್ಕೂ ಹೇಳಬಾರದು ಎಂದು ಅಲ್ಲಿನ ಪ್ರತ್ಯಕ್ಷದರ್ಶಿಗಳಿಗೆ ಸ್ಥಳೀಯ ಸರ್ಕಾರಿ ಆಡಳಿತ ಎಚ್ಚರಿಕೆಯನ್ನು ನೀಡಿತ್ತು ಎಂದು ಮೂಲಗಳು ಹೇಳಿವೆ. ಅಲ್ಲದೇ, ಪ್ರತೀಕಾರದಿಂದ ಅವರು ಬೆಚ್ಚಿಬಿದ್ದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾಗಿ ‘ಫಸ್ಟ್​ ಪೋಸ್ಟ್​​’ ವಿಶೇಷ​ ವರದಿ ಪ್ರಕಟಿಸಿದೆ.

ಈ ಬಾಂಬ್​ ದಾಳಿಯಲ್ಲಿ ಪಾಕಿಸ್ತಾನ ಆಂತರಿಕ ಗುಪ್ತಚರ ಸೇವೆಯ ಮಾಜಿ ಅಧಿಕಾರಿ, ಕರ್ನಲ್​ ಸಲೀಂ ಎಂಬಾತ ಕೂಡ ಹತರಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಕರ್ನಲ್​ ಝಾರರ್​ ಝಾಖ್ರಿ ಗಾಯಗೊಂಡಿದ್ದಾರೆ. ಜೈಶ್​-ಇ-ಮೊಹಮ್ಮದ್​ ಸಂಘಟನೆಯ ತರಬೇತುದಾರ ಪೇಶಾವರದ ಮುಫ್ತಿ ಮೊಯಿನ್​ ಮತ್ತು ಸುಧಾರಿತ ಸ್ಫೋಟಕಗಳ ತಯಾರಿಕ ತಜ್ಞ ಉಸ್ಮಾನ್​ ಘಾನಿ ಕೂಡ ದಾಳಿಯಲ್ಲಿ ಮೃತಪಟ್ಟಿರುವುದಾಗಿ ಅವರು ಹೇಳುತ್ತಾರೆ. ಬಾಂಬ್​ ದಾಳಿ ನಂತರ ತಕ್ಷಣವೇ ಸ್ಥಳೀಯ ಆಡಳಿತದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿದರು. ಒಬ್ಬ ಪ್ರತ್ಯಕ್ಷದರ್ಶಿ ಹೇಳುವಂತೆ, “ಆದರೆ, ಅಷ್ಟೊತ್ತಿಗಾಗಲೇ ಘಟನಾ ಸ್ಥಳವನ್ನು ಸೇನೆಯು ಸುತ್ತುವರೆದಿತ್ತು. ಅಲ್ಲಿಗೆ ಪೊಲೀಸರ ಪ್ರವೇಶವನ್ನೂ ಕೂಡ ಅವರು ನಿಷೇಧಿಸಿದ್ದರು. ಸೇನೆಯ ಅಧಿಕಾರಿಗಳು ವೈದ್ಯಕೀಯ ಸಿಬ್ಬಂದಿ ಮತ್ತು ಆ್ಯಂಬುಲೆನ್ಸ್​ ಸಿಬ್ಬಂದಿಯ ಮೊಬೈಲ್​ ಫೋನ್​ಗಳನ್ನು ಕಿತ್ತಿಟ್ಟುಕೊಂಡರು,” ಎನ್ನುತ್ತಾರೆ.

ಒಂದೇ ಜಾಗದಲ್ಲಿ ಅತೀ ದೊಡ್ಡ ಸಾವು-ನೋವುಗಳು ಸಂಭವಿಸಿತ್ತು ಎಂದು ಪ್ರತ್ಯಕ್ಷದರ್ಶಿ ಹೇಳುತ್ತಾರೆ. ಜೈಶ್​-ಇ-ಮೊಹಮ್ಮದ್​ ಸಂಘಟನೆಗೆ ನೇಮಕಾತಿಗೊಂಡು ಫಿದಾಯನ್​ ತರಬೇತಿ ಪಡೆಯುತ್ತಿದ್ದ 12 ಮಂದಿ ಮರದಿಂದ ನಿರ್ಮಿಸಿದ್ದ ತಾತ್ಕಾಲಿಕ ಕಟ್ಟಡದಲ್ಲಿ ಇದ್ದರು. ಈ ಕಟ್ಟಡ ಬಾಂಬ್​ ದಾಳಿಯಿಂದ ಸಂಪೂರ್ಣ ನಾಮಾವಶೇಷಗೊಂಡಿದೆ ಎನ್ನುತ್ತಾರೆ.

ಪುರಾವೆಯಲ್ಲಿನ ಗೊಂದಲ

ಈ ಭಾಗದ ಪ್ರತ್ಯಕ್ಷದರ್ಶಿಗಳ ಪುರಾವೆಯಲ್ಲಿ ಸಾಕಷ್ಟು ಗೊಂದಲಗಳಿವೆ. ಹಲವು ಮಂದಿ ಇಲ್ಲಿ ಜೈಶ್​-ಇ-ಮೊಹಮ್ಮದ್​ ಸಂಘಟನೆಯ ಸದಸ್ಯರು ಜಾಬಾ ತುದಿಯಲ್ಲಿ ಇರಲಿಲ್ಲ. ಮತ್ತು ಇವರ ಬದಲಿಗೆ ಬೇರೆಯವರು ಇದ್ದರು ಎಂದು ಹೇಳುತ್ತಾರೆ. ಘಟನೆ ಸಂಬಂಧ ಸ್ಥಳೀಯ ನಿವಾಸಿಗಳು ಟೆಲಿವಿಷನ್ ಮತ್ತು ಮುದ್ರಣ ಮಾಧ್ಯಮದ ವರದಿಗಾರರಿಗೆ ದಾಳಿಯಲ್ಲಿ ಬಲಿಪಶುಗಳಾದರು ಎನ್ನಲಾದ ಉಗ್ರರು ಕೇವಲ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಆದಾಗ್ಯೂ, ದಾಳಿ ನಡೆದ ಒಂದು ದಿನದ ನಂತರ ಪ್ರತ್ಯಕ್ಷದರ್ಶಿಗಳನ್ನು ಸಂದರ್ಶನ ಮಾಡಲಾಯಿತು. ಜಾಬಾ ಹಳ್ಳಿಯ ಎಲ್ಲ ಭಾಗಗಳಿಗೂ ಅವರಿಗೆ ಪ್ರವೇಶ ನೀಡಲಾಗಿಲ್ಲ. ದಾಳಿಯಲ್ಲಿ ಇಡೀ ಹಳ್ಳಿಯನ್ನು ಗುರಿ ಮಾಡಲಾಗಿತ್ತು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಆಸ್ಟ್ರೇಲಿಯಾದ ಪ್ರತಿಷ್ಠಿತ ತಂತ್ರಗಾರಿಕೆ ನೀತಿ ಸಂಸ್ಥೆಯ ವಿಶ್ಲೇಷಣೆಕಾರ ನಾಥನ್​ ರುಸರ್​ ನಡೆಸಿದ ಸಮೀಕ್ಷೆಯಲ್ಲಿ, “ಭಾರತ ಹೇಳಿಕೊಂಡಂತೆ ಬಾಂಬ್​ ದಾಳಿಯಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಹೇಳುವುದಕ್ಕೆ ಅಲ್ಲಿ ಯಾವುದೇ ಪ್ರಬಲ ಸಾಕ್ಷಿಗಳಿಲ್ಲ,” ಎನ್ನುತ್ತಾರೆ.
ಭಾರತೀಯ ವಾಯು ಸೇನೆ ಅಧಿಕಾರಿಗಳು ದಾಳಿಯಲ್ಲಿ ಜೈಶ್​-ಇ-ಮೊಹಮ್ಮದ್​ ಸಂಘಟನೆಯ ಹಲವು ಕಟ್ಟಡಗಳು ನಿರ್ನಾಮವಾಗಿರುವುದಕ್ಕೆ ರಾಡಾರ್​ ಮೂಲಕ ಸಾಕಷ್ಟು ಪುರಾವೆಗಳು ದೊರೆತಿವೆ ಎಂದು ಹೇಳುತ್ತಾರೆ.

ಪಾಕ್​ ಸರ್ಕಾರ, ಭಾರತದ ದಾಳಿಯಿಂದ ಸಣ್ಣ ಮಟ್ಡದ ಹಾನಿಯಷ್ಟೇ ಸಂಭವಿಸಿದೆ. ಸಸ್ಯವರ್ಗಕ್ಕೆ ಹಾನಿ ಸಂಭವಿಸಿದೆ ಎಂದು ಹೇಳುತ್ತದೆ.

ಪ್ರತ್ಯಕ್ಷದರ್ಶಿಗಳು ತಿಳಿಸಿದ ಎರಡು ಹೆಸರುಗಳು – ಉಸ್ಮಾನ್ ಮತ್ತು ಕರ್ನಲ್ ಸಲೀಂ ಸಂವಹನ ಗುಪ್ತಚರದಲ್ಲಿಯೂ ಸಹ ಕಂಡುಬಂದಿದೆ ಎಂದು ಭಾರತೀಯ ಗುಪ್ತಚರ ಮೂಲಗಳು ತಿಳಿಸಿವೆ.

ಮಾರ್ಚ್​ 1ರಂದು ಗುಪ್ತಚರ ಮೌಲ್ಯ,ಮಾಪನದ ಸಭೆ ನಡೆದಿದ್ದು, ಸಂಶೋಧನೆ ಮತ್ತು ಅನಲಿಸಿಸ್​ ವಿಂಗ್​ ಹೇಳುವ ಪ್ರಕಾರ ಸಂವಹನ ಗುಪ್ತಚರ ವಿಭಾಗವು ಐದು ಮಂದಿ ಮೃತಪಟ್ಟಿರುವುದಾಗಿ ದೃಢಿಕರಿಸಿದೆ ಎಂದು ತಿಳಿಸಿದೆ.

1998ರಲ್ಲಿ ಕೀನ್ಯಾ ಮತ್ತು ತಾಂಜಾನಿಯ ಅಮೆರಿಕ ರಾಯಭೇರಿ ಕಚೇರಿ ಮೇಲೆ ಬಾಂಬ್​ ದಾಳಿ ನಡೆಸಿದ ಅಲ್​-ಖೈದಾ ಉಗ್ರರ ಅಡಗು ತಾಣದ ಮೇಲೆ ಅಮೆರಿಕ ಅದೇ ವರ್ಷ 75 ಕ್ರೂಸ್​ ಕ್ಷಿಪಣಿಗಳ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಒಂದು ಡಜನ್​ ಅಥವಾ ಅದಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಉಗ್ರರು ಹತರಾಗಿದ್ದರು.

Comments are closed.