ಅಂತರಾಷ್ಟ್ರೀಯ

ವಿಮಾನ ಪತನದಲ್ಲಿ ಮೃತಪಟ್ಟ ಭಾವಿ ಪತಿಯ ಕೋರಿಕೆ ಇದಾಗಿತ್ತು

Pinterest LinkedIn Tumblr


ಇಂಡೋನೇಷ್ಯಾ: ಅಕ್ಟೋಬರ್​ 29 ರಂದು ಇಂಡೋನೇಷ್ಯಾ ರಾಜಧಾನಿಯಿಂದ ಪಾಂಗ್​ಕಲ್​ ಪಿನಾಗ್​ ದ್ವೀಪಕ್ಕೆ ಹೊರಟಿದ್ದ ಲಯನ್​ ಏರ್​ ಬೋಯಿಂಗ್​ 737 ವಿಮಾನ ಸಮುದ್ರದಲ್ಲಿ ಪತನಗೊಂಡು ಪ್ರಯಾಣಿಕರೆಲ್ಲರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿತ್ತು. ಯಾವುದೇ ಮೃತದೇಹಗಳು ಪತ್ತೆಯಾಗಿರಲಿಲ್ಲ.

ಈ ಅವಘಡದಲ್ಲಿ ಹೊಸ ಬಾಳಿಗೆ ಹೆಜ್ಜೆ ಇಡುವ ಸಂಭ್ರಮದಲ್ಲಿದ್ದ ಮಧುಮಗ ಕೂಡ ಬಲಿಯಾಗಿದ್ದ. ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು, ಹೊಸ ಜೀವನ ನಡೆಸಬೇಕಿದ್ದವರ ಬಾಳಲ್ಲಿ ಬಿರುಗಾಳಿ ಬೀಸಿತ್ತು.

ಜಕಾರ್ತಾದಲ್ಲಿ ಕಾನ್ಫೆರೆನ್ಸ್​ ನಲ್ಲಿ ಭಾಗವಹಿಸಲು ಹೊರಟಿದ್ದ ರಿಯೋ ನಂದಾ ಪ್ರತಮ ವಾಪಸ್​ ಬರಲೇ ಇಲ್ಲ. ಇಂಡೋನೇಷ್ಯಾದಲ್ಲಿ ರಿಯೋನ ಭಾವಿ ಹೆಂಡತಿ ಇಂಟನ್​ ಸೈರಿ ಕಾಯುತ್ತಾ ಕುಳಿತಿದ್ದಳು. ವಿಷಯ ತಿಳಿದ ತಕ್ಷಣ ಆಕೆಗೆ ಬರಸಿಡಿಲು ಬಡಿದಂತಾಗಿತ್ತು.

ನವೆಂಬರ್​ 11 ರಂದು ರಿಯೋ ಮತ್ತು ಇಂಟನ್​ ದಾಂಪತ್ಯ ಜೀವನಕ್ಕೆ ಕಾಲಿರಿಸಬೇಕಿತ್ತು. ಆದರೆ ಅಕ್ಟೋಬರ್​ 29 ರಂದೇ ರಿಯೋ ಬಾರದ ಲೋಕಕ್ಕೆ ಹೋಗಿದ್ದ.

ರಿಯೋ ಜಕಾರ್ತಾಗೆ ಹೋಗುವ ಮುನ್ನ ಇಂಟನ್​ಗೆ ತಮಾಷೆ ಮಾಡುತ್ತಾ, ” ನಾನು ಜಕಾರ್ತಾದಿಂದ ಕಾನ್ಫೆರೆನ್ಸ್ ಮುಗಿಸಿ ಮದುವೆಗೆ ಬರಲಿಲ್ಲವೆಂದಾದರೂ ನೀನು ಮಧುಮಗಳಂತೆ ಸಿಂಗಾರಕೊಳ್ಳಬೇಕು. ನಾನು ಮದುವೆಗೆಂದು ಕೊಡಿಸಿರುವ ಶುಭ್ರ ಶ್ವೇತ ಉಡುಗೆಯನ್ನೇ ತೊಡಬೇಕು. ಸುಂದರವಾಗಿ ಸಿಂಗಾರಗೊಳ್ಳಬೇಕು. ಕೈಯಲ್ಲಿ ಶುಭ್ರ ಬಿಳಿ ಗುಲಾಬಿ ಇರಬೇಕು” ಎಂದು ಹೇಳಿದ್ದ.

ಈಗ ಇಂಟನ್​ ರಿಯೋ ಹೇಳಿದ್ದ ಮಾತನ್ನು ಉಳಿಸಿಕೊಳ್ಳಲು, ಆತನ ಕೋರಿಕೆ ನೆರವೇರಿಸಲು ರಿಯೋ ಕೊಡಿಸಿದ್ದ ಮದುವೆಯ ಉಡುಗೆಯನ್ನು ತೊಟ್ಟು, ಸುಂದರವಾಗಿ ಸಿಂಗಾರಗೊಂಡು, ಕೈಯಲ್ಲಿ ಬಿಳಿ ಗುಲಾಬಿ ಹಿಡಿದು ಫೋಟೋ ಶೂಟ್​ ಮಾಡಿಸಿದ್ದಾಳೆ. ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಶೇರ್​ ಮಾಡಿ, ರಿಯೋ ಹೇಳಿದ್ದ ಮಾತುಗಳನ್ನು ಬರೆದುಕೊಂಡಿದ್ದಾಳೆ.

Comments are closed.