ಕರ್ನಾಟಕ

ರಾಜ್ಯದ ವಿವಿಧೆಡೆ ಮಳೆ, ಸಿಡಿಲಿನ ಅರ್ಭಟಕ್ಕೆ ಮೂವರು ಬಲಿ

Pinterest LinkedIn Tumblr


ಬೆಂಗಳೂರು: ಭಾನುವಾರ ರಾಜ್ಯದ ವಿವಿಧೆಡೆ ಗುಡುಗಿನ ಆರ್ಭಟದೊಂದಿಗೆ ಸಾಧಾರಣ ಮಳೆಯಾಗಿದ್ದುಸಿಡಿಲು ಬಡಿದು ಮೂವರು ಬಲಿಯಾಗಿದ್ದು ಹಲವರು ಗಾಯಗೊಂಡಿದ್ದಾರೆ.

ಯಾದಗಿರಿಯ ಸುರಪುರ ದ ಸಿರಗಾರದೊಡ್ಡಿ ಗ್ರಾಮದಲ್ಲಿ ದನ ಮೇಯಿಸುತ್ತಿದ್ದ ಮೌನೇಶ್ (12) ಎಂಬ ಬಾಲಕ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ.

ಇನ್ನೊಂದೆಡೆ ಯಾದಗಿರಿಯ ಮೈಲಾಪೂರ ಗ್ರಾಮದಲ್ಲಿ ದೇವಸ್ಥಾನಕ್ಕೆ ತೆರಳಿ ವಾಪಾಸಾಗುತ್ತಿದ್ದ ವೇಳೆ ಮರದ ಕೆಳಗೆ ಆಶ್ರಯ ಪಡೆದಿದ್ದ ಕುಮಾರ್ (30) ಎಂಬ ಯುವಕ ಸಿಡಿಲಿಗೆ ಬಲಿಯಾಗಿದ್ದು ಜೊತೆಯಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾಯಚೂರಿನ ಸಿಂಧನೂರು ತಾಲೂಕಿನ ಸಾಲಗುಂದ ಬಳಿ ಸಿಡಿಲು ಬಡಿದು ಮೇಕೆಗಳು ಮೇಯಿಸುತ್ತಿದ್ದ 34 ವರ್ಷದ ಮಹಿಬೂಬ ರಾಜಾ ನಾಯ್ಕ್ ಎನ್ನುವವರು ಸಾವನ್ನಪ್ಪಿದ್ದಾರೆ. 10 ಕ್ಕೂ ಹೆಚ್ಚು ಮೇಕೆಗಳು ಸಿಡಿಲಿಗೆ ಬಲಿಯಾಗಿರುವ ಬಗ್ಗೆ ವರದಿಯಾಗಿದೆ.

ಸಿಂಧನೂರಿನಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಕರಾವಳಿ, ಮಲೆನಾಡಿನ ಕೆಲವೆಡೆ ಬೆಳಗ್ಗೆ ಉತ್ತಮ ಮಳೆಯಾಗಿದೆ.

-ಉದಯವಾಣಿ

Comments are closed.