ಅಂತರಾಷ್ಟ್ರೀಯ

ಪಾಕಿಸ್ತಾನ: ನಿಂತು ಹಾಡದ್ದಕ್ಕೆ ಗರ್ಭಿಣಿ ಗಾಯಕಿಗೆ ಗುಂಡೇಟು

Pinterest LinkedIn Tumblr


ಕರಾಚಿ(ಪಾಕಿಸ್ತಾನ): ಹಾಡುವಾಗ ಎದ್ದು ನಿಲ್ಲಲಿಲ್ಲ ಎನ್ನುವ ಕಾರಣಕ್ಕೆ ಸ್ಥಳೀಯ ಗಾಯಕಿಯೊಬ್ಬರನ್ನು ಗುಂಡಿಟ್ಟು ಕೊಂದ ಘಟನೆ ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.

ಸಾಮಿನಾ ಸಮೂನ್ ಅಥವಾ ಸಾಮಿನಾ ಸಿಂಧು ಎಂದು ಗುರುತಿಸಲ್ಪಡುತ್ತಿದ್ದ 24 ವರ್ಷದ ಗಾಯಕಿ ಪ್ರೇಕ್ಷಕರೆದುರು ತನ್ನ ಗಾಯನ ಕಾರ್ಯಕ್ರಮ ನಡೆಸಿಕೊಡುತ್ತಿದ್ದಳು.

ಕಾರ್ಯಕ್ರಮದ ನಡುವೆ ತಾರಿಕ್ ಅಹಮದ್ ಜತೂಯಿ ಎನ್ನುವಾತ ಗಾಯಕಿಯನ್ನು ಎದ್ದು ನಿಂತು ಹಾಡಬೇಕೆಂದು ಕೇಳಿದ್ದಾನೆ. ಆದರೆ ಸಾಮಿನಾ ತಾನು ಗರ್ಭವತಿಯಾಗಿದ್ದ ಕಾರಣ ನಿಂತು ಹಾಡಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ಆತ ಗಾಯಕಿಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಪೋಲೀಸರು ತಿಳಿಸಿದರು.

ಗುಂಡಿನ ದಾಳಿಯಾದ ತಕ್ಷಣ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಷ್ಟರಲ್ಲೇ ಗಂಭೀರ ಗಾಯಗೊಂಡಿದ್ದ ಆಕೆ ಕೊನೆಯುಸಿರೆಳೆದಿದ್ದಳು.

ಗುಂಡಿನ ದಾಳಿ ನಡೆಸಿದ ಆರೋಪಿ ತಾರಿಕ್ ಹಾಗೂ ಇನ್ನಿಬ್ಬರು ಸಹಚರರನ್ನು ಪೋಲೀಸರು ಬಂಧಿಸಿದ್ದಾರೆ. ಗರ್ಭಿಣಿಯಾದ ಗಾಯಕಿಯ ಪತಿ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಆರೋಪಿಗಳ ಬಂಧನವಾಗಿದೆ ಎಂದು ವರದಿಯಾಗಿದೆ

Comments are closed.