ಅಂತರಾಷ್ಟ್ರೀಯ

ತಮ್ಮ ಶಾಲೆಯ ಸಹಪಾಠಿಗಳನ್ನು ಕೊಂದು, ರಕ್ತ ಕುಡಿದು, ಮಾಂಸ ತಿನ್ನಲು ಸಂಚು ಹೂಡಿದ್ದ ಇಬ್ಬರು ವಿದ್ಯಾರ್ಥಿನಿಯರು ! ಮುಂದೆ ಏನಾಯಿತು ನೋಡಿ….

Pinterest LinkedIn Tumblr

ಬರ್ಟೋ(ಫ್ಲೋರಿಡಾ): ತಮ್ಮ ಶಾಲೆಯ ಸಹಪಾಠಿಗಳನ್ನು ಕೊಂದು ಅವರ ರಕ್ತ ಕುಡಿದು, ಮಾಂಸ ತಿನ್ನಲು ಇಬ್ಬರು ಪ್ರೌಢ ಶಾಲೆ ವಿದ್ಯಾರ್ಥಿನಿಯರು ಪ್ಲಾನ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ಸಹಪಾಠಿಗಳನ್ನು ಕೊಲ್ಲುವ ಸಲುವಾಗಿ 11 ಮತ್ತು 12 ವರ್ಷದ ವಿದ್ಯಾರ್ಥಿನಿಯರು ಚಾಕುಗಳನ್ನು ತೆಗೆದು ಕೊಂಡು ಬಂದಿದ್ದಾಗಿ ಪೊಲೀಸರು ಹೇಳಿದ್ದಾರೆ, ವಿದ್ಯಾರ್ಥಿನಿಯರನ್ನು ಬಂಧಿಸಿರುವ ಪೊಲೀಸರು ಅವರಿಂದ ಚಾಕುಗಳನ್ನು ವಶ ಪಡಿಸಿಕೊಂಡಿದ್ದಾರೆ. ಅದೃಷ್ಟ ವಶಾತ್ ಯಾರೊಬ್ಬರಿಗೂ ಗಾಯವಾಗಿಲ್ಲ.

ವಿದ್ಯಾರ್ಥಿನಿಯರಿಬ್ಬರ ಬಳಿ ಇದ್ದ ಚಾಕುವನ್ನು ಮೊದಲು ವಶ ಪಡಿಸಿಕೊಳ್ಳಲಾಗಿದೆ, ವಿದ್ಯಾರ್ಥಿನಿಯರನ್ನು ಬಾಲಾಪರಾಧಿಗಳೋ ಅಥವಾ ವಯಸ್ಕರೋ ಎಂದು ವಿಚಾರಣೆಯಲ್ಲಿ ನಿರ್ಧರಿಸಲಾಗುವುದು.

ಇಬ್ಬರು ವಿದ್ಯಾರ್ಥಿನಿಯರು ಶಾಲೆಯ ಬಾತ್ ರೂಮ್ ನಲ್ಲಿ ಅಡಗಿ ಕುಳಿತುಕೊಂಡು ಒಳಗೆ ಬರುವ ಸಣ್ಣ ವಯಸ್ಸಿನ ವಿದ್ಯಾರ್ಥಿಗಳನ್ನು ಕೊಲ್ಲಲು ಪ್ಲಾನ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ, ಸಹಪಾಠಿಗಳ ಕತ್ತನ್ನು ಸೀಳಿ ರಕ್ತ ಕುಡಿದು, ಮಾಂಸ ತಿನ್ನಲು ಬಯಸಿದ್ದ ವಿದ್ಯಾರ್ಥಿಗಳು ನಂತರ ತಮಗೆ ತಾವೇ ಚಾಕು ತಿವಿದುಕೊಂಡು ಸಾಯಲು ಬಯಸಿದ್ದರು.

ಸುಮಾರು 15 ರಿಂದ 25 ವಿದ್ಯಾರ್ಥಿಗಳನ್ನು ಕೊಲ್ಲುವ ಉದ್ದೇಶದಿಂದ ಚಾಕು ತಂದಿದ್ದರು, ಇದಾದ ನಂತರ ತಾವು ಮಾಡಿದ ಪಾಪಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ನರಕಕ್ಕೆ ಹೋಗಲು ತಯಾರಿ ನಡೆಸಿದ್ದರು ಎಂದು ಹೇಳಲಾಗಿದೆ. ವೀಕ್ ಎಂಡ್ ಗಳಲ್ಲಿ ನೋಡುತ್ತಿದ್ದ ಭಯಾನಕ ಸಿನಿಮಾಗಳಿಂದ ಪ್ರೇರೇಪಿತರಾಗಿ ಈ ಯೋಜನೆ ರೂಪಿಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಈ ಇಬ್ಬರು ವಿದ್ಯಾರ್ಥಿನಿಯರು ಮಂಗಳವಾರ ತರಗತಿಯಲ್ಲಿ ಕಾಣಿಸದ ಕಾರಣ, ಶಾಲಾ ಸಿಬ್ಬಂದಿ ಅವರನ್ನು ಹುಡುಕಾಡಿದಾಗ ಇಬ್ಬರು ಬಾತ್ ರೂಮ್ ನಲ್ಲಿ ಸಿಕ್ಕಿ ಬಿದ್ದಿದ್ದಾರೆ. ಅವರ ಬಳಿಯಿದ್ದ ಚಾಕು ಹಾಗೂ ಪಿಜ್ಜಾ ಕಟ್ಟರ್ ವಶ ಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.