ಅಂತರಾಷ್ಟ್ರೀಯ

ಟ್ರಂಪ್ ಸರಕಾರದಿಂದ ಎಚ್‌-4 ವೀಸಾ ಮೂಲಕ ಕೆಲಸ ಮಾಡಲು ಅನುಮತಿ ರದ್ದತಿಗೆ ನಿರ್ಧಾರ

Pinterest LinkedIn Tumblr


ವಾಷಿಂಗ್ಟನ್: ಎಚ್‌-1ಬಿ ವೀಸಾ ಹೊಂದಿರುವವರ ಸಂಗಾತಿಗೆ ಎಚ್‌-4 ವೀಸಾ ಮೂಲಕ ಕೆಲಸ ಮಾಡಲು ಅನುಮತಿ ಕಲ್ಪಿಸಿದ್ದ ಒಬಾಮ ಸರಕಾರ ನಿರ್ಧಾರವನ್ನು ತೆಗೆದುಹಾಕುವ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸರಕಾರ ಅಮೆರಿಕ ಕೋರ್ಟ್‌ಗೆ ತಿಳಿಸಿದೆ.

ಎಚ್‌-1ಬಿ ವೀಸಾ ಪಡೆದುಕೊಂಡರೆ ಅಮೆರಿಕದಲ್ಲಿ ಉದ್ಯೋಗ ದೊರೆಯುತ್ತದೆ. ಎಚ್‌-1ಬಿ ವೀಸಾ ಪಡೆದುಕೊಂಡಿದ್ದರೆ, ಅವರ ಸಂಗಾತಿಗೂ ಕೆಲಸ ಮಾಡಲು ಅನುಕೂಲವಾಗುವಂತೆ ಒಬಾಮ ಸರಕಾರ ಸುಗ್ರೀವಾಜ್ಞೆ ಮೂಲಕ ಅವಕಾಶ ನೀಡಿತ್ತು.

ಇದೀಗ ಟ್ರಂಪ್ ಆಡಳಿತ ಒಬಾಮ ನೀತಿಯನ್ನು ತೆಗೆದುಹಾಕಲು ನಿರ್ಧರಿಸಿದ್ದು, ಎಚ್‌-4 ವೀಸಾ ಹೊಂದಿದ್ದವರಿಗೆ ಕೆಲಸ ಮಾಡಲು ಅವಕಾಶವಿರುವುದಿಲ್ಲ. ಈ ಪ್ರಸ್ತಾವ ಅಂತಿಮ ಹಂತದಲ್ಲಿದೆ ಎಂದು ಡಿಪಾರ್ಟ್‌ಮೆಂಟ್ ಆಫ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ (ಡಿಎಚ್‌ಎಸ್‌) ಫೆಡರಲ್ ಕೋರ್ಟ್‌ಗೆ ತಿಳಿಸಿದೆ.

ಎಚ್‌-4 ವೀಸಾ ಕೆಲಸದ ಅನುಮತಿ ರದ್ದಾದರೆ ಸುಮಾರು 70,000ಕ್ಕೂ ಅಧಿಕ ಉದ್ಯೋಗಿಗಳಿಗೆ ಸಮಸ್ಯೆಯಾಗುವ ಸಂಭವವಿದೆ.

Comments are closed.