ಅಂತರಾಷ್ಟ್ರೀಯ

ಕಣ್ಣೆದುರು ನಿಂತರೂ ಬದುಕಿಲ್ಲ ಎಂದ ಕೋರ್ಟ್‌!

Pinterest LinkedIn Tumblr


ಸತ್ತನೆಂದೇ ಭಾವಿಸಿದ್ದ ವ್ಯಕ್ತಿ ಬದುಕಿ ಬಂದು ಕಣ್ಣೆದುರು ನಿಂತಾಗ, ಮೊದಲು ನಮ್ಮ ಕಣ್ಣನ್ನು ನಮಗೇ ನಂಬಲಾಗುವುದಿಲ್ಲ. ಆದರೆ, ನಂತರ ಸಾವರಿಸಿಕೊಂಡು ಅವನು ಬದುಕಿರುವುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ರೊಮಾನಿಯಾದಲ್ಲಿ ವ್ಯತಿರಿಕ್ತವಾದ ಘಟನೆ ನಡೆದಿದೆ. ಇಲ್ಲಿ ಸತ್ತಿದ್ದಾನೆಂದು ಭಾವಿಸಿದ ವ್ಯಕ್ತಿಯೇ ಸ್ವತಃ ಕೋರ್ಟ್‌ ಮುಂದೆ ಬಂದು, ನಾನು ಬದುಕಿದ್ದೇನೆ ಎಂದರೂ ಕೋರ್ಟ್‌ ಅದನ್ನು ಒಪ್ಪಿಕೊಂಡಿಲ್ಲ. ಈತ ತನ್ನ ಊರು ಬಿಟ್ಟು ಟರ್ಕಿಗೆ ತೆರಳಿ ಅಲ್ಲಿ 20ಕ್ಕೂ ಹೆಚ್ಚು ವರ್ಷಗಳ ಕಾಲ ಬಾಣಸಿಗನಾಗಿ ಕೆಲಸ ಮಾಡಿದ್ದ. ಇವರಿಗೀಗ 63 ವರ್ಷ ವಯಸ್ಸು.

ಇತ್ತೀಚೆಗೆ ಟರ್ಕಿಯಿಂದ ತನ್ನೂರಿಗೆ ಮರಳಿದಾಗ, ಇವನಿಗೆ ಅಚ್ಚರಿ ಕಾದಿತ್ತು. ನಾನೇ ಬಂದಿದ್ದೇನೆ ಎಂದರೂ ಪತ್ನಿ ಅದನ್ನು ನಂಬಲಿಲ್ಲ. ನೀವು ಮೃತಪಟ್ಟಿರುವುದಾಗಿ ಡೆತ್‌ ಸರ್ಟಿಫಿಕೇಟ್‌ ಕೂಡ ಪಡೆದಾಗಿದೆ ಎಂಬುದು ಆಕೆಯ ವಾದ. ಕೋರ್ಟ್‌ ಮೆಟ್ಟಿಲೇರಿದರೆ, ಅಲ್ಲೂ “ನೀವು ಅರ್ಜಿ ಸಲ್ಲಿಸುವಾಗ ತುಂಬಾ ವಿಳಂಬವಾಗಿದೆ. ಹಾಗಾಗಿ ನಿಮ್ಮ ಮರಣ ಪ್ರಮಾಣಪತ್ರವನ್ನು ರದ್ದು ಮಾಡಲಾಗದು’ ಎಂದು ಕೋರ್ಟ್‌ ಹೇಳಿದೆ. ಈಗ ಆತ ನಾನೊಬ್ಬ ಬದುಕಿರುವ ಪಿಶಾಚಿ ಎಂದು ಆಕ್ರೋಶದಿಂದ ಕಿರುಚುತ್ತಿದ್ದಾನಂತೆ.

-ಉದಯವಾಣಿ

Comments are closed.