ಅಂತರಾಷ್ಟ್ರೀಯ

ಅಮೆರಿಕಾದ 41ನೇ ಅಧ್ಯಕ್ಷ  ಜಾರ್ಜ್ ಬುಷ್ ನಿಧನ

Pinterest LinkedIn Tumblr


ಅಮೆರಿಕಾದ 41ನೇ ಅಧ್ಯಕ್ಷ ಜಾರ್ಜ್ ಎಚ್. ಡಬ್ಲ್ಯೂ ಬುಷ್ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಅಧ್ಯಕ್ಷ ತಮ್ಮ 94ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಜ್ ಬುಷ್ ಅವರನ್ನು 2018ರ ಏಪ್ರಿಲ್ ತಿಂಗಳಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಿನ್ನೆ ಶುಕ್ರವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಮಾಹಿತಿಯನ್ನು ಅವರ ಪುತ್ರ ಜಾರ್ಜ್ ಡಬ್ಲ್ಯೂ ಬುಷ್[ಅಮೆರಿಕಾದ 43ನೇ ಅಧ್ಯಕ್ಷ] ಖಚಿತಪಡಿಸಿದ್ದಾರೆ.

ಎರಡನೇ ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸಿದ್ದ ಬುಷ್, ಬಳಿಕ ಟೆಕ್ಸಾನ್‌ನ ತೈಲ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಆದರೆ 1964 ರಿಪಬ್ಲಿಕನ್ ಆಗಿ ರಾಜಕೀಯ ಪ್ರವೇಶಿಸಿದ್ದ ಅವರು 1989-1993ರ ಅವಧಿಯಲ್ಲಿ ಅಮೆರಿಕಾದ 41ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಅಧ್ಯಕ್ಷರಾಗುವುದಕ್ಕೂ ಮೊದಲು, ರೊನಾಲ್ಡ್ ರೇಗನ್‌ರವರ ಆಡಳಿತ ಅವಧಿಯಲ್ಲಿ ಉಪ ರಾಷ್ಟ್ರಪತಿ ಹಾಗೂ ಜೆರಾಲ್ಡ್ ಆರ್. ಫೋರ್ಡ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕೇಂದ್ರೀಯ ಗುಪ್ತಮಾಹಿತಿ ಸಂಸ್ಥೆಗಳ ನಿರ್ದೆಶಕ ಸ್ಥಾನ ಸೇರಿದಂತೆ ವಿವಿಧ ರಾಜಕೀಯ ಸ್ಥಾನಗಳನ್ನು ಇವರು ಸಮರ್ಥವಾಗಿ ನಿಭಾಯಿಸಿದ್ದಾರೆ.

ಅಧ್ಯಕ್ಷ ಜಾರ್ಜ್ ಎಚ್. ಡಬ್ಲ್ಯೂ ಬುಷ್ ಐವರು ಮಕ್ಕಳು, 17 ಮಂದಿ ಮೊಮ್ಮಕ್ಕಳು, ಎಂಟು ಮಂದಿ ಮರಿ ಮೊಮ್ಮಕ್ಕಳು ಹಾಗೂ ಓರ್ವ ತಂಗಿ ಹಾಗೂ ತಮ್ಮನನ್ನು ಅಗಲಿದ್ದಾರೆ. ಇವರ ಅಗಲುವಿಕೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Comments are closed.