ಮನೋರಂಜನೆ

ಯಜಮಾನನ ಜೊತೆ ರಶ್ಮಿಕಾ ಮಂದಣ್ಣ ಕಟೌಟ್!

Pinterest LinkedIn Tumblr


ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ಯಜಮಾನ’ ಚಿತ್ರ ಇಂದು ವಿಶ್ವಾದ್ಯಂತ ಬಿಡುಗಡೆ ಆಗಿದ್ದು, ಪ್ರೇಕ್ಷಕರು ಯಜಮಾನನ್ನು ಭರ್ಜರಿಯಾಗಿ ಸ್ವಾಗತ ಮಾಡಿದ್ದಾರೆ. ಈ ಚಿತ್ರದಲ್ಲಿ ದರ್ಶನ್ ಜೊತೆ ಅವರ ಮಗ ವಿನೀಶ್ ಕಟೌಟ್ ಹಾಕಲಾಗಿದ್ದು, ಈಗ ರಶ್ಮಿಕಾ ಮಂದಣ್ಣ ಅವರ ಕಟೌಟ್ ಕೂಡ ಹಾಕಲಾಗಿದೆ.

ಕನ್ನಡ ಚಿತ್ರ ಬಿಡುಗಡೆ ಆದಾಗ ಸಾಮಾನ್ಯವಾಗಿ ನಟರ ಕಟೌಟ್ ಹಾಕುತ್ತಾರೆ. ಆದರೆ ಈಗ ದರ್ಶನ್ ಅವರ ಕಟೌಟ್ ಜೊತೆ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರ ಕಟೌಟ್ ಕೂಡ ಹಾಕಲಾಗಿದೆ. ರಶ್ಮಿಕಾ ಮಂದಣ್ಣ ಅವರ ಕಟೌಟ್ ಹಾಕಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಈ ಕಟೌಟ್ ಯಾವ ಚಿತ್ರಮಂದಿರದ ಮುಂದೆ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಈ ಮೊದಲು ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸಿದ್ದ ಪ್ರಿಯಾಂಕಾ ಉಪೇಂದ್ರ, ರಾಗಿಣಿ ದ್ವಿವೇದಿ ಹಾಗೂ ಮಾಲಾಶ್ರೀ ಅವರ ಕಟೌಟ್ ಹಾಕಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಸ್ಯಾಂಡಲ್‍ವುಡ್‍ನಲ್ಲಿ ಸ್ಟಾರ್ ನಟನ ಜೊತೆ ರಶ್ಮಿಕಾ ಅವರ ಕಟೌಟ್ ಹಾಕಲಾಗಿದೆ.

ದರ್ಶನ್‍ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ಮಿಂಚಿದ್ದಾರೆ. ಡೈನಾಮಿಕ್ ಸ್ಟಾರ್ ದೇವರಾಜ್, ರವಿಶಂಕರ್, ಡಾಲಿ ಧನಂಜಯ್, ದತ್ತಣ್ಣ, ಶಿವರಾಜ್. ಕೆ.ಆರ್ ಪೇಟೆ, ಸಾಧುಕೋಕಿಲ ಸೇರಿದಂತೆ ಅತಿ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿ ತುಂಬಿದೆ. ಈ ಚಿತ್ರವನ್ನು ಪೋನ್‍ಕುಮಾರ್ ಹಾಗೂ ವಿ. ಹರಿಕೃಷ್ಣ ಜಂಟಿಯಾಗಿ ನಿರ್ದೇಶಿಸಿದ್ದಾರೆ. ಸಂಗೀತ ನಿರ್ದೇಶಕರಾಗಿ ಬಜಾರ್ ನಲ್ಲಿ ಮಿನುಗುತ್ತಿರುವ ಹರಿಕೃಷ್ಣ, ಯಜಮಾನನಿಗಾಗಿ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಕರಾಗಿದ್ದಾರೆ. ಈ ಚಿತ್ರವನ್ನು ಶೈಲಜಾ ನಾಗ್ ಹಾಗೂ ಬಿ. ಸುರೇಶ್ ನಿರ್ಮಿಸಿದ್ದಾರೆ.

Comments are closed.