ಅಂತರಾಷ್ಟ್ರೀಯ

ವಾಟ್ಸಪ್‌ನಲ್ಲಿ ಮತ್ತೊಂದು ಹೊಸ ಫೀಚರ್‌!

Pinterest LinkedIn Tumblr


ಫೇಸ್ಬುಕ್‌ ಒಡೆತನದ ಸಾಮಜಿಕ ಜಾಲತಾಣ ದೈತ್ಯ ವಾಟ್ಸಪ್‌ ಅಪ್ಡೇಟ್‌ ಆಗಿದ್ದು, ಇನ್ನು ಮುಂದೆ ಗ್ರೂಪ್‌ ಆಡಿಯೋ ಹಾಗೂ ವಿಡಿಯೋ ಕಾಲ್‌ ಸೌಲಭ್ಯ ಪಡೆದುಕೊಳ್ಳಬಹುದು.

ಈ ಅಪ್ಡೇಟ್‌ ಐಒಎಸ್‌ ಹಾಗೂ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯ ಇದ್ದು, ಏಕ ಕಾಲದಲ್ಲಿ ನಾಲ್ಕು ಮಂದಿಗೆ ಅಡಿಯೋ ಅಥವಾ ವಿಡಿಯೋ ಕರೆ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ಮೊದಲಿಗೆ ಮೆಸೇಜಿಂಗ್ ಆ‌ಪ್ ಆಗಿದ್ದ ವಾಟ್ಸಪ್‌ ಬಳಿಕ ಕಾಲ್‌ ಫೀಚರ್‌ ಅನ್ನು ಪರಿಚಯಿಸಿತ್ತು. ಬಳಿಕ ವಿಡಿಯೋ ಕಾಲ್‌ ಸೌಲಭ್ಯವನ್ನೂ ನೀಡಿತ್ತು. ಈಗ ಬಳಕೆದಾರರು ಗ್ರೂಪ್‌ ಕಾಲ್ ಸೌಲಭ್ಯವನ್ನೂ ಪಡೆದುಕೊಳ್ಳಬಹುದು.

ಕಳೆದೆರಡು ವರ್ಷಗಳಿಂದ ಜನರು ವಾಟ್ಸಪ್‌ನಲ್ಲಿ ಆಡಿಯೋ ಹಾಗೂ ವಿಡಿಯೋ ಕಾಲ್‌ ಮಾಡುವ ಸೌಲಭ್ಯವನ್ನು ಆನಂದಿಸುತ್ತಿದ್ದರು. ನಮ್ಮ ಬಳಕೆದಾರರು ದಿನಕ್ಕೆ ಎರಡು ಬಿಲಿಯನ್‌ಗೂ ಅಧಿಕ ನಿಮಿಷವನ್ನು ಕಾಲ್‌ ಚಾಟಿಂಗ್‌ನಲ್ಲಿ ಕಳೆದಿದ್ದಾರೆ. ಇವತ್ತಿನಿಂದ ವಾಟ್ಸಪ್‌ ಗ್ರೂಪ್‌ ಕಾಲ್ ಸೌಲಭ್ಯವನ್ನೂ ಪರಿಚಯಿಸುತ್ತಿದೆ ಎಂದು ತಿಳಿಸಲು ಸಂತೋಷ ಪಡುತ್ತೇವೆ ಎಂದು ವಾಟ್ಸಪ್‌ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದೆ.

ಗ್ರೂಪ್‌ ಕಾಲ್‌ ಮಾಡಲು ಮೊದಲಿನಂತೆ ಕಾಲ್‌ ಬಟನ್‌ ಕ್ಲಿಕ್‌ ಮಾಡಿ ಬಳಿಕ ಬಲಭಾಗದಲ್ಲಿ ಕಾಣುವ add participant ಬಟನ್‌ ಒತ್ತಿ ಇತರರನ್ನು ಕಾಲ್‌ಗೆ ಸೇರಿಸಬಹುದು. ವಾಟ್ಸಪ್‌ ಗ್ರೂಪ್‌ ಕಾಲ್‌ ಫೀಚರ್‌ ಕೂಡ ಎಂಡ್‌ ಟು ಎಂಡ್ ಡಿಸ್ಕ್ರಿಪ್ಷನ್‌ ಸೆಕ್ಯೂರಿಟಿ ಹೊಂದಿದ್ದು, ಜಗತ್ತಿನ ಎಲ್ಲಾ ನೆಟ್‌ವರ್ಕ್‌‌ಗಳಲ್ಲೂ ವಿಶ್ವಾಸಾರ್ಹವಾಗಿ ಕಾರ್ಯ ನಿರ್ವಹಿಸಲು ಇದು ಸಹಕಾರಿಯಾಗಲಿದೆ. ಈ ಫೀಚರ್‌ ಈಗಾಗಲೇ ಐಫೋನ್‌ ಹಾಗೂ ಆಂಡ್ರಾಯ್ಡ್ ಆವೃತ್ತಿಯಲ್ಲಿ ಚಾಲ್ತಿಯಲ್ಲಿದೆ ಎಂದು ವಾಟ್ಸಪ್‌ ತಿಳಿಸಿದೆ.

ಸದ್ಯ ಈ ಹೊಸ ಫೀಚರ್‌ ಆಂಡ್ರಾಯ್ಡ್‌ ಬೀಟಾ ವರ್ಶನ್‌ 2.18.216 ನಲ್ಲಿ ಲಭ್ಯವಿದ್ದು, ಬಳಕೆದಾರರಿಗೆ ಇನ್ನೊಬ್ಬರನ್ನು ಮ್ಯೂಟ್‌ ಮಾಡುವ ಸೌಲಭ್ಯ ಕೂಡ ಕಲ್ಪಿಸಲಾಗಿದೆ ಎಂದು WABetaInfo ವರದಿ ಮಾಡಿದೆ.

Comments are closed.