ಅಂತರಾಷ್ಟ್ರೀಯ

ಬ್ರೆಡ್‌, ಇಂಧನ ಬೆಲೆ ಏರಿಕೆ: ಎಂಟು ಜನ ಪ್ರತಿಭಟನಾಕಾರರು ಬಲಿ

Pinterest LinkedIn Tumblr


ಖಾರ್ಟೋನಮ್‌(ಸೂಡಾನ್‌): ಬ್ರೆಡ್‌ ಮತ್ತು ಇಂಧನ ದರ ಹೆಚ್ಚಳದಿಂದಾಗಿ ಉಂಟಾಗಿದ್ದ ಆಕ್ರೋಶಕ್ಕೆ ಸೂಡಾನ್‌ನಲ್ಲಿ ಎಂಟು ಜನರು ಬಲಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ಹೇಳಿದೆ.

ಗಡಾರಿಫ್‌ ನಗರದಲ್ಲಿ ಸದ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದ್ದು, ಪೊಲೀಸರೊಂದಿಗೆ ನಡೆದ ಜಗಳದಲ್ಲಿ ಆರು ಜನ ಮೃತಪಟ್ಟಿದ್ದರೆ, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದರಿಂದಾಗಿ ಇಬ್ಬರು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ.

ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಪ್ರತಿಭಟನಾಕಾರರು ಸೂಡಾನ್‌ ಪ್ರಧಾನಿ ಒಮರ್‌ ಅಲ್‌ ಬಷೀರ್‌ ಅವರ ಉಚ್ಛಾಟನೆಗೆ ಕರೆ ನೀಡಿದ್ದರು ಮತ್ತು ನ್ಯಾಷನಲ್‌ ಕಾಂಗ್ರೆಸ್‌ ಪಕ್ಷ(NCP)ದ ಕಚೇರಿಯನ್ನು ಸುಟ್ಟು ಹಾಕಿದ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ಒಂದು ವಾರಕ್ಕೂ ಮುನ್ನ ಸೂಡಾನ್‌ ಸರ್ಕಾರ ಬ್ರೆಡ್‌ ಬೆಲೆಯನ್ನು ಒಂದರಿಂದ ಮೂರು ಸೂಡಾನ್ ಪೌಂಡ್​ಗಳಿಗೆ ಏರಿಕೆ ಮಾಡಿತ್ತು. ಇದರೊಂದಿಗೆ ಇಂಧನ ಬೆಲೆಯಲ್ಲಿಯೂ ಎರಡು ಪಟ್ಟು ಏರಿಕೆ ಕಂಡಿದ್ದರಿಂದಾಗಿ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿತ್ತು.

Comments are closed.