ಅಂತರಾಷ್ಟ್ರೀಯ

ಭಾರತ ‘ನೈಸರ್ಗಿಕ ಭಯೋತ್ಪಾದನೆ’ ಎಸಗಿದೆ ಎಂದು ವಿಶ್ವಸಂಸ್ಥೆಯಲ್ಲಿ ದೂರು ನೀಡಿದ ಪಾಕ್!

Pinterest LinkedIn Tumblr


ಭಾರತ ಪಾಕ್​ ಮೇಲೆ ಬಾಂಬ್​ ಹಾಕುವ ಮೂಲಕ ಮರ-ಗಿಡ ಹಾಗೂ ಪ್ರಾಣಿಗಳನ್ನು ಜೀವಕ್ಕೆ ಸಂಚಕಾರ ತಂದಿದೆ. ಈ ಮೂಲಕ ಭಾರತ ಪಾಕ್​ ಮೇಲೆ ‘ನೈಸರ್ಗಿಕ ಭಯೋತ್ಪಾದನೆ’ ಎಸಗಿದೆ ಎಂದು ಪಾಕಿಸ್ತಾನ ಪ್ರಧಾನ ಮಂತ್ರಿ ಹವಾಮಾನ ಬದಲಾವಣೆ ಸಲಹೆಗಾರ ಮಲ್ಲಿಕ್​ ಅಮಿನ್​ ಅಸ್ಲಾಮ್​ ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ದೂರು ದಾಖಲಿಸಿದ್ದಾರೆ.

ಇತ್ತೀಚೆಗೆ ಭಾರತ ಪಾಕ್​ ನೆಲದಲ್ಲಿ ನಡೆಸಿದ ವಾಯು ದಾಳಿಯಿಂದಾಗಿ ಲಕ್ಷಾಂತರ ಮರಗಳು ಹಾನಿಗೊಳಗಾಗಿವೆ ಎಂದು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಭಾರತ ನಡೆಸಿದ ಈ ವಾಯು ದಾಳಿಯಿಂದಾಗಿ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಿದೆ. ಮರ ಹಾಗೂ ಪ್ರಾಣಿ-ಪಕ್ಷಿಗಳು ನಾಶವಾಗಿವೆ. ಇದು ನಿಸರ್ಗದ ಮೇಲೆ ನಡೆಸಿದ ಭಯೋತ್ಪಾದನೆ ಎಂದು ಅಸ್ಲಾಮ್​ ದೂರಿದ್ದಾರೆ.

ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಪತ್ರಕರ್ತರು ಭಾರತ ದಾಳಿ ನಡೆಸಿದ ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದ್ದಾರೆ ಮತ್ತು ಅಲ್ಲಿ ಲಕ್ಷಾಂತರ ಮರಗಳಿಗೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ಹಾನಿಯಾಗಿರುವುದನ್ನು ಕಣ್ಣಾರೆ ಕಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

Comments are closed.