ಅಂತರಾಷ್ಟ್ರೀಯ

ಭಾರತದ ವಾಯುಸೇನೆಯ ಬಾಲ್​ಕೋಟ್​ ದಾಳಿಗೆ ಪ್ರತಿದಾಳಿಯ ಎಚ್ಚರಿಕೆ ನೀಡಿದ ಪಾಕಿಸ್ತಾನ!

Pinterest LinkedIn Tumblr


ಇಸ್ಲಾಮಾಬಾದ್​: ಬಾಲಕೋಟ್​ನಲ್ಲಿ ಜೈಶ್​-ಇ-ಮೊಹಮ್ಮದ್​ ಉಗ್ರ ಸಂಘಟನೆಯ ಶಿಬಿರದ ಮೇಲೆ ಭಾರತ ವಾಯು ದಾಳಿಸಿದ 12 ಗಂಟೆಗಳ ನಂತರ ಪಾಕಿಸ್ತಾನದ ಮೇಜರ್ ಜನರಲ್ ಆಸೀಫ್​ ಗಫೂರ್​ ಇಸ್ಲಾಮಾಬಾದ್​ನಲ್ಲಿ ಸುದ್ದಿಗೋಷ್ಠಿ ನಡೆಸಿ, ಭಾರತಕ್ಕೆ ಪ್ರತಿದಾಳಿಯ ಎಚ್ಚರಿಕೆ ನೀಡಿದ್ದಾರೆ.

ಅಚ್ಚರಿಗಾಗಿ ಕಾಯಿರಿ. ಪ್ರತಿಕ್ರಿಯೆ ಬಂದೆ ಬರುತ್ತದೆ. ಇದು ನಿಮ್ಮ ಸಮಯ. ಅಚ್ಚರಿಗಾಗಿ ಸಿದ್ಧರಾಗಿರಿ. ಪ್ರತಿದಾಳಿ ಖಡಾಖಂಡಿತ ಎಂದು ಗಫೂರ್​ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ಭಾರತದ ದಾಳಿಯಿಂದ ಉಗ್ರರು ಸತ್ತಿದ್ದಾರೆ ಎಂಬ ವಾದವನ್ನೇ ಅಲ್ಲಗೆಳೆದು ಗಫೂರ್​, ಭಾರತ ತಾನು ಪಾಕಿಸ್ತಾನದೊಳಗೆ ನುಗ್ಗಿ 300 ಉಗ್ರರನ್ನು ಹತ್ಯೆ ಮಾಡಿರುವುದಾಗಿ ಹೇಳಿಕೊಳ್ಳುತ್ತಿದೆ. ಅದು ನಿಜವೇ ಆಗಿದ್ದರೆ ದಾಳಿ ನಡೆದ ಸ್ಥಳದಲ್ಲಿ ರಕ್ತಪಾತ ಆಗಬೇಕಲ್ಲ? 300 ಬೇಡ ಕೇವಲ 10 ಜನರಾದರೂ ಸತ್ತಿದ್ದರೆ ಗಲಭೆಗಳು ಏಳಬೇಕಿತ್ತಲ್ಲವೇ? ಅವರ ಅಂತ್ಯಸಂಸ್ಕಾರವನ್ನು ಗುಟ್ಟಾಗಿ ಮಾಡಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದ್ದಾರೆ.

ನಾವು ಹೇಳುವ ವಿಷಯ ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಭಾರತ ದಾಳಿ ನಡೆಸಿರುವುದಾಗಿ ಹೇಳಿರುವ ಜಾಗಕ್ಕೆ ಯಾರು ಬೇಕಾದರೂ ಭೇಟಿ ನೀಡಬಹುದು. ಅಲ್ಲಿ ಹೋಗಿ ನೋಡಿದರೆ ನಿಮಗೆ ಏನಾದರೂ ಕುರುಹುಗಳು ಕಂಡುಬಂದರೆ ನಮಗೂ ಹೇಳಿ. ಲಾಹೋರ್​- ಸಿಯಾಕೋಟ್​ ಗಡಿಯಲ್ಲಿ ಭಾರತೀಯ ಸೈನಿಕರನ್ನು ನಾವು ಅಡ್ಡಗಟ್ಟಿದ್ದೆವು. ಇನ್ನೊಂದು ಕಡೆ ಬಹವಾಲ್​ಪುರ ಗಡಿಯಲ್ಲಿಯೂ ಒಳಗೆ ನುಸುಳಲು ಪ್ರಯತ್ನಿಸಿದ ಭಾರತೀಯರಿಗೆ ನಾವು ಪ್ರತಿದಾಳಿ ಮಾಡಿದೆವು. ಅಷ್ಟರಲ್ಲಿ ಕಿರಣ್​ ವ್ಯಾಲಿಯಿಂದ ಮುಜಾಫರಾಬಾದ್​ ಗಡಿಯ ಕಡೆಗೆ ದಾಳಿ ನಡೆಯಲಾರಂಭಿಸಿತು. ಭಾರತೀಯ ಸೇನೆ ಗಡಿ ನಿಯಂತ್ರಣಾ ರೇಖೆಯನ್ನು ದಾಟಲು ಪ್ರಯತ್ನಿಸಿತು. ಆದರೆ, ಪಾಕಿಸ್ತಾನದ ಸೇನಾಪಡೆ ಅವರಿಗೆ ತಡೆಯೊಡ್ಡಿತು. ಎಲ್​ಓಸಿಯೊಳಗೆ 4ರಿಂದ 5 ನ್ಯಾಟಿಕಲ್ ಮೈಲಿ ಒಳಗೆ ಬಂದಿದ್ದ ಭಾರತೀಯರು ನಮ್ಮ ದಾಳಿಯಿಂದಾಗಿ ತಮ್ಮ ಬಳಿಯಿದ್ದ ವಿಮಾನದ ಸಾಮಗ್ರಿಗಳನ್ನು ಅಲ್ಲೇ ಎಸೆದು ವಾಪಸ್​ ಹೋದರು ಎಂದು ಹೇಳಿದರು.

ನಾಳೆ ಜಂಟಿ ಸದನ ಅಧಿವೇಶನ ನಡೆಯಲಿದ್ದು, ನಂತರ ರಾಷ್ಟ್ರೀಯ ಕಮಾಂಡೊ ಅಥಾರಿಟಿ ಸಭೆ ನಡೆಯಲಿದೆ. ಅಲ್ಲಿ ಸಾಂವಿಧಾನಿಕವಾಗಿ ಯಾವೆಲ್ಲ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಿಮಗೆ ತಿಳಿಸಲಾಗುವುದು ಎಂದು ಹೇಳಿದರು. ಮುಂದುವರೆದು ಯುದ್ಧದ ಬಗ್ಗೆಯೂ ಪ್ರಸ್ತಾಪ ಮಾಡಿದ ಗಫೂರ್ ಭಾರತ ಯುದ್ಧದ ದಾರಿ ಹಿಡಿದಿದೆ. ನೀವು ನಮ್ಮಿಂದಲೂ ಅದನ್ನೇ ಬಯಸುತ್ತಿದ್ದಿರಾ ಎಂದರು.

ಸದ್ಯಕ್ಕೆ ನಾವು ಯಾವುದೇ ದಾಳಿಗೆ ಮುಂದಾಗುವುದಿಲ್ಲ ಎಂದು ಹೇಳಿದ ಗಫೂರ್​, ಭಾರತದವರು ಇಲ್ಲಿಗೆ ಬಂದು ಖಾಲಿ ಕೈನಲ್ಲಿ ಓಡಿಹೋಗಿದ್ದಾರೆ. ಈಗ ಅವರು ದಾಳಿ ನಡೆಸಿದ ಪ್ರದೇಶಕ್ಕೆ ಸುಲವಾಗಿ ಬಂದು ಬಾಂಬ್​ ಮತ್ತು ಕ್ಷಿಪಣಿಗಳನ್ನು ಉಡಾಯಿಸಬಹುದು ಎಂದು ಹೇಳಿದರು.

ಸಿನಿಮಾ ಪ್ರದರ್ಶನವಿಲ್ಲ!

ಇನ್ನು ಮುಂದೆ ಭಾರತದ ಯಾವ ಸಿನಿಮಾಗಳನ್ನೂ ಪಾಕಿಸ್ತಾನದಲ್ಲಿ ಪ್ರದರ್ಶಿಸದೆ ಇರಲು ಪಾಕಿಸ್ತಾನದ ಸಿನಿಮಾ ಪ್ರದರ್ಶಕರ ಸಂಘ​ ನಿರ್ಧಾರ ಮಾಡಿದೆ. ಅಷ್ಟೇ ಅಲ್ಲದೇ, ಮೇಡ್​ ಇನ್​ ಇಂಡಿಯಾ ಜಾಹೀರಾತುಗಳನ್ನೂ ನಿಷೇಧಿಸಲು ನಿರ್ಧಾರ ತೆಗೆದುಕೊಂಡಿದೆ.

Comments are closed.