
ವಾಷಿಂಗ್ಟನ್: ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್್ಸ ಮ್ಯಾಟಿಸ್ ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನ ಲಾಗಿದೆ. ‘ನಿಮ್ಮ ನೀತಿಗಳಿಗೆ ಒಗ್ಗುವಂತಹ ವ್ಯಕ್ತಿಯನ್ನು ರಕ್ಷಣಾ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿಕೊಳ್ಳಿ’ ಎಂದು ಟ್ರಂಪ್ಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ಮ್ಯಾಟಿಸ್ ಹೇಳಿದ್ದಾರೆ. ರಾಜೀನಾಮೆಯನ್ನು ಟ್ವೀಟ್ ಮೂಲಕ ಖಚಿತಪಡಿಸಿರುವ ಟ್ರಂಪ್, ಮ್ಯಾಟಿಸ್ ಫೆಬ್ರವರಿ ಅಂತ್ಯದವರೆಗೂ ಅಧಿಕಾರ ದಲ್ಲಿರುತ್ತಾರೆ ಎಂದು ಹೇಳಿದ್ದಾರೆ.
ಭಾರತಕ್ಕೆ ಆಪ್ತ
ಮ್ಯಾಟಿಸ್ ಭಾರತದ ಜತೆಗೆ ರಕ್ಷಣಾ ಸಂಬಂಧಕ್ಕೆ ಒತ್ತು ನೀಡಿದ್ದರು. ಹಿಂದು ಮಹಾಸಾಗರ ಮತ್ತು ಶಾಂತಸಾಗರ ಪ್ರದೇಶದಲ್ಲಿ ಚೀನಾ ಪ್ರಾಬಲ್ಯಕ್ಕೆ ಕಡಿವಾಣ ಹಾಕಬೇಕಾದರೆ ಭಾರತ ಮತ್ತು ಅಮೆರಿಕ ಮತ್ತಷ್ಟು ಹತ್ತಿರವಾಗಬೇಕು ಎಂದು ಮ್ಯಾಟಿಸ್ ಹೇಳಿದ್ದರು. ಅವರ ನಿರ್ಗಮನದಿಂದ ಉಭಯ ದೇಶಗಳ ಮೈತ್ರಿಗೆ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ ಎಂದು ರಕ್ಷಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಸಿರಿಯಾ ಕುರಿತ ನಿರ್ಧಾರ ಕಾರಣ
ಐಸಿಸ್ ಉಗ್ರ ಪೀಡಿತ ಸಿರಿಯಾದಿಂದ ಅಮೆರಿಕ ಸೇನೆ ವಾಪಸು ಕರೆಯಿಸಿ ಕೊಳ್ಳಲು ಟ್ರಂಪ್ ನಿರ್ಧರಿಸಿದ ಬೆನ್ನಿಗೆ ಮ್ಯಾಟಿಸ್ ರಾಜೀನಾಮೆ ನೀಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ನಿಯೋಜನೆಗೊಂಡಿದ್ದ 14 ಸಾವಿರ ಯೋಧರನ್ನು ವಾಪಸು ಕರೆಸಿಕೊಳ್ಳುವಂತೆ ಟ್ರಂಪ್ ಸೂಚಿಸಿರುವುದು ಮ್ಯಾಟಿಸ್ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಗುರುವಾರ ಮಧ್ಯಾಹ್ನ ಶ್ವೇತಭವನದಲ್ಲಿ ಟ್ರಂಪ್ರನ್ನು ಭೇಟಿ ಮಾಡಿದ ಮ್ಯಾಟಿಸ್, ಸಿರಿಯಾದಿಂದ ಒಮ್ಮೆಲೆ ಸೇನೆ ವಾಪಸು ಕರೆಯಿಸಿ ಕೊಳ್ಳುವುದು ಬೇಡ. ಹಂತ ಹಂತವಾಗಿ ಈ ಪ್ರಕ್ರಿಯೆ ನಡೆಯಲಿ. ಸದ್ಯ ಅಫ್ಘಾನಿಸ್ತಾನ ದಿಂದ ಸೇನೆ ವಾಪಸು ಕರೆಯಿಸಿ ಕೊಳ್ಳುವುದು ಬೇಡ ಎಂಬ ಸಲಹೆ ನೀಡಿದ್ದರು. ಆದರೆ, ಇದು ತಿರಸ್ಕೃತಗೊಂಡ ಕಾರಣ ಅವರು ರಾಜೀನಾಮೆ ನೀಡಿದ್ದಾರೆ. 2017ರ ಜನವರಿಯಲ್ಲಿ ರಕ್ಷಣಾ ಕಾರ್ಯದರ್ಶಿ ಯಾಗಿ ನೇಮಕವಾದ ಮ್ಯಾಟಿಸ್, ಈ ಹಿಂದೆ ಅಮೆರಿಕ ನೌಕಾಪಡೆಯಲ್ಲಿ ಕಮಾಂಡರ್ ಆಗಿದ್ದರು. ನ್ಯಾಟೋದಲ್ಲೂ ಸೇವೆ ಸಲ್ಲಿಸಿದ್ದರು.
Comments are closed.