ರಾಷ್ಟ್ರೀಯ

ಆಧಾರ್ ಗೆ ಜೋಡಣೆಯಾಗಿರುವ ಡಾಟಾ ದುರ್ಬಳಕೆಯನ್ನು ಸುಲಭವಾಗಿ ತಡೆಗಟ್ಟುವ ವಿಧಾನದ ಇಲ್ಲಿದೆ….

Pinterest LinkedIn Tumblr

ಚೆನ್ನೈ: ಆಧಾರ್ ವಿವರಗಳನ್ನು ಬಹಿರಂಗಪಡಿಸಿ ಹ್ಯಾಕರ್ಸ್ ಗಳಿಗೆ ಸವಾಲೆಸೆಯಲು ಹೋಗಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅಧ್ಯಕ್ಷ ಆರ್.ಎಸ್.ಶರ್ಮಾ ಅವರು ಪೇಚಿಗೆ ಸಿಲುಕಿದ ಘಟನೆ ದೇಶಾದ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ಹಾಟ್ ಟಾಪಿಕ್.

ಈ ಘಟನೆ ನಡೆದಾಗಿನಿಂದಲೂ ನಮ್ಮ ಆಧಾರ್ ಕಾರ್ಡ್ ದುರ್ಬಳಕೆಯಾಗಿದೆಯೇ ಎಂಬ ಆತಂತ ಜನಸಾಮಾನ್ಯರಲ್ಲಿ ಕಾಡುವುದು ಸಹಜ. ಈ ಹಿನ್ನೆಲೆಯಲ್ಲಿ ಯುಐಡಿಎಐ ಸಾರ್ವನಿಕರಿಗಾಗಿಯೇ ಸೌಲಭ್ಯವೊಂದನ್ನು ಪ್ರಾರಂಭಿಸಿದ್ದು, ಡಾಟಾ ದುರ್ಬಳಕೆಯನ್ನು ಸುಲಭವಾಗಿ ತಡೆಗಟ್ಟುವ ವಿಧಾನದ ಬಗ್ಗೆ ಮಾಹಿತಿ ಇದೆ.

ಆಧಾರ್ ವೆಬ್ ಸೈಟ್ ನಲ್ಲಿ ಆಧಾರ್ ದೃಢೀಕರಣ ಹಿಸ್ಟರಿ (Aadhaar authentication history) ಆಯ್ಕೆಯ ಮೂಲಕ ಆಧಾರ್ ಕಾರ್ಡ್ ದುರ್ಬಳಕೆಯ ಬಗ್ಗೆ ನಿಗಾ ವಹಿಸಬಹುದಾಗಿದೆ. ಯಾವುದೇ ಸೌಲಭ್ಯವನ್ನು ಪಡೆಯಬೇಕಾದರೆ ಆಧಾರ್ ನ್ನು ಬಳಕೆ ಮಾಡಿರುವ ಅಂಕಿ-ಅಂಶಗಳನ್ನು ಸಂಪೂರ್ಣವಾಗಿ ಯುಐಡಿಎಐ ನೋಂದಣಿ ಮಾಡಿಕೊಳ್ಳುತ್ತದೆ.

ಬಳಕೆದಾರರ ಮೊಬೈಲ್ ಗೆ ಒಪಿಟಿ ಪರಿಶೀಲನೆಗೊಂಡ ನಂತರವಷ್ಟೇ ಆಧಾರ್ ಹಿಸ್ಟರಿಯನ್ನು ನೋಡಬಹುದಾಗಿದ್ದು, ಯಾವುದೇ ಸಮಯದಲ್ಲಿ ಅನಪೇಕ್ಷಿತ ಆಧಾರ್ ದೃಢೀಕರಣಕ್ಕೆ ಮನವಿ ಬಂದಿದೆಯೇ ಎಂಬುದನ್ನು ಪರಿಶೀಲನೆ ಮಾಡಬಹುದಾಗಿದೆ. ಆದರೆ ಕೇವಲ 6 ತಿಂಗಳ ಅವಧಿಯ ಅಂಕಿ-ಅಂಶಗಳು ಮಾತ್ರ ಇದರಲ್ಲಿ ಲಭ್ಯವಿರಲಿದೆ.

Comments are closed.