ಕರ್ನಾಟಕ

ಬಚ್ಚನ್‌ಗಿಂತ ಕುಳ್ಳ ಸಚಿನ್‌ ಫೇಮಸ್‌, ನಾನೂ ಅಷ್ಟೇ ಅಲ್ತಾಫ್‌ಗಿಂತ ಫೇಮಸ್‌: ಜಮೀರ್‌

Pinterest LinkedIn Tumblr


ಬೆಂಗಳೂರು: ನನ್ನ ಎದುರು ಕರ್ನಾಟಕ ಮುಸ್ಲಿಮ್‌ ಸಾಕಾಗಲ್ಲ, ಜಮ್ಮು ಕಾಶ್ಮೀರದಿಂದ ಫಾರೂಕ್‌ ಅಬ್ದುಲ್ಲಾ ಅವರನ್ನು ಕರೆದು ತಂದು ನಿಲ್ಲಿಸಿದರೂ ನನ್ನ ವಿರುದ್ಧ ಗೆಲ್ಲಲು ಸಾಧ್ಯವಿಲ್ಲ ಎಂದು ಜಮೀರ್‌ ಅಹಮದ್‌ ಖಾನ್‌ ತಿಳಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಮೀರ್ ಮಾತನಾಡಿದರು.

ನಾನು ನಾಲ್ಕೂವರೆ ಅಡಿ ಎಂದು ಅಲ್ತಾಫ್‌ ಹೇಳಿದ್ದಾರೆ. ಅವರು ಆರೂವರೆ ಅಡಿ ಅಂತೆ. ಸಚಿನ್‌ ತೆಂಡೂಲ್ಕರ್‌ ಹೈಟ್‌ ಎಷ್ಟು, ಅಮಿತಾಭ್‌ ಬಚ್ಚನ್‌ ಹೈಟ್‌ ಎಷ್ಟು? ಬಚ್ಚನ್‌ ಗಿಂತ ಸಚಿನ್‌ ಫೇಮಸ್‌ ಅಲ್ಲವೇ? ನಾನು ಹಾಗೆಯೇ ಎಂದು ಜಮೀರ್‌ ಹೇಳಿದರು.

ಶರವಣ ರಾಜಕಾರಣಿ ಅಲ್ಲಾ. ಚಿನ್ನದ ವ್ಯಾಪಾರ ಮಾಡಿಕೊಂಡು, ದೇವೇಗೌಡ ಮತ್ತು ಅವರ ಮಕ್ಕಳ ಜತೆ ಓಡಾಡಿಕೊಂಡೇ ಎಂಎಲ್‌ಸಿ ಆದವರು. ಅವರ ಬಗ್ಗೆ ಮಾತನಾಡಲ್ಲ ಎಂದು ಅವರು ಹೇಳಿದರು.

ಈ ಬಾರಿ ಚುನಾವಣೆಯಲ್ಲಿ ನಾನು ಸೋತರೆ ನನ್ನ ಕತ್ತು ಕತ್ತರಿಸಿ ನಿಮ್ಮ ಕಾಲ ಮುಂದೆ ಇಡುತ್ತೇನೆ. ಅಲ್ತಾಫ್‌ ಖಾನ್‌ ಕಾಲು ಹಿಡಿದುಕೊಂಡು ಸಹಾಯ ಕೇಳಿದ್ದೇ ಎಂದಿದ್ದಾರೆ. ಅದು ಸಾಬೀತಾದರೆ ನಾನು ಚುನಾವಣೆಯಿಂದ ಹಿಂದೆ ಸರಿಯುತ್ತೇನೆ ಎಂದರು.

ನನ್ನ ಆಸ್ತಿ 300 ಕೋಟಿ ರೂಪಾಯಿ ಅಲ್ಲ, 1000 ಕೋಟಿ ರೂಪಾಯಿ ಆದರೂ ತೊಂದರೆ ಇಲ್ಲ. ಬೇಕಿದ್ದರೆ ಸಿಬಿಐ ಮುಖಾಂತರ ತನಿಖೆ ಮಾಡಿಸಲಿ ಎಂದು ಜಮೀರ್‌ ಅಹಮದ್‌ ಸವಾಲು ಹಾಕಿದರು.

Comments are closed.