ಕ್ರೀಡೆ

ಸುಲಭ ಗುರಿಯನ್ನು ತಲುಪಲಾಗದೇ ಸೋಲಿಗೆ ಶರಣಾದ ಮುಂಬೈ ಇಂಡಿಯನ್ಸ್​; ಸನ್​ ರೈಸರ್ಸ್​ ಹೈದರಾಬಾದ್​ ಭರ್ಜರಿ ಗೆಲುವು

Pinterest LinkedIn Tumblr

ಮುಂಬೈ: ಐಪಿಎಲ್ ಟಿ20​ ಪಂದ್ಯಾವಳಿಯಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಸನ್​ ರೈಸರ್ಸ್​ ಹೈದರಾಬಾದ್​ 31 ರನ್​​ಗಳ ಭರ್ಜರಿ ಗೆಲುವು ದಾಖಲಿಸಿದೆ.

ಇಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಹೈದರಾಬಾದ್​ ತಂಡ ಮುಂಬೈ ಬೌಲಿಂಗ್​ ದಾಳಿಗೆ ತತ್ತರಿಸಿ 18.4 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 118 ರನ್​ ಗಳಿಸಿತು.

ಗೆಲುವಿಗೆ ಹೈದರಾಬಾದ್ ನೀಡಿದ 119 ರನ್ ಗಳ ಸಾಧಾರಣ ಗುರಿ ಬೆನ್ನತ್ತಿದ ಮುಂಬಯಿ ಇಂಡಿಯನ್ಸ್ ತಂಡ, 21 ರನ್ ಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತ ಅನುಭವಿಸಿತು.

ಮುಂಬೈ 18.5 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 87 ರನ್​ ಗಳಿಸುವ ಮೂಲಕ ಹೈದರಾಬಾದ್​ ನೀಡಿದ್ದ ಸುಲಭ ಗುರಿಯನ್ನು ತಲುಪಲಾಗದೇ ಸೋಲಿಗೆ ಶರಣಾಯಿತು.

ಹೈದರಾಬಾದ್ ಪರ ಕೇನ್​ ವಿಲಿಯಮ್ಸನ್​(29) ಹಾಗೂ ಯೂಸೂಫ್​ ಪಠಾಣ್​(29) ಬಿಟ್ಟರೆ ಉಳಿದ ಯಾವೊಬ್ಬ ಬ್ಯಾಟ್ಸ್​ಮನ್​ ಗಮನಾರ್ಹ ಪ್ರದರ್ಶನ ನೀಡಲಿಲ್ಲ.

ಮುಂಬೈ ಪರ ಮಿಚೆಲ್​ ಮೆಕ್ಲೆಹೆಂಗನ್​, ಹಾರ್ದಿಕ್​ ಪಾಂಡ್ಯ ಹಾಗೂ ಮಯಾಂಕ್​ ಮಾರ್ಕಂಡೆ ತಲಾ ಎರಡು ವಿಕೆಟ್ ಪಡೆದರೆ, ಜಸ್ಪ್ರಿತ್​ ಬೂಮ್ರಾ ಹಾಗೂ ಮುಸ್ತಫಿಝುರ್ ರಹಮಾನ್ ತಲಾ ಒಂದೊಂದು ವಿಕೆಟ್​ ಪಡೆದು ಮಿಂಚಿದರು.

Comments are closed.