ರಾಷ್ಟ್ರೀಯ

ಕೇಜ್ರಿವಾಲ್‌ ಕ್ಷಮೆಯಾಚನೆ ಪರ್ವ: ಜೇಟ್ಲಿ ಕ್ಷಮೆಕೋರಿದ ದಿಲ್ಲಿ ಸಿಎಂ

Pinterest LinkedIn Tumblr


ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರ ಕ್ಷಮೆಯಾಚನೆ ಪರ್ವ ಮುಂದುವರಿದಿದೆ. ಇದೀಗ ಕೇಂದ್ರ ವಿತ್ತಸಚಿವ ಹಾಗೂ ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರಿಂದ ಕೇಜ್ರಿವಾಲ್‌ ಕ್ಷಮೆಯಾಚಿಸಿದ್ದು, ತಮ್ಮ ವಿರುದ್ಧ ಹೂಡಿದ ಮಾನನಷ್ಟ ಮೊಕದ್ದಮೆ ವಾಪಸ್‌ ಪಡೆಯುವಂತೆ ಕೋರಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಈ ಬಾರಿ ಕೇಜ್ರಿವಾಲ್‌ ಜತೆಗೆ ಅವರ ಪಕ್ಷದ ಮೂವರು ಸಹೋದ್ಯೋಗಿಗಳಾದ ಸಂಜಯ್ ಸಿಂಗ್‌, ರಾಘವಚಂದ್ರ ಮತ್ತು ಅಶುತೋಷ್‌ ಕೂಡ ಜಂಟಿ ಪತ್ರದಲ್ಲಿ ಜೇಟ್ಲಿ ಅವರ ಕ್ಷಮೆಯಾಚಿಸಿದ್ದಾರೆ.

ಜೇಟ್ಲಿ ಅವರು ಮಾನನಷ್ಟ ಮೊಕದ್ದಮೆಯನ್ನು ವಾಪಸ್‌ ಪಡೆಯುವುದಿಲ್ಲ, ಆದರೆ ಕೇಜ್ರಿವಾಲ್‌ ಮತ್ತು ಮೂವರು ಆಪ್‌ ನಾಯಕರ ಕ್ಷಮೆಯಾಚನೆ ಪತ್ರ ಆಧರಿಸಿ ಕೋರ್ಟಿಗೆ ಜಂಟಿ ಅರ್ಜಿ ಸಲ್ಲಿಸಲಾಗುವುದು ಎಂದು ಮೂಲಗಳು ಹೇಳಿವೆ.

ಜೇಟ್ಲಿ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್‌ ಅಸೋಸಿಯೇಶನ್‌ (ಡಿಡಿಸಿಎ)ನಲ್ಲಿ ಭಾರೀ ಅವ್ಯವಹಾರ ನಡೆದಿತ್ತು ಎಂದು ಕೇಜ್ರಿವಾಲ್‌ ಮತ್ತು ಅವರ ಪಕ್ಷದ ಐವರು ಮುಖಂಡರು ಆರೋಪಿಸಿದ್ದರು.

Comments are closed.