ರಾಷ್ಟ್ರೀಯ

20 ವರ್ಷಗಳಲ್ಲಿ ಮೂರರಷ್ಟು ಹುಲಿಗಳ ಸಂಖ್ಯೆ ಹೆಚ್ಚಳ!

Pinterest LinkedIn Tumblr


ನವದೆಹಲಿ: ಮುಂದಿನ 20 ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಮೂರರಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧ್ಯಯನ ವರದಿಯೊಂದ ಹೇಳಿದೆ. ಜೊತೆಗೆ ಏಷ್ಯಾದಲ್ಲಿ ಸ್ಥಾಪಿಸಲಾಗಿರುವ 18 ‘ಹುಲಿ ಪುನಶ್ಚೇತನ ಕ್ಷೇತ್ರ’ಗಳು ಕೂಡ ಈಗಿನ ಸಂಖ್ಯೆಗಿಂತ ಇನ್ನೂ ಮೂರರಷ್ಟು ಹುಲಿಗಳನ್ನು ಪೋಷಿಸುವ ಸಾಮರ್ಥ್ಯ ಹೊಂದಿವೆ ಎಂದು ಹೇಳಲಾಗುತ್ತಿದೆ.

ಭಾರತ ಸೇರಿದಂತೆ ಏಷ್ಯಾದಲ್ಲಿನ 10ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಹುಲಿ ಪುಶ್ಚೇತನ ಕ್ಷೇತ್ರಗಳನ್ನು ಸ್ಥಾಪಿಸಲಾಗಿದೆ. ವಿಶ್ವ ವನ್ಯಜೀವಿ ಮಂಡಳಿ ಜಾಗತಿಕ ಹುಲಿ ಸಂರಕ್ಷಣಾ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಹುಲಿಗಳ ಸಂಖ್ಯೆಯನ್ನು ಮೂರರಷ್ಟು ಮಾಡಲು ಹೊರಟಿದೆ. ಹೀಗಾಗಿ ಈ ಕ್ಷೇತ್ರಗಳ ಮೂಲಕವೇ ಹುಲಿಗಳನ್ನು ಪೋಷಿಸಲು ವಿಶ್ವ ವನ್ಯಜೀವಿ ಮಂಡಳಿ ನಿರ್ಧರಿಸಿದೆ ಎನ್ನಲಾಗಿದೆ.

ಈ ಕ್ಷೇತ್ರಗಳಲ್ಲಿ ಇರುವ ಪ್ರಸ್ತುತ ಹುಲಿಗಳ ಸಂಖ್ಯೆ, ಬಲಿ ಪ್ರಾಣಿಗಳ ಲಭ್ಯತೆ ಸೇರಿದಂತೆ ಬೇಟೆ ತಡೆ ಕ್ರಮಗಳ ಬಗ್ಗೆ ಅಧ್ಯಯನವೊಂದನ್ನು ನಡೆಸಲಾಗಿದೆ. ಅಧ್ಯಯನ ತಂಡದಲ್ಲಿ 10 ರಾಷ್ಟ್ರಗಳ 49 ಪರಿಣಿತರಿದ್ದು, ಹುಲಿಗಳ ಸಾಮರ್ಥ್ಯದ ಬಗ್ಗೆ ಅಂದಾಜು ಮಾಡಿದ್ದಾರೆ ಎನ್ನುತ್ತಿವೆ ಮೂಲಗಳು.

ಇನ್ನು 18 ಪುನಶ್ಚೇತನ ಕ್ಷೇತ್ರಗಳಲ್ಲಿ ಎಲ್ಲವೂ ಭಿನ್ನವಾಗಿವೆ. ಪ್ರತಿಯೊಂದು ಕ್ಷೇತ್ರದ ಭೌಗೋಳಿಕತೆ, ಬಲಿ ಪ್ರಾಣಿಗಳ ಲಭ್ಯತೆ ಜೊತೆಗೆ ಜೀವವೈವಿದ್ಯವು ಕೂಡ ಬೇರೆಯದೆ ಪ್ರಪಂಚವನ್ನು ಹೋಲುತ್ತದೆ. ಈ ಕಾರಣದಿಂದಾಗಿ ಪ್ರತಿ ಕ್ಷೇತ್ರಕ್ಕೂ ಪ್ರತ್ಯೇಕವಾದ ಪುನಶ್ಚೇತನ ಯೋಜನೆ ರೂಪಿಸಬೇಕಾಗುತ್ತದೆ ಎಂದು ಅಧ್ಯಯನ ತಂಡವು ತಿಳಿಸಿದೆ

Comments are closed.