ಕ್ರೀಡೆ

ಮಳೆಯ ಆಟ ! ಡೆಲ್ಲಿ ಡೇರ್​ ಡೆವಿಲ್ಸ್​ ವಿರುದ್ಧ ರಾಜಸ್ತಾನಕ್ಕೆ ಸುಲಭ ಜಯ

Pinterest LinkedIn Tumblr

ಜೈಪುರ: ಇಲ್ಲಿನ ಸವಾಯಿ ಮಾನ್ಸಿಂಗ್ ಮೈದಾನದಲ್ಲಿ ಮಳೆ ನಡೆವೆಯೂ ನಡೆದ ಐಪಿಎಲ್​ ಪಂದ್ಯಾವಳಿಯಲ್ಲಿ ರಾಜಸ್ತಾನ ರಾಯಲ್ಸ್​ ವಿರುದ್ಧ ಡೆಲ್ಲಿ ಡೇರ್​ ಡೆವಿಲ್ಸ್​ ತಂಡ ಸೋಲನ್ನು ಅನುಭವಿಸಿತು.

ಮೊದಲು ಬ್ಯಾಟ್​ ಮಾಡಿದ ರಾಜಸ್ತಾನ ರಾಯಲ್ಸ್​ ತಂಡ 17. 5 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 153 ರನ್​ ಗಳಿಸಿ ಆಟ ಮುಂದುವರೆಸಿತ್ತು. ಆದರೆ, ಈ ವೇಳೆ ವರುಣನ ಆಗಮನ ಆಟಕ್ಕೆ ಕೊಂಚ ಸಮಯ ವಿರಾಮ ನೀಡಿತು. ಸುಮಾರು ಒಂದೂವರೆ ತಾಸು ಮಳೆ ಬಿದ್ದುದ್ದರಿಂದ ಸಮಯದ ಅಭಾವದಿಂದ ಡರ್ಕವರ್ತ್ ಲೂಯಿಸ್​​ ನಿಯಮದಂತೆ ಗುರಿಯನ್ನು 6 ಓವರ್​ಗೆ 71 ರನ್​ ನಿಗದಿ ಮಾಡಲಾಯಿತು.

ರಾಜಸ್ತಾನ ಪರ ಅಜಿಂಕ್ಯ ರಹಾನೆ(45), ಸಂಜು ಸ್ಯಾಮ್ಸನ್​(37) ಹಾಗೂ ಜಾಸ್​ ಬಟ್ಲರ್​(29) ರನ್​ ಕಾಣಿಕೆ ನೀಡಿದರು. ಡೆಲ್ಲಿ ಪರ ಶಹಬಾದ್​ ನದೀಮ್​ 2 ವಿಕೆಟ್​ ಪಡೆದರೆ, ಟ್ರೆಂಟ್​ ಬೌಲ್ಟ್​ ಹಾಗೂ ಮಹಮ್ಮದ್​ ಶಮಿ ತಲಾ ಒಂದೊಂದು ವಿಕೆಟ್​ ಪಡೆದರು.

ಗುರಿಯನ್ನು ಬೆನ್ನತ್ತಿದ ಡೆಲ್ಲಿ ತಂಡ ನಿಗದಿತ 6 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 60 ರನ್​ ಗಳಿಸುವುದರೊಂದಿಗೆ ರಾಜಸ್ತಾನ ವಿರುದ್ಧ ಶರಣಾಯಿತು. ಡೆಲ್ಲಿ ಪರ ಗ್ಲೇನ್​ ಮ್ಯಾಕ್ಸ್​ವೆಲ್​(17), ರಿಷಬ್​ ಪಂತ್​(20) ಹಾಗೂ ಕ್ರಿಸ್​ ಮೋರಿಸ್​(17*) ರನ್​ ಕಾಣಿಕೆ ನೀಡಿದರು.

ರಾಜಸ್ತಾನ ಪರ ಬೆನ್ ಲಾಫ್ಲಿನ್ 2 ವಿಕೆಟ್​ ಪಡೆದು ಮಿಂಚಿದರೆ, ಜಯದೇವ್​ ಉನದ್ಕಟ್​ 1 ವಿಕೆಟ್​ ಪಡೆದರು. ಕೊಲಿನ್​ ಮನ್ರೋ ರನ್​ ಔಟಾದರು.

Comments are closed.