ಅಂತರಾಷ್ಟ್ರೀಯ

ಹೆಂಡತಿ ಹತ್ಯೆಗೆ ಈತ ಮಾಡಿದ ಉಪಾಯವೇನು ಗೊತ್ತಾ?

Pinterest LinkedIn Tumblr


ಲಂಡನ್ (ಮೇ. 25): ಪತ್ನಿಯನ್ನು ಕೊಲ್ಲಲು ಈ ಭೂಪ ಮಾಡಿದ ಐಡಿಯಾ ಕೇಳಿದ್ರೆ ಅದೆಂತವರೂ ಒಂದು ಕ್ಷಣ ಬೆಚ್ಚಿ ಬೀಳ್ತಾರೆ. ಬ್ರಿಟಿಷ್ ಸೇನೆಯ ಸಾರ್ಜಂಟ್ ಓರ್ವ ಪತ್ನಿ ಪ್ಯಾರಾಚೂಟ್ ನಿಂದ ಜಂಪ್ ಮಾಡುವುದಕ್ಕೂ ಮುನ್ನ ಅದನ್ನು ವಿರೂಪಗೊಳಿಸಿ ಕೊಲ್ಲಲು ಪ್ರಯತ್ನಿಸಿದ್ದಾನೆ.

ಎಮಿಲಿ ಸಿಲಿಯರ್ಸ್ ಎಂಬ ಸೇನಾಧಿಕಾರಿ ತನ್ನ ಪತ್ನಿ ವಿಕ್ಟೋರಿಯಾಳನ್ನು ಕೊಲ್ಲಲು ಬಯಸಿದ್ದು, ಅದರಂತೆ ಆಕೆ ಪ್ಯಾರಾಚೂಟ್ ನಿಂದ ಹಾರುವ ಸಂದರ್ಭದಲ್ಲಿ ಅದರಲ್ಲಿ ತಾಂತ್ರಿಕ ದೋಷ ಬರುವಂತೆ ನೋಡಿಕೊಂಡಿದ್ದಾನೆ. ಅದರಂತೆ ವಿಕ್ಟೋರಿಯಾ ವಿಮಾನದಿಂದ ಕೆಳಗೆ ಜಿಗಿದಾಗ ಪ್ಯಾರಾಚೂಟ್ ತೆರೆದುಕೊಂಡಿಲ್ಲ. ಆದರೆ ಅದೃಷ್ಟವಶಾತ ಆಕೆ ಬದುಕುಳಿದಿದ್ದು, ಗಂಭೀರ ಗಾಯಗಳಾದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ವಿಕ್ಟೋರಿಯಾಳ ಕೈ ಮತ್ತು ಕಾಲುಗಳ ಮೂಳೆ ಮುರಿದಿದ್ದು, ಆಕೆಗೆ ಚಿಕಿತ್ಸೆ ಮುಂದುವರೆಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಮಧ್ಯೆ ತನ್ನ ಮೇಲಿನ ಆರೋಪವನ್ನು ಪತಿ ಎಮಿಲಿ ನಿರಾಕರಿಸಿದ್ದು, ತಾನು ಪತ್ನಿಯನ್ನು ಕೊಲ್ಲಲು ಬಯಸಿರಲಿಲ್ಲ ಎಂದು ತಿಳಿಸಿದ್ದಾನೆ. ಆದರೆ ಘಟನೆಯ ತನಿಖೆ ನಡೆಸಿರುವ ಪೊಲೀಸರು ಎಮಿಲಿ ವಿರುದ್ದ ನ್ಯಾಯಾಲಯಕ್ಕೆ ಚಾರ್ಜಶೀಟ್ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

Comments are closed.