ಅಂತರಾಷ್ಟ್ರೀಯ

ಇಂಡೋನೇಶ್ಯ: ಹೊಸ ತೈಲ ಬಾವಿಯಲ್ಲಿ ಬೆಂಕಿ; 11 ಮಂದಿ ಸುಟ್ಟು ಕರಕಲು

Pinterest LinkedIn Tumblr


ಜಕಾರ್ತಾ : ಹೊಸದಾಗಿ ಕೊರೆಯಲ್ಪಟ್ಟ ಅನಧಿಕೃತ ತೈಲ ಬಾವಿಯೊಂದಕ್ಕೆ ಬೆಂಕಿ ಬಿದ್ದಾಗ ತೈಲ ಸಂಗ್ರಹದಲ್ಲಿ ತೊಡಗಿದ್ದ ಜನರಲ್ಲಿ 11 ಮಂದಿ ಸುಟ್ಟು ಕರಕಲಾಗಿ ಇತರ 40 ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ.

ಪೂರ್ವ ಆಸೇ ಪ್ರಾಂತ್ಯದ ಪಾಸಿ ಪುತೀಹ್‌ ಗ್ರಾಮದಲ್ಲಿ ಹೊಸದಾಗಿ ಕೊರೆಯಲ್ಪಟ್ಟ ಅನಧಿಕೃತ ತೈಲ ಬಾವಿಯಲ್ಲಿ ನಸುಕಿನ 1.30ರ ಹೊತ್ತಿಗೆ ಭಾರೀ ಬೆಂಕಿ ಕಾಣಿಸಿಕೊಂಡಿತು.

ತೈಲ ಬಾವಿಯೊಳಗಿನ ಬೆಂಕಿ ಇನ್ನೂ ಉರಿಯುತ್ತಲೇ ಇದ್ದು ಅದರ ಕೆನ್ನಾಲಗೆ ಸಮೀಪದ ಐದು ಮನೆಗಳಿಗೂ ಚಾಚಿಕೊಂಡು ಅವೆಲ್ಲವೂ ಸುಟ್ಟು ಭಸ್ಮವಾದವು ಎಂದು ರಾಷ್ಟ್ರೀಯ ಪ್ರಕೋಪ ನಿವರ್ಹಣ ಸಂಸ್ಥೆಯ ವಕ್ತಾರ ಸುತೋಪೋ ಪೂವೋರ ನುಗ್ರೋಹೋ ತಿಳಿಸಿದ್ದಾರೆ.

ಸುಮಾರು 820 ಅಡಿ ಆಳದ ತೈಲ ಬಾವಿಯಿಂದ ತೈಲವು ಕಾರಂಜಿಯಂತೆ ಹೊರ ಚಿಮ್ಮುವಾಗ ಅಕ್ಕಪಕ್ಕದ ಜನರು ಇಂಧನ ಸಂಗ್ರಹದಲ್ಲಿ ತೊಡಗಿಕೊಂಡರು. ಆಗಲೇ ತೈಲ ಬಾವಿಯೊಳಗೆ ಬೆಂಕಿ ಕಾಣಿಸಿಕೊಂಡಿತು. ಪರಿಣಾವಾಗಿ 11 ಮಂದಿ ಸುಟ್ಟು ಕರಕಲಾಗಿ ಇತರ 40 ಮಂದಿ ಗಾಯಗೊಂಡರು ಎಂದವರು ಹೇಳಿದರು.

-ಉದಯವಾಣಿ

Comments are closed.