ರಾಷ್ಟ್ರೀಯ

ಸ್ಕೂಲ್ ಬಸ್ ಮಿಸ್, ಲಿಫ್ಟ್ ನೆಪದಲ್ಲಿ ಸ್ನೇಹಿತರಿಂದ ಗ್ಯಾಂಗ್ ರೇಪ್

Pinterest LinkedIn Tumblr


ಮಹಿಳೆಯರು ಸುರಕ್ಷಿತರಲ್ಲ- ಇದು ವಾಸ್ತವವಾದರೂ ಒಪ್ಪಿಕೊಳ್ಳಲು ನಿಜಕ್ಕೂ ನೋವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಂತೂ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಸೇರಿದಂತೆ ಮಹಿಳೆಯರ ವಿರುದ್ಧದ ಅಪರಾಧ ಸುದ್ದಿಗಳನ್ನು ಕೇಳದ ದಿನಗಳೇ ಇಲ್ಲ. ಅಂತಹದ್ದೇ ಒಂದು ಘಟನೆ ಇದಾಗಿದ್ದು, 16 ವರ್ಷದ ಶಾಲಾ ಬಾಲಕಿಯ ಮೇಲೆ ಆಕೆಯದ್ದೇ ಸಹಪಾಠಿಗಳು ಸೇರಿಕೊಂಡು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಗ್ರೇಟರ್ ನೊಯ್ಡಾದಲ್ಲಿ ಈ ದುಷ್ಕೃತ್ಯ ನಡೆದಿದ್ದು, ಘಟನೆಯಿಂದ ಆಘಾತಕ್ಕೊಳಗಾಗಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶಾಲಾ ಬಸ್ ಮಿಸ್ ಮಾಡಿಕೊಂಡ 16 ವರ್ಷದ ಬಾಲಕಿ ನಡೆದುಕೊಂಡು ಮನೆ ಕಡೆಗೆ ಹೋಗುತ್ತಿದ್ದಾಗ, ಕಾರಿನಲ್ಲಿ ಬಂದ ಆಕೆಯ ಸ್ನೇಹಿತರು ಡ್ರಾಫ್ ಕೊಡುವುದಾಗಿ ಹೇಳಿ ಕಾರಲ್ಲಿ ಹತ್ತಿಸಿಕೊಂಡಿದ್ದಾರೆ. ಬಳಿಕ ಬಲವಂತವಾಗಿ ಮದ್ಯ ಕುಡಿಸಿ ಗಂಟೆಗಟ್ಟಲೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಳಿಕ ರಸ್ತೆ ಬದಿಯಲ್ಲಿ ಆಕೆಯನ್ನು ಇಳಿಸಿ ಪರಾರಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿಯ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.