ರಾಷ್ಟ್ರೀಯ

ಹೆಂಡತಿಯಿಂದ ದಂಪತಿ ಜೊತೆಯಾಗಿರುವ ಫೋಟೋ DP ಮಾಡದ ಪತಿಯ ವಿರುದ್ಧ ದೂರು

Pinterest LinkedIn Tumblr


ಸಾಹಿಬಾಬಾದ್‌: ಸ್ಮಾರ್ಟ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳು ಸಂಬಂಧಗಳ ನಡುವೆ ಅದರಲ್ಲೂ ಪತಿ- ಪತ್ನಿ ಸಂಬಂಧಗಳ ನಡುವೆ ಗೋಡೆ ಏರ್ಪಡಲು ಕಾರಣವಾಗುತ್ತಿವೆ. ಅದಕ್ಕೆ ತಾಜಾ ನಿದರ್ಶನ ಸಾಹಿಬಾಬಾದ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆ.

ತನ್ನ ಜತೆಗಿರುವ ಫೋಟೋವನ್ನು ಪತಿ ಡಿಪಿ ಮಾಡಿಲ್ಲವೆಂದು ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇಬ್ಬರನ್ನು ಠಾಣೆಗೆ ಕರೆಯಿಸಿ ಆಪ್ತ ಸಮಾಲೋಚನೆ ಮಾಡಿದಾಗ ತಿಳಿದು ಬಂದಿದ್ದೇನೆಂದರೆ: ಕಳೆದ ತಿಂಗಳು ಪತಿ- ಪತ್ನಿ ಇಬ್ಬರು ಸೇರಿ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದರು. ಅದರಲ್ಲೊಂದನ್ನು ವಾಟ್ಸ್‌ಅಪ್ ಡಿಪಿ ಮಾಡುವಂತೆ ಪತ್ನಿ ಪಟ್ಟು ಹಿಡಿದಿದ್ದಳು. ಆದರೆ ಪತಿ ಆಕೆಯ ಮಾತನ್ನು ನಿರ್ಲಕ್ಷಿಸಿದ್ದ. ಇದರಿಂದ ಸಿಟ್ಟಿಗೆದ್ದ ಪತ್ನಿ, ಪತಿ ವಿರುದ್ಧ ಕಿರುಕುಳದ ಪ್ರಕರಣವನ್ನು ದಾಖಲಿಸಿದ್ದಾಳೆ.

ಸಮಾಧಾನದ ವಿಷಯವೇನೆಂದರೆ ಪೊಲೀಸರ ಆಪ್ತ ಸಮಾಲೋಚನೆ ಬಳಿಕ ಪತಿ ತನ್ನ ಕಡೆಯಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡ ಮತ್ತು ಪತ್ನಿ ದೂರನ್ನು ವಾಪಸ್ಸು ಪಡೆದಿದ್ದಾಳೆ.

Comments are closed.