ಅಂತರಾಷ್ಟ್ರೀಯ

ಮೊದಲ ಬಾರಿಗೆ ಲಾಟರಿ ಟಿಕೆಟ್‌ ಕೊಂಡವನಿಗೆ 53.30 ಕೋಟಿ ಸಿಕ್ಕಿತು!

Pinterest LinkedIn Tumblr


ಅದೃಷ್ಟವೆಂದರೇ ಹೀಗೆಯೇ, ಅದು ಯಾವತ್ತು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಹೇಳಲಾಗುವುದಿಲ್ಲ. ಯಾವತ್ತೂ ಲಾಟರಿ ಟಿಕೆಟ್‌ಗಳನ್ನೇ ಕೊಳ್ಳದ ವ್ಯಕ್ತಿ ಅಚಾನಕ್ಕಾಗಿ ಲಾಟರಿ ಕೊಂಡಿದ್ದು, ಈಗ ಅವರು ಕೋಟ್ಯಧೀಶರು. ಇಂಥ ದ್ದೊಂದು ಘಟನೆ ನಡೆದಿರುವುದು ಅಮೆ ರಿಕದ ನ್ಯೂಜೆರ್ಸಿ ಯಲ್ಲಿ. ರಿಚರ್ಡ್‌ ವಹ್ಲ 47 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 2 ಲಾಟರಿ ಟಿಕೆಟ್‌ಗಳನ್ನು ಕೊಂಡು ತಂದಿದ್ದರು. ಮೊದಲನೆಯ ಲಾಟರಿ ಟಿಕೆಟ್‌ ವ್ಯರ್ಥವಾಯಿತು.

ಆದರೆ 2ನೇ ಟಿಕೆಟ್‌ ಬರೋಬ್ಬರಿ 53.30 ಕೋಟಿ ರೂ.ಗಳನ್ನು ಗೆದ್ದಿತು. ಈ ಸಂಸ್ಥೆಯ ಲಾಟರಿ ಇತಿಹಾಸದಲ್ಲೇ ಇದು ನಾಲ್ಕನೇ ಅತಿ ದೊಡ್ಡ ಮೊತ್ತ. ಇದು ನನ್ನ ಜೀವನವನ್ನು ಮಾತ್ರ ಬದಲಿಸುವ ಮೊತ್ತವಲ್ಲ, ಇನ್ನೂ ಅನೇಕರ ಜೀವನವನ್ನೂ ಬದಲಿಸಲಿದೆ ಎಂದಿದ್ದಾರೆ ರಿಚರ್ಡ್‌.

-ಉದಯವಾಣಿ

Comments are closed.