ಅಂತರಾಷ್ಟ್ರೀಯ

ಕಾಫಿಯಲ್ಲಿ ಕ್ಯಾನ್ಸರ್‌ ಎಚ್ಚರಿಕೆಯ ಸಂದೇಶ: ಅಮೆರಿಕದ ಕೋರ್ಟ್‌ ಆದೇಶ

Pinterest LinkedIn Tumblr


ಏಂಜಲೀಸ್‌: ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದ್ದೇ ಎಂದು ವಿಜ್ಞಾನಿಗಳು ತೀರ್ಪು ಕೊಟ್ಟಿಲ್ಲ. ಆದರೆ ಅಮೆರಿಕದ ಕ್ಯಾಲಿಫೋರ್ನಿಯಾದ ನ್ಯಾಯಾಧೀಶರೊಬ್ಬರು ತೀರ್ಪು ಕೊಟ್ಟಿದ್ದಾರೆ!

ಕ್ಯಾಲಿಫೋರ್ನಿಯಾದ ಕಾಫಿ ಶಾಪ್‌ಗಳು ತಮ್ಮ ಮಾರಾಟದ ಉತ್ಪನ್ನಗಳಲ್ಲಿ, ಕ್ಯಾನ್ಸರ್‌ ಎಚ್ಚರಿಕೆಯ ನೋಟಿಸ್‌ಗಳನ್ನು ಪ್ರದರ್ಶಿಸಬೇಕು ಎಂದು ಆದೇಶಿಸಿದ್ದಾರೆ. ಕಾಫಿ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಸ್ಟಾರ್‌ ಬಕ್ಸ್‌ ಸೇರಿದಂತೆ 90ಕ್ಕೂ ಹೆಚ್ಚು ಕಾಫಿ ರಿಟೇಲರ್ಸ್‌ಗಳಿಗೆ ಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಟೈಮ್ಸ್‌ ಆಫ್‌ ಇಂಡಿಯಾ ಗ್ರಾಫಿಕ್ಸ್‌

ಈ ಹಿಂದೆ 2010ರಲ್ಲಿ ಸಿಇಆರ್‌ಟಿ ಎಂಬ ಸೇವಾ ಸಂಸ್ಥೆಯು ಈ ಸಂಬಂಧ ಕೋರ್ಟ್‌ ಮೆಟ್ಟಿಲೇರಿತ್ತು. ಕಾಫಿಯ ಬೀಜಗಳನ್ನು ಹುರಿಯುವ ಪ್ರಕ್ರಿಯೆಯಲ್ಲಿ ಉತ್ಪಾದನೆಯಾಗುವ ಅಕ್ರಾಲಾಮೈಡ್‌ ಎಂಬ ರಾಸಾಯನಿಕ ಕ್ಯಾನ್ಸರ್‌ಗೆ ಕಾರಣವಾಗಬಹುದು. ಆದ್ದರಿಂದ ಕಾಫಿ ಉತ್ಪನ್ನದಲ್ಲಿ ಈ ಬಗ್ಗೆ ಎಚ್ಚರಿಕೆಯ ಸಂದೇಶವನ್ನು ಪ್ರದರ್ಶಿಸಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.

Comments are closed.