ಕರ್ನಾಟಕ

ನಮ್ಮ ಕುಟುಂಬವಿಲ್ಲದೇ ಜೆಡಿಎಸ್ ಗೆ ಅಸ್ತಿತ್ವವಿಲ್ಲ: ಎಚ್.ಡಿ ಕುಮಾರಸ್ವಾಮಿ

Pinterest LinkedIn Tumblr


ಬೈಲಹೊಂಗಲ/ ಬೆಳಗಾವಿ: ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ರಾಜ್ಯಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ, ಈ ವೇಳೆ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ ನೀಡಿದ್ದಾರೆ.

ಪ್ರ: ರಾಜ್ಯದಲ್ಲಿ ಕುಮಾರ ಪರ್ವ ಯಾತ್ರೆಗೆ ಹೇಗೆ ಪ್ರತಿಕ್ರಿಯೆ ಸಿಕ್ಕಿದೆ?
ಉ: 2008 ಹಾಗೂ 2013ರ ವಿಧಾನಸಭೆ ಚುನಾವಣೆಗಳಿಗೆ ಹೋಲಿಸಿಕೊಂಡರೇ ಈ ವರ್ಷ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ, ಪ್ರತಿ ಕ್ಷೇತ್ರಕ್ಕೂ ತೆರಳಿದಾಗ ಸುಮಾರು 15 ರಿಂದ 20 ಸಾವಿರ ಜನ ನನ್ನನ್ನು ಸುತ್ತುವರಿಯುತ್ತಾರೆ, ಎಲ್ಲಾ ಕಡೆಗಳಲ್ಲೂ ಇದೇ ರೀತಿಯ ಬೆಂಬಲ ವ್ಯಕ್ತವಾಗುತ್ತಿದೆ, ಇದುವರೆಗೂ ಸುಮಾರು 95 ರಿಂದ 100 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ, ಉತ್ತರ ಕರ್ನಾಟಕ ಹಾವೇರಿ ಬಿಟ್ಟರೇ ಉಳಿದಂತೆ ಎಲ್ಲೆಡೆ ಉತ್ತಮ ಬೆಂಬಲ ಸಿಗುತ್ತಿದೆ.

ಪ್ರ: ಇಬ್ಬರು ಮುಖ್ಯಮಂತ್ರಿಗಳಾದ ನಂತರವು ನೀವು 3ನೇ ತಲೆಮಾರಿನ ಕುಟುಂಬ ರಾಜಕಾರಣಕ್ಕೆ ಮಣೆ ಹಾಕುತ್ತಿದ್ದೀರಿ ಎಂಬ ಆರೋಪ ಕೇಳಿ ಬರುತ್ತಿದೆಯಲ್ಲ?

ಉ: ನಮ್ಮ ಕುಟುಂಬವಿಲ್ಲದೇ ಜೆಡಿಎಸ್ ಪಕ್ಷ ಬದುಕಲು ಸಾಧ್ಯವಿಲ್ಲ, ಇಉದು ಬಹು ದೊಡ್ಡ ಸಮಸ್ಯೆಯಾಗಿದೆ, ಯಾರಿಗಾದರೂ ನಾವು ಬಿಟ್ಟುಕೊಡಲು ಸಿದ್ದರಿದ್ದೇವೆ, ಆದರೆ ಯಾರೋಬ್ಬರು ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ದರಿಲ್ಲ, ನಮ್ಮ ಕುಟುಂಬಕ್ಕೆ ಸಮಾಜದ ಒಂದು ವರ್ಗದ ಬೆಂಬಲ ಇದೆ.

ಪ್ರ: ಜೆಡಿಎಸ್ ನದು ಕುಟುಂಬ ರಾಜಕಾರಣ ಎಂದು ಆರೋಪಿಸುವ ಕೆಲ ಪಕ್ಷಗಳು ಈ ಬಾರಿ ಚುನಾವಣೆಯಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸುತ್ತಿದ್ದಾರಲ್ಲ?

ಉ: ತಮ್ಮ ಕುಟುಂಬದ ಸದಸ್ಯರನ್ನು ರಾಜಕೀಯಕ್ಕೆ ತರಬೇಕೆಂದು ಎಲ್ಲಾ ಪಕ್ಷಗಳು ಬಯಸುತ್ತಿವೆ, ಆದರೆ ಕೇವಲ ನಮ್ಮ ಪಕ್ಷದ ಕಡೆ ಮಾತ್ರ ಬೆರಳು ತೋರಿಸುತ್ತಿರುವುದಕ್ಕೆ ನಿಜವಾಗಲು ನಾನು ಅಚ್ಚರಿಗೊಂಡಿದ್ದೇನೆ ಹಾಗೂ ಅಸಮಾಧಾನಗೊಂಡಿದ್ದೇನೆ,

ಪ್ರ:ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ಹೇಗೆ?

ಉ; ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಜಿ.ಟಿ ದೇವೇಗೌಡ ಗೆಲುವು ಖಚಿತ, ಜನರು ಜೆಡಿಎಸ್ ಬೆಂಬಲಿಸುತ್ತಿರುವುದರಿಂದ ಯಾವುದೇ ಸಮಸ್ಯೆಯಿಲ್ಲ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸೋಲುತ್ತಾರೆ.

ಇನ್ನೂ ವರುಣಾ ಕ್ಷೇತ್ರಕ್ಕೆ ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುವ ಎಂಜಿನೀಯರ್ ಪದವೀಧರ ಅಭಿಷೇಕ್ ಅವರನ್ನು ಕಣಕ್ಕಿಳಿಸಲಿದೆ. ಸಿದ್ದರಾಮಯ್ಯಮತ್ತು ಅವರ ಪುತ್ರನ ವಿರುದ್ಧ ಸ್ಪಧಿಸಲು ಆತ ಆಸಕ್ತಿ ಹೊಂದಿದ್ದಾನೆ, ಈಗಾಗಲೇ ಆತ ಗ್ರಾಮಗಳಿಗೆ ತೆರಳಿ ಪ್ಚಾರ ಆರಂಭಿಸಿದ್ದಾನೆ.

ಪ್ರ: ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆದಿದೆಯಲ್ಲ?
ಉ: ಸುಮಾರು 100 ರಿಂದ 150 ಪಕ್ಷದ ಕಾರ್ಯಕರ್ತರು, ತಂದೆಯವರ ಕಾರನ್ನು ತಡೆದು ಪ್ರಜ್ವಲ್ ಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ, ಕುಟುಂಬದಿಂದ ಕೇವಲ ಇಬ್ಬರು ಮಾತ್ರ ಸ್ಪರ್ಧಿಸಬೇಕೆಂಬ ನಿಲುವಿಗೆ ನಾನು ಮತ್ತು ನನ್ನ ತಂದೆ ಬದ್ಧರಾಗಿದ್ದೇವೆ, ಹೀಗಾಗಿ ಪ್ರಜ್ವಲ್ ಸ್ಪರ್ದಿಸುತ್ತಿಲ್ಲ.ನಮ್ಮ ಕುಟುಂಬದಿಂದ ಮತ್ತೊಬ್ಬರನ್ನು ಕಣಕ್ಕಿಳಿಸಿ ಬೇರೆ ಪಕ್ಷದವರಿಗೆ ಆಹಾರವಾಗಲು ನಾವು ಬಯಸುವುದಿಲ್ಲ, ನಮ್ಮ ವಿರುದ್ಧ ಆರೋಪ ಮಾಡುವವರೇ ತಮ್ಮ ಕುಟುಂಬದ ಹೆಚ್ಚು ಸದಸ್ಯರನ್ನು ಚುನಾವಣಾ ಕಣಕ್ಕಿಳಿಸುತ್ತಿದ್ದಾರೆ.

ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಏಕೆ ನಿರ್ಧರಿಸಿದಿರಿ?
ಉ: ಚನ್ನಪಟ್ಟಣ ಕ್ಷೇತ್ರಕ್ಕೆ ಸ್ಥಳೀಯ ನಾಯಕರನ್ನು ಗುರುತಿಸಿ ಎಂದು ಕಳೆದ ಒಂದು ವರ್ಷದಿಂದ ಮನವಿ ಮಾಡುತ್ತಾ ಬಂದಿದ್ದೇವೆ, ಆದರೆ ಯಾರೋಬ್ಬರು ಅದನ್ನ ಮಾಡಲು ಸಿದ್ದರಿಲ್ಲ, ಬದಲಿಗೆ ಅನಿತಾ ಕುಮಾರ ಸ್ವಾಮಿ ಅವರನ್ನು ಕಣಕ್ಕಿಳಿಸುವಂತೆ ಒತ್ತಾಯಿಸುತ್ತಿದ್ದರು. ಹಿಂದಿನ ಲೋಕಸಭೆ ಚುನಾವಣೆ ಆಕೆ ಗೆಲ್ಲಲು ಸಾಧ್ಯವಾಗಲಿಲ್ಲ, 73 ಸಾವಿರಕ್ಕಿಂತ ಅಧಿಕ ಮತ ಪಡೆದಿದ್ದರು. ಹಾಗಾಗಿ ಪಕ್ಷದ ಕಾರ್ಯಕರ್ತರು ದೇವೇಗೌಡ ಅಥವಾ ನಾನು ಕಣಕ್ಕಿಳಿಯಬೇಕೆಂದು ಮನವಿ ಮಾಡಿದ್ದರು, ಆದರೆ ಈಗಾಗಲೇ ಕೇವಲ ಇಬ್ಬರು ಮಾತ್ರ ನಮ್ಮ ಕುಟುಂಬದಿಂದ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದ್ದೆವು, ಹೀಗಾಗಿ ಎರಡು ಕ್ಷೇತ್ರಗಳಿಂದ ನಾನೇ ಸ್ಪರ್ಧಿಸಲು ನಿರ್ದರಿಸಿದೆ.

ಪ್ರ: ಚುನಾವಣಾ ಪ್ರಚಾರಕ್ಕೆ ನಿಮ್ಮ ಆರೋಗ್ಯ ಸಮಸ್ಯಯಾಗುವುದಿಲ್ಲವೇ?
ಉ: ನನ್ನ ಆರೋಗ್ಯ ನನ್ನ ಪ್ರಚಾರ ಕಾರ್ಯಕ್ಕೆ ಮುಳುವಾಗುತ್ತದೆ ಎಂದು ನನಗನ್ನಿಸುವುದಿಲ್ಲ, ನನ್ನ ಆರೋಗ್ಯ ಸಮಸ್ಯೆಯನನು ಹೊರತು ಪಡಿಸಿ ನಾನು ಹೆಚ್ಚಿನ ಪ್ರವಾಸ ಮಾಡುತ್ತಿದ್ದೇನೆ, ಕಳೆದ 7 ದಿನಗಳಿಂದ ಬಿಡುವಿಲ್ಲದೇ ಪ್ರವಾಸ ಮಾಡುತ್ತಿದ್ದೇನೆ, ನನಗೆ ಆರೋಗ್ಯ ಸರಿಯಿಲ್ಲದಿದ್ದರೂ ನಾನು ಚುನಾವಣಾಯಿಂದ ದೂರ ಸರಿಯುವುದಿಲ್ಲ,

ಪ್ರ: ಬೆಂಗಳೂರು ಕ್ಷೇತ್ರಗಳ ಬಗ್ಗೆ ನಿಮ್ಮ ರಣತಂತ್ರವೇನು?
ಉ: ಬೆಂಗಳೂರಿನಲ್ಲಿ 28 ಕ್ಷೇತ್ರಗಳಿವೆ, 20 ಸೀಟುಗಳಲ್ಲಿ ನಾವು ಪೈಪೋಟಿ ನೀಡಲಿದ್ದೇವೆ, ಬಿಜೆಪಿ ಮೊದಲ ಪಟ್ಟಿ ಪ್ರಕಟಿಸಿದ್ದು ನಮಗೆ ಸಹಾಯವಾಗಿದೆ, ಅಸಮಾಧಾನಗೊಂಡಿರುವ ಹಲವು ನಾಯಕರು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ, ಆ ಸಂಬಂಧ ನಾನು ಕಾರ್ಯತಂತ್ರ ರೂಪಿಸುತ್ತಿದ್ದೇನೆ, ಬೆಂಗಳೂರಿನಲ್ಲಿ 12ರಿಂದ 13 ಕ್ಷೇತ್ರಗಳಲ್ಲಿ ಜಯ ಗಳಿಸುವ ಸಾಧ್ಯತೆಯಿದೆ.

ಪ್ರ:ಸುದೀಪ್,ಪವನ್ ನಿಖಿಲ್ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರ?
ಉ: ನಟ ಸುದೀಪ್ ರಾಜಕೀಯಕ್ಕೆ ಬರುವುದಿಲ್ಲ, ನನಗೆ ಬಂದಿರುವ ಮಾಹಿತಿ ಪ್ರಕಾರ ಕೆಲವು ಕ್ಷೇತ್ರಗಳಲ್ಲಿ ಕೆಲವು ಅಭ್ಯರ್ಥಿಗಳ ಪ್ರಚಾರ ನಡೆಸಲಿದ್ದಾರೆ.ನಾನು ಪವನ್ ಕಲ್ಯಾಣ್ ಅವರನ್ನು ಒಮ್ಮೆ ಭೇಟಿ ಮಾಡಿದ್ದೆ,. ಜೆಡಿಎಸ್ ಪರ ಪ್ರಚಾರ ಮಾಡಲು ಅವರು ಉತ್ಸುಕರಾಗಿದ್ದಾರೆ,ಇನ್ನೂ ಮೂರು ನಾಲ್ಕು ದಿನಗಳಲ್ಲಿ ಪವನ್ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನೂ ನನ್ನ ಮಗ ನಿಖಿಲ್ ಕೂಡ ಕೆಲ ಪ್ರದೇಶಗಳಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರೆ.ನಮ್ಮ ಬಳಿ ಸಮಯ ಕಡಿಮೆ ಇದೆ.

Comments are closed.