ಅಂತರಾಷ್ಟ್ರೀಯ

ನ್ಯೂಯಾರ್ಕ್​​ನ ಶೌಚಾಲಯದಲ್ಲಿ ಹಿಂದೂ ದೇವರುಗಳ ಫೋಟೋ ಕಂಡ ಯುವತಿ ಮಾಡಿದ್ದೇನು ಗೊತ್ತೇ…?

Pinterest LinkedIn Tumblr

ಅಮೆರಿಕದ ಪಬ್​ವೊಂದರ ಶೌಚಾಲಯದಲ್ಲಿ ಹಿಂದೂ ದೇವರ ಚಿತ್ರ ಬಳಿಸಿರುವುದು ಕಂಡು ಬಂದಿದ್ದು, ಭಾರತೀಯ ಮೂಲದ ಯುವತಿ ಅಂಕಿತಾ ಮಿಶ್ರಾ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿ ಪಬ್​ ಮಾಲೀಕ ಕ್ಷಮೆ ಯಾಚಿಸುವಂತೆ ಮಾಡಿದ್ದಾರೆ.

ಇತ್ತೀಚೆಗೆ ನ್ಯೂಯಾರ್ಕ್​​ನ ಹೌಸ್ ಆಫ್ ಎಸ್ ಪಬ್​​ಗೆ ಅಂಕಿತಾ ಭೇಟಿ ನೀಡಿದ್ದರು. ಈ ವೇಳೆ ಶೌಚಾಯಲಯಕ್ಕೆ ತೆರಳಿದ ಸಂದರ್ಭದಲ್ಲಿ ಶಿವ, ಕೃಷ್ಣ, ಗಣೇಶ, ಕಾಳಿ, ರಾಧೆ ಫೋಟೋಗಳಿಂದ ಶೌಚಾಲಯದ ಗೋಡೆಗಳನ್ನು ಅಲಂಕರಿಸಿರುವುದು ಕಂಡು ಬಂದಿದೆ.

ಈ ಬಗ್ಗೆ ರೊಚ್ಚಿಗೆದ್ದ ಭಾರತೀಯ ಮೂಲದ ಯುವತಿ ಪಬ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ತಾಣದಲ್ಲಿ ಪೋಸ್ಟ್​ ಹಾಕಿದ್ದರು. ಹಿಂದೂ ಧರ್ಮೀಯರ ಭಾವನೆಗೆ ಧಕ್ಕೆಯಾಗುವಂತೆ ದೇವರುಗಳ ಚಿತ್ರಗಳಿಂದ ಶೌಚಾಲಯವನ್ನು ಅಲಂಕರಿಸಿದ್ದು, ಇದರಿಂದ ನಮ್ಮ ಸಂಸ್ಕೃತಿಗೆ ಅಪಮಾನವಾಗಿದೆ ಎಂದು ಅಂಕಿತಾ ತಿಳಿಸಿದ್ದರು. ಈ ಪೋಸ್ಟ್​ ವೈರಲ್ ಆಗುತ್ತಿದ್ದಂತೆ ವೆಬ್​ಸೈಟ್​ವೊಂದು ಈ ಕುರಿತು ವರದಿ ಪ್ರಕಟಿಸಿತ್ತು.

ಇದರಿಂದ ಎಚ್ಚೆತ್ತು ಕೊಂಡ ಪಬ್ ಮಾಲೀಕ ಕ್ಷಮೆಯಾಚಿಸಿದ್ದಲ್ಲದೆ, ಶೌಚಾಲಯದಿಂದ ಫೋಟೊಗಳನ್ನು ತೆಗೆಯುವುದಾಗಿ ಹೇಳಿದ್ದಾರೆ. ಹಾಗೆಯೇ ಎಲ್ಲ ಸಂಸ್ಕೃತಿಯನ್ನು ಗೌರವಿಸುವುದಾಗಿ ತಿಳಿಸಿ, ಗೋಡೆಯ ಅಲಂಕಾರವನ್ನು ಬದಲಿಸುವುದಾಗಿ ಅಂಕಿತಾ ಅವರಿಗೆ ಭರವಸೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಲಂಡನ್​ನಲ್ಲಿ ಬಿಯರ್​ ಬಾಟಲ್​ವೊಂದಕ್ಕೆ ಗಣೇಶ ದೇವರ ಹೆಸರನ್ನು ಹಾಕಿ ಕಂಪನಿಯೊಂದು ಮಾರಾಟ ಮಾಡಿದ್ದರು. ಈ ಬಗ್ಗೆ ವ್ಯಾಪಾಕ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಕಂಪನಿಯು ಕ್ಷಮೆಯಾಚಿಸಿ ಹೆಸರನ್ನು ಬದಲಿಸುವುದಾಗಿ ಹೇಳಿಕೊಂಡಿತ್ತು.

Comments are closed.