ಮುಂಬೈ

ಆರು ವರ್ಷ ಪಾಕ್​ ಜೈಲು ಶಿಕ್ಷೆ: ಫೇಸ್​ಬುಕ್​ ಪ್ರೀತಿಯಲ್ಲಿ ಬೇಡ ಎಂದ ಇಂಜಿನಿಯರ್!

Pinterest LinkedIn Tumblr


ಮುಂಬೈ: ಸುಮಾರು ಆರು ವರ್ಷಗಳ ಕಾಲ ಪಾಕಿಸ್ತಾನ ಜೈಲಿನಲ್ಲಿ ಬಂಧಿಯಾಗಿದ್ದ ಭಾರತದ ಸಾಫ್ಟ್​ವೇರ್​ ಇಂಜಿನಿಯರ್​ ಯುವಕರಿಗೆ ಒಂದು ಸಲಹೆಯನ್ನು ನೀಡಿದ್ದು, ಫೇಸ್​ಬುಕ್​ ಮೂಲಕ ಪ್ರೀತಿಯಲ್ಲಿ ಬೀಳಬೇಡಿ ಎಂದು ಮನವಿ ಮಾಡಿದ್ದಾರೆ.

ಆರು ವರ್ಷಗಳ ಹಿಂದೆ ಹಮೀದ್​ ನಿಹಾಲ್​ ಅನ್ಸಾರಿ ಫೇಸ್​ಬುಕ್​ ಮೂಲಕ ಪಾಕಿಸ್ತಾನಿ ಮೂಲದ ಯುವತಿಯೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ಯುವತಿಯ ಮನೆಯವರು ಬಲವಂತವಾಗಿ ಮದುವೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಮದುವೆ ತಡೆಯಲು ಹೋದ ಅನ್ಸಾರಿ, ತನ್ನ ಪ್ರೇಯಸಿಯನ್ನು ಭೇಟಿ ಮಾಡುವ ಮುನ್ನವೇ ಪೊಲೀಸರ ವಶವಾಗಿ ಜೈಲು ಸೇರಿದ್ದರು.

ಆರು ವರ್ಷಗಳ ವನವಾಸದ ನಂತರ ನಿನ್ನೆಯಷ್ಟೇ ಮುಂಬೈ ಸಬರ್ಬನ್​ನಲ್ಲಿರುವ ತಮ್ಮ ಮನೆಗೆ ಮರಳಿದ ಅನ್ಸಾರಿ ಬಹಳ ಖುಷಿಯಲ್ಲಿದ್ದರು. ಇದೇ ವೇಳೆ ತಮಗಾದ ಅನುಭವವನ್ನು ಹೊರ ಹಾಕಿ ಯುವಕರಿಗೆ ಕಿವಿಮಾತು ಹೇಳಿದ್ದಾರೆ. ​

ನಿಮ್ಮ ಪೋಷಕರಿಂದ ಯಾವುದನ್ನು ಮುಚ್ಚಿಡಬೇಡಿ. ಸಂದಿಗ್ಧ ಪರಿಸ್ಥಿತಿಯಲ್ಲಿ ನಿಮ್ಮ ಪೋಷಕರು ಮಾತ್ರ ನಿಮ್ಮ ಬೆನ್ನ ಹಿಂದೆ ನಿಲ್ಲುತ್ತಾರೆ. ಬೇರೊಂದು ಸ್ಥಳಕ್ಕೆ ಹೋಗುವಾಗ ಯಾವುದೇ ಕಾನೂನುಬಾಹಿರ ಕ್ರಮವನ್ನು ಅನುಸರಿಸಬಾರದು ಎಂದು ಹೇಳಿದ್ದಾರೆ.

ಪ್ರೀತಿಯಲ್ಲಿ ಬೀಳುವ ಯುವಕರಿಗೆ ಯಾವ ಸಲಹೆ ನೀಡುತ್ತೀರ ಎಂಬ ಪ್ರಶ್ನೆಗೆ ಯಾರು ಪ್ರೀತಿಯಲ್ಲಿ ಬಿದ್ದು ತೊಂದರೆಯನ್ನು ತೆಗೆದುಕೊಳ್ಳಬಾರದು. ಅದರಲ್ಲೂ ಫೇಸ್​ಬುಕ್​ ನಂಬಿ ಪ್ರೀತಿ ಮಾಡಲೇಬೇಡಿ ಎಂದು ಹೇಳಿದ್ದಾರೆ.

2012ರಲ್ಲಿ ಅನ್ಸಾರಿ ಅವರು ಅಫ್ಘಾನಿಸ್ತಾನದ ಮುಖಾಂತರ ಪಾಕಿಸ್ತಾನವನ್ನು ಪ್ರವೇಶಿಸಿದ್ದರು ಎಂದು ಹೇಳಲಾಗಿದೆ. ಕಾನೂನು ಬಾಹಿರವಾಗಿ ಪ್ರವೇಶಿಸಿದ್ದಕ್ಕೆ ಆತನನ್ನು ಪಾಕ್​ ಪೊಲೀಸರು ಬಂಧಿಸಿದ್ದರು. ಮಂಗಳವಾರವಷ್ಟೇ ಅನ್ಸಾರಿಯವರನ್ನು ವಾಘ-ಅತ್ತಾರಿ ಗಡಿ ಭಾಗದಿಂದ ಭಾರತಕ್ಕೆ ಹಸ್ತಾಂತರಿಸಲಾಯಿತು.

Comments are closed.