ರಾಷ್ಟ್ರೀಯ

ಕಥುವಾ ಪ್ರಕರಣ: ಹೈಕೋರ್ಟ್‌ ಮೆಟ್ಟಲೇರಿದ ಇಬ್ಬರು ಪೊಲೀಸ್‌ ಅಧಿಕಾರಿ

Pinterest LinkedIn Tumblr


ಜಮ್ಮು : ಕಥುವಾ ರೇಪ್‌ ಆ್ಯಂಡ್‌ ಮರ್ಡರ್‌ ಕೇಸಿನಲ್ಲಿ ಎಸ್‌ಐಟಿ ಯಿಂದ ಬಂಧನಕ್ಕೆ ಗುರಿಯಾಗಿದ್ದ ಓರ್ವ ಎಸ್‌ಐ ಮತ್ತು ಓರ್ವ ಎಸ್‌ಪಿಒ ಜಮ್ಮು ಕಾಶ್ಮೀರ ಹೈಕೋರ್ಟ್‌ ಮೆಟ್ಟಲೇರಿದ್ದು ಸಿಬಿಐ ನಿಂದ ಪ್ರಕರಣದ ತಾಜಾ ತನಿಖೆ ಮತ್ತು ರಾಜ್ಯ ಪೊಲೀಸ್‌ ಕ್ರೈಮ್‌ ಬ್ರ್ಯಾಂಚಿನಿಂದ ಆಗಿರುವ ತನಿಖೆಯ ವಜಾ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಎಸ್‌ಐ ಆನಂದ್‌ ದತ್ತ ಮತ್ತು ವಿಶೇಷ ಪೊಲೀಸ್‌ ಅಧಿಕಾರಿ (ಎಸ್‌ಪಿಓ) ದೀಪಕ್‌ ಖಜೂರಿಯಾ ಅವರನ್ನು ಕಥುವಾ ರೇಪ್‌ ಆ್ಯಂಡ್‌ ಮರ್ಡರ್‌ ಪ್ರಕರಣದ ಸಾಕ್ಷ್ಯ ನಾಶದ ಆರೋಪದ ಮೇಲೆ ಎಸ್‌ಐಟಿ ಬಂಧಿಸಿತ್ತು.

ಇವರ ಪರವಾಗಿ ವಕೀಲ ವೀನೂ ಗುಪ್ತಾ ಅವರು ಜಮ್ಮು ಕಾಶ್ಮೀರ ಹೈಕೋರ್ಟಿನಲ್ಲಿ ಅರ್ಜಿ ದಾಖಲಿಸಿದರು.

-ಉದಯವಾಣಿ

Comments are closed.