ರಾಷ್ಟ್ರೀಯ

ಗಣಿತವನ್ನು ವಿದ್ಯಾರ್ಥಿ ಸ್ನೇಹಿಯಾಗಿಸಲು ಸಲಹೆಗಾಗಿ ಸಮಿತಿ ರಚಿಸಿದ ಸರ್ಕಾರ

Pinterest LinkedIn Tumblr


ನವದೆಹಲಿ: ಗಣಿತವನ್ನು ವಿದ್ಯಾರ್ಥಿ ಸ್ನೇಹಿಯಾಗಿಸಲು, ಶಾಲೆಗಳಲ್ಲಿ ಅದನ್ನು ಸುಲಭವಾಗಿ ಕಲಿಸಲು ಸಹಕಾರಿಯಾಗುವಂತಾ ಸಲಹೆ ನೀಡಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಗುಜರಾತ್ ಶಿಕ್ಷಣ ಸಚಿವ ಭೂಪೇಂದ್ರ ಸಿಂಗ್ ಚುದಸಾಮಾ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ.

2017ರ ರಾಷ್ಟ್ರೀಯ ಮೌಲ್ಯಮಾಪನ ಸಮೀಕ್ಷೆಯಲ್ಲಿ ತಿಳಿದುಬಂದಂತೆ ಹೆಚ್ಚಿನ ವಿದ್ಯಾರ್ಥಿಗಳು “ಗಣಿತವೆಂದರೆ ಭಯ” ಎಂದು ಹೇಳುತ್ತಾರೆ. ಈ ಕಾರಣಕ್ಕಾಗಿ ಇಂದು ಎನ್ ಸಿಇಆರ್ ಟಿ ಅಧಿಕಾರಿಗಳು ಮತ್ತು ಕೆಲ ರಾಜ್ಯಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದು ಗಣಿತ ವಿಷಯವನ್ನು ಸುಲಭವಾಗಿ ಕಲಿಸುವಂತಾಗಲು ಸಮಿತಿ ರಚನೆ ಮಾಡುತ್ತಿದ್ದೇವೆ” ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ

“ಗಣಿತದ ಬಗ್ಗೆ ಭಯ, ಸಂಕೀರ್ಣ ಮನೋಬಾವವನ್ನು ಹೋಗಲಾಡಿಸುವ ಉದ್ದೇಶದಿಂದ ಹಾಗೆಯೇ ಗಣಿತದ ಕಲಿಕೆಯನ್ನು ಹೆಚ್ಚು ಸರಳವಾಗುವಂತೆ ಸೂಚಿಸಲು ಸಮಿತಿಗೆ ಸೂಚಿಸಲಾಗಿದೆ.ಇದು ಶಿಕ್ಷಣತಜ್ಞರು ಹಾಗೂ ಅಧಿಕಾರಿಗಳನ್ನು ಒಳಗೊಂಡಿದೆ. ಹಾಗೆಯೇ ಸಮಿತಿಯು ಮುಂದಿನ ಮೂರು ತಿಂಗಳಿನಲ್ಲಿ ತನ್ನ ವರದಿ ಸಲ್ಲಿಸಲಿದೆ” ಜಾವಡೇಕರ್ ತಿಳಿಸಿದ್ದಾರೆ.

ಇದೇ ವೇಳೆ ತೆಲಂಗಾಣ ಉಪಮುಖ್ಯಮಂತ್ರಿ (ಶಿಕ್ಷಣ) ಕದಂ ಶ್ರೀಹರಿ ಅವರ ಅಧ್ಯಕ್ಷತೆಯಲ್ಲಿ ಇನ್ನೊಂದು ಸಮಿತಿಯನ್ನು ರಚನೆ ಮಾಡಲಾಗಿದ್ದು ಇದು ದೇಶದಲ್ಲಿ ಶಿಕ್ಷಕ ತರಬೇತಿ ಗುಣಮಟ್ಟವನ್ನು ಸುಧಾರಿಸುವ ಮಾರ್ಗವನ್ನು ಸೂಚಿಸಲಿದೆ. ಈ ಸಮಿತಿ ಸಹ ಮುಂಬರೌವ ಮೂರು ತಿಂಗಳಲ್ಲಿ ತಮ್ಮ ವರದಿಯನ್ನು ಸರ್ಕಾರಕ್ಕೆ ನೀಡಬೇಕಿದೆ.

Comments are closed.