ರಾಷ್ಟ್ರೀಯ

ಸುಷ್ಮಾ ಸ್ವರಾಜ್ ಕನಸಿನ ಪಾಸ್ಪೋರ್ಟ್ ಸೇವಾ ಮೊಬೈಲ್ ಆಪ್ ಗೆ ಭಾರಿ ಜನ ಬೆಂಬಲ: ಕೇವಲ 2 ದಿನಗಳಲ್ಲಿ 1 ಮಿಲಿಯನ್ ಜನರು ಡೌನ್ಲೋಡ್

Pinterest LinkedIn Tumblr

ನವದೆಹಲಿ: ವಿದೇಶಾಂಗ ಇಲಾಖೆಯ ಸಚಿವೆ ಸುಷ್ಮಾ ಸ್ವರಾಜ್ ಕನಸಿನ ಪಾಸ್ಪೋರ್ಟ್ ಸೇವಾ ಮೊಬೈಲ್ ಆಪ್ ಗೆ ಭಾರಿ ಜನಬೆಂಬಲ ವ್ಯಕ್ತವಾಗಿದ್ದು ಕೇವಲ 2 ದಿನಗಳಲ್ಲಿ 1 ಮಿಲಿಯನ್ ಜನರು ಡೌನ್ಲೋಡ್ ಮಾಡಿದ್ದಾರೆ.

ಈ ಅಂಶವನ್ನು ಸ್ವತಃ ಸುಷ್ಮಾ ಸ್ವರಾಜ್ ಟ್ವಿಟರ್ ನಲ್ಲಿ ಬಹಿರಂಗಪಡಿಸಿದ್ದಾರೆ. ದೇಶದ ಯಾವುದೇ ಮೂಲೆಯಿಂದಲೂ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಲು ನೆರವಾಗುವುದಕ್ಕೆ ಈ ಆಪ್ ನ್ನು ತಯಾರಿಸಲಾಗಿತ್ತು. ಜೂ.27 ರಂದು 6 ನೇ ಪಾಸ್ಪೋರ್ಟ್ ಸೇವಾ ದಿವಸ್ ಕಾರ್ಯಕ್ರಮದ ಅಂಗವಾಗಿ ಈ ಆಪ್ ನ್ನು ಲೋಕಾರ್ಪಣೆಗೊಳಿಸಲಾಗಿತ್ತು.

ಆಂಡ್ರಾಯ್ಡ್ ಹಾಗೂ ಐಒಎಸ್ ಗಳಲ್ಲಿ ಆಪ್ ಲಭ್ಯವಿದ್ದು, ಪಾಸ್ಪೋರ್ಟ್ ಗಾಗಿ ಅರ್ಜಿ ಸಲ್ಲಿಸುವುದು, ಹಣ ಪಾವತಿಸುವುದು ಹಾಗೂ ಪಾಸ್ಪೋರ್ಟ್ ಪಡೆಯಲು ಸಮಯ ನಿಗದಿಪಡಿಸುವುದಕ್ಕೂ ಆಪ್ ಮೂಲಕವೇ ಮಾಡಬಹುದಾಗಿದೆ.

ಹೀಗೆ ಮಾಡಿ
*ಗೂಗಲ್‌ಪ್ಲೇ ಸ್ಟೋರ್‌ಅಥವಾ ಐಫೋನ್‌ನಲ್ಲಿರುವ ಆ್ಯಪ್‌ಸ್ಟೋರ್‌ಮೂಲಕ ಪಾಸ್‌ಪೋರ್ಟ್‌ಆ್ಯಪ್‌ಡೌನ್‌ಲೋಡ್‌ಮಾಡಿ.

*ಬಳಿಕ ಪಾಸ್‌ಪೋರ್ಟ್‌ಕಚೇರಿ ಯನ್ನು ಆಯ್ಕೆ ಮಾಡಿ. ಹೆಸರು, ಹುಟ್ಟಿದ ದಿನಾಂಕ, ಇ-ಮೇಲ್‌, ಲಾಗ್‌ಇನ್‌ಐಡಿ ನಮೂದಿಸಿ.

*ಲಾಗ್‌ಇನ್‌ಐಡಿ ಮತ್ತು ಇ-ಮೇಲ್‌ದೃಢೀಕರಣ ಬಳಿಕ ಪಾಸ್‌ವರ್ಡ್‌, ಹಿಂಟ್‌ಕ್ವೆಶ್ಚನ್‌, ಕ್ಯಾಪ್ಚ (CAPTCHA)ಕೋಡ್‌ಎಂಟರ್‌ಮಾಡಿ

*ನಿಗದಿತ ಪಾಸ್‌ಪೋರ್ಟ್‌ಕಚೇರಿಯಲ್ಲಿ ದಾಖಲಾಗಿರುವ ಇ-ಮೇಲ್‌ಗೆ ಲಿಂಕ್‌ಬರುತ್ತದೆ. ಅದನ್ನು ಕ್ಲಿಕ್‌ಮಾಡಿ ಖಾತೆ ಆಕ್ಟಿವೇಟ್‌ಮಾಡಿ. ಅಲ್ಲಿ ನೀಡಿರುವ ಸೂಚನೆ ಪಾಲಿಸಿ.

ಹೀಗೆ ಲಿಂಕ್‌ಮೂಲಕ ಖಾತೆ ಆ್ಯಕ್ಟಿವೇಟ್‌ಆದ ಬಳಿಕ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ದೃಢೀಕರಣಕ್ಕೆ ಅಗತ್ಯವಾಗಿರುವ ದಾಖಲೆಗಳು, ಪಾಸ್‌ಪೋರ್ಟ್‌ಕೇಂದ್ರ, ಶುಲ್ಕಗಳ ವಿವರ ಕೂಡ ಸಿಗುತ್ತದೆ.

Comments are closed.