ಅಂತರಾಷ್ಟ್ರೀಯ

ಮಳೆಯಲ್ಲಿ ಕಿಸ್ಸಿಂಗ್ ಮಾಡುತ್ತಿದ್ದ ಜೋಡಿಯ ಫೋಟೋ ತೆಗೆದು ಕೆಲಸ ಕಳೆದುಕೊಂಡ ಫೋಟೋಗ್ರಾಫರ್ !

Pinterest LinkedIn Tumblr

ಢಾಕಾ: ಜಿಟಿ ಜಿಟಿ ಮಳೆಯಲ್ಲಿ ಜೋಡಿಯೊಂದು ಕಿಸ್ಸಿಂಗ್ ನಲ್ಲಿ ಮಗ್ನವಾದ ದೃಶ್ಯವನ್ನು ಫೋಟೋಗ್ರಾಫರ್ ಒಬ್ಬ ಕ್ಲಿಕ್ಕಿಸಿದ್ದು ಇದರಿಂದ ಆತ ತನ್ನ ಕೆಲಸವನ್ನೇ ಕಳೆದುಕೊಂಡಿದ್ದಾನೆ.

ಢಾಕಾ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಮೆಟ್ಟಿಲ ಮೇಲೆ ಕುಳಿತು ಜೋಡಿಯೊಂದು ಕಿಸ್ಸಿಂಗ್ ಮಾಡಿದೆ. ಇದನ್ನು ಬಾಂಗ್ಲಾದ ಪ್ರಸಿದ್ಧ ಫೋಟೋಗ್ರಾಫರ್ ಜಿಬೋನ್ ಅಹ್ಮದ್ ಎಂಬುವರು ತನ್ನ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿ ಸಾಂಗ್ಸ್ ಆಫ್ ರೈನ್ಸ್-ಲೆಟ್ ಲವ್ ಬಿ ಫ್ರೀ ಎಂಬ ಶೀರ್ಷಿಕೆ ನೀಡಿ ನ್ಯೂಸ್ ಪೋರ್ಟಲ್ ನಲ್ಲಿ ಬಳಸಲಾಗಿತ್ತು.

ಈ ಕಿಸ್ಸಿಂಗ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಕುರಿತು ಟೀಕೆ ಟಿಪ್ಪಣಿಗಳು ವ್ಯಕ್ತವಾಗಿತ್ತು. ಇದರಿಂದ ನ್ಯೂಸ್ ಪೋರ್ಟಲ್ ಇದೊಂದು ಪೂರ್ವ ನಿರ್ಧರಿತ ಫೋಟೋ ಆಗಿದ್ದು ಫೋಟೋಗ್ರಾಫರ್ ಕ್ಷಮೆ ಕೇಳಿದ್ದಾರೆ. ಅಲ್ಲದೇ ಫೋಟೋಗ್ರಾಫರ್ ರನ್ನು ಸೇವೆಯಿಂದ ತೆಗೆದುಹಾಕಲಾಗಿದೆ.

ಇನ್ನು ತಾವು ತೆಗೆದ ಫೋಟೋ ಕುರಿತಂತೆ ಪ್ರತಿಕ್ರಿಯಿಸಿರುವ ಜಿಬೋನ್ ಅಹ್ಮದ್ ಈ ಫೋಟೋ ಸತ್ಯ-ಮಿಥ್ಯಗಳ ಕಥೆಯನ್ನು ಹುಟ್ಟು ಹಾಕುತ್ತದೆ ಎಂದು ನಾನು ಊಹೆ ಮಾಡಿರಲಿಲ್ಲ. ಅಲ್ಲದೇ ಈ ಕಿಸ್ಸಿಂಗ್ ಫೋಟೋವನ್ನು ಇತರ ಫೋಟೋಗ್ರಾಫರ್ ಗಳು ಕೂಡ ಕ್ಲಿಕ್ಕಿಸಿದ್ದಾರೆ ಎಂದು ಅಹ್ಮದ್ ಹೇಳಿದ್ದಾರೆ.

ಕಿಸ್ಸಿಂಗ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರು ಈ ಬಗ್ಗೆ ಜೋಡಿ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Comments are closed.