ರಾಷ್ಟ್ರೀಯ

ವೈದ್ಯಕೀಯ ತಪಾಸಣೆಗೆ ಅಭಿನಂದನ್: ವಾಯುಸೇನೆ!

Pinterest LinkedIn Tumblr


ಅಮೃತ್‌ಸರ್: ಪಾಕ್ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಕೊನೆಗೂ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ.

ರಾತ್ರಿ ಸುಮಾರು 9-20ರ ಸುಮಾರಿಗೆ ಅಭಿನಂದನ್ ಅವರನ್ನು ವಾಘಾ ಗಡಿಯ ಮೂಲಕ ಭಾರತಕ್ಕೆ ಹಸ್ತಾಂತರಿಸಲಾಯಿತು. ಇನ್ನು ಅಭಿನಂದನ್ ಬರುವಿಕೆಯನ್ನು ಕಾಯುತ್ತಿದ್ದ ಭಾರತೀಯ ವಾಯುಸೇನಾಧಿಕಾರಿಗಳು, ವಿಂಗ್ ಕಮಾಂಡರ್ ಅವರನ್ನು ತಮ್ಮ ಸುಪರ್ದಿಗೆ ಪಡೆದಿದೆ.

ಈ ಕುರಿತು ಮಾಹಿತಿ ನೀಡಿರುವ ಏರ್ ವೈಸ್ ಮಾರ್ಷಲ್ ಆರ್‌ಜಿಕೆ ಕಪೂರ್, ಅಭಿನಂದನ್ ಭಾರತಕ್ಕೆ ಮರಳಿದ್ದು, ನಮ್ಮ ವೀರ ಯೋಧನ ಮರಳುವಿಕೆ ಸಂತಸ ತಂದಿದೆ ಎಂದು ಹೇಳಿದ್ದಾರೆ. ಅಲ್ಲದೇ ಅಭಿನಂದನ್ ವಿಮಾನದಿಂದ ಹಾರಿದ್ದರಿಂದ ಅವರ ವೈದ್ಯಕೀಯ ತಪಾಸಣೆ ಅವಶ್ಯಕತೆ ಇದ್ದು, ಕೂಡಲೇ ಅವರನ್ನು ಸೇನಾ ಆಸ್ಪತ್ರೆಗೆ ರವಾನಿಸಲಾಗುವುದು ಎಂದು ತಿಳಿಸಿದ್ದಾರೆ.

Comments are closed.