ಅಂತರಾಷ್ಟ್ರೀಯ

ಆಟೋದಲ್ಲೇ ಚಾಲಕನಿಂದ ಹಸ್ತಮೈಥುನ ! ವೀಡಿಯೊ ಮಾಡಿ ಫೇಸ್‌ಬುಕ್‌ಗೆ ಹಾಕಿದ ಯುವತಿ

Pinterest LinkedIn Tumblr

ಆಟೋ ರಿಕ್ಷಾದಲ್ಲಿ ಚಾಲಕ ಹಸ್ತಮೈಥುನ ಮಾಡಿಕೊಳ್ಳುತ್ತಿರುವ ವಿಡಿಯೋವನ್ನು ಪಾಕಿಸ್ತಾನದ ಮಹಿಳೆಯೊಬ್ಬರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಾಕಿಕೊಂಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ.

ಕೆಲ ವಾರಗಳ ಹಿಂದೆ ಈ 24 ವರ್ಷದ ಶಹತಾಜ್ ಖಾದಿರ್ ಆಟೋದಲ್ಲಿ ಹೋಗುತ್ತಿದ್ದಾಗ ಚಾಲಕ ಚಾಲನೆ ವೇಳೆ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದು ಇದನ್ನು ಆಕೆ ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾಳೆ. ನಂತರ ಚಾಲಕನಿಗೆ ಆಟೋವನ್ನು ಪೊಲೀಸ್ ಠಾಣೆ ಹತ್ತಿರ ನಿಲ್ಲಿಸುವಂತೆ ಹೇಳಿದ್ದು ಇದಕ್ಕೆ ಚಾಲಕ ಆಕೆಯನ್ನು ಆಟೋದಿಂದ ಕೆಳಗೆ ಇಳಿಸಿ ಹಲ್ಲೆ ನಡೆಸಿ ಪರಾರಿ ಆಗಿದ್ದಾನಂತೆ.

ಶಹತಾಜ್ ಪೋಸ್ಟ್ ಕುರಿತಂತೆ ಕೆಲವರು ಈ ಬಗ್ಗೆ ದೂರು ನೀಡುವಂತೆ ಆಕೆಗೆ ಸಂದೇಶ ಕಳುಹಿಸಿದ್ದಾರೆ. ಆಟೋ ರಿಕ್ಷಾದ ನಂಬರ್ ತೆಗೆದುಕೊಳ್ಳಲು ವಿಫಲವಾಗಿದ್ದರಿಂದ ಪೊಲೀಸರಿಗೆ ದೂರು ನೀಡಲು ಸಾಧ್ಯವಾಗಲಿಲ್ಲ.

ಇದಕ್ಕೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದು ಯುವತಿಯನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಿಳೆಯರು ಹೆಚ್ಚಿಗೆ ಆಕೆಯನ್ನು ಬೆಂಬಲಿಸಿದ್ದರೆ ಇತ್ತ ಪುರುಷರು ಆಕೆಯದ್ದು ತಪ್ಪು ಎಂದು ವಾದಿಸಿದ್ದಾರೆ. ಆಟೋ ಚಾಲಕ ತನಗೆ ಅಲ್ಲಿ ನೆವೆ ಆಗಿರಬಹುದು ಅದಕ್ಕೆ ಆತ ಕೆರೆದುಕೊಳ್ಳುತ್ತಿರಬಹುದು ಇದನ್ನೇ ಆಕೆ ತಪ್ಪಾಗಿ ಅರ್ಥೈಸಿಕೊಂಡಿರಬಹುದು ಎಂದು ಸಂದೇಶಗಳನ್ನು ರವಾನಿಸುತ್ತಿದ್ದಾರೆ.

ಆಟೋ ಚಾಲಕ ಯಾರು, ಈ ಘಟನೆ ನಡೆದಿದ್ದು ಎಲ್ಲಿ, ಯಾವಾಗ ಎಂಬ ಯಾವ ಅಂಶವು ತಿಳಿದುಬಂದಿಲ್ಲ. ಸದ್ಯ ವಿಡಿಯೋವನ್ನು ಮುಂದಿಟ್ಟುಕೊಂಡು ವರದಿ ಮಾಡಲಾಗಿದೆ.

Comments are closed.