
ಕಾಬೂಲ್ : ಅಫ್ಘಾನಿಸ್ಥಾನದ ಉದ್ದಗಲದಲ್ಲಿ ಇಂದು ಮಂಗಳವಾರ ತಾಲಿಬಾನ್ ಉಗ್ರರು ನಡೆಸಿದ ಸರಣಿ ದಾಳಿಗಳಿಗೆ 11 ಅಫ್ಘಾನ್ ಸೈನಿಕರು ಮತ್ತು ಪೊಲೀಸರು ಬಲಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮದ ಫರಾಹ್ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರು ಚೆಕ್ ಪಾಯಿಂಟ್ ಒಂದರ ಮೇಲೆ ದಾಳಿ ನಡೆಸಿದ ಕನಿಷ್ಠ ಐವರು ಸೈನಿಕರು ಹತರಾದರು ಎಂದು ಪ್ರಾಂತ್ಯದ ರಾಜ್ಯಪಾಲ ಮೊಹಮ್ಮದ್ ನಸೀರ್ ಮೆಹ್ರಿ ತಿಳಿಸಿದ್ದಾರೆ.
ಬಾಲಾ ಬುಲೂಕ್ ಜಿಲೆಯಲ್ಲಿ ತಾಲಿಬಾನ್ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ.
ಸೈನಿಕರೊಂದಿಗಿನ ಕಾಳಗದಲ್ಲಿ ಆರು ತಾಲಿಬಾನ್‌ಉಗ್ರರು ಹತರಾಗಿದ್ದು ಇತರ ಮೂವರು ಗಾಯಗೊಂಡಿರುವುದಾಗಿ ಮೆಹ್ರಿ ತಿಳಿಸಿದ್ದಾರೆ.
-ಉದಯವಾಣಿ
Comments are closed.