ಕರಾವಳಿ

ಮಂಗಳೂರು ಸೆಂಟ್ರಲ್ ಎಸಿಪಿ ಉದಯ ನಾಯಕ್‌ರಿಗೆ ಎಸ್‌ಪಿಯಾಗಿ ಭಡ್ತಿ

Pinterest LinkedIn Tumblr

ಮಂಗಳೂರು, ಜುಲೈ .30: ಮಂಗಳೂರು ನಗರ ಪೊಲೀಸ್ ಆಯುಕ್ತಾಲಯದ ಕೇಂದ್ರ ವಲಯದ ಸಹಾಯಕ ಪೊಲೀಸ್ (ಎಸಿಪಿ) ಆಯುಕ್ತ ಉದಯ ನಾಯಕ್ ಅವರಿಗೆ ನಾನ್‌ ಐಪಿಎಸ್ ಎಸ್ಪಿಯಾಗಿ ಭಡ್ತಿ ನೀಡಿ ಸರಕಾರ ಆದೇಶ ಹೊರಡಿಸಿದೆ.

ಮಂಗಳೂರು ವೃತ್ತದ ಗುಪ್ತಚರ ವಿಭಾಗದ ಪೊಲೀಸ್ ಅಧೀಕ್ಷಕರಾಗಿ ನೇಮಕಗೊಂಡಿರುವುದಾಗಿ ತಿಳಿದು ಬಂದಿದೆ. ಉದಯ ನಾಯಕ್ ಈ ಹಿಂದೆ ಉಳ್ಳಾಲ ಮತ್ತು ಮಂಗಳೂರಿನಲ್ಲಿ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ ಮಂಗಳೂರಿನಲ್ಲಿ ಸಂಚಾರ ವಿಭಾಗದ ಸಹಾಯಕ (ಎಸಿಪಿ) ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ.

Comments are closed.