ಅಂತರಾಷ್ಟ್ರೀಯ

ಸಿರಿಯಾದಿಂದ ಶೀಘ್ರವೇ ನಿರ್ಗಮಿಸಲಿದ್ದೇವೆ: ಡೊನಾಲ್ಡ್ ಟ್ರಂಪ್‌

Pinterest LinkedIn Tumblr


ವಾಷಿಂಗ್‌ಟನ್‌: ಮಧ್ಯ ಪೂರ್ವದಲ್ಲಿ ನಡೆಸಿದ ಯುದ್ಧಗಳ ಮೇಲೆ ಅಮೆರಿಕ ಏಳು ಲಕ್ಷ ಕೋಟಿ ಡಾಲರ್‌ ವ್ಯರ್ಥ ಮಾಡಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, “ಅತಿ ಶೀಘ್ರದಲ್ಲೇ” ಸಿರಿಯಾದಲ್ಲಿರುವ ಅಮೆರಿಕನ್ ಪಡೆಗಳನ್ನು ಹಿಂಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ತನ್ನೆಲ್ಲ ಸಂಪನ್ಮೂಲಗಳನ್ನು ಬಳಸುತ್ತಿರುವ ಅಮೆರಿಕ ಐಸಿಸ್‌ಅನ್ನು ಮಣಿಸಿ ಪ್ರದೇಶದಿಂದ ಹೊರದಬ್ಬಲು ಯತ್ನಿಸುತ್ತಿದೆ ಎಂದು ಹೇಳಿದ ಟ್ರಂಪ್‌, “ಐಸಿಸ್‌ಅನ್ನು ಒದ್ದೋಡಿಸುತ್ತಿದ್ದೇವೆ. ಶೀಘ್ರದಲ್ಲೇ ಸಿರಿಯಾದಿಂದ ಆಚೆ ಬರಲಿದ್ದೇವೆ. ಸಿರಿಯಾವನ್ನು ಬೇರೆ ಜನರು ವಹಿಸಿಕೊಳ್ಳಲಿ” ಎಂದು ಹೇಳಿದ್ದಾರೆ.

“ಶೀಘ್ರದಲ್ಲೇ ನಮ್ಮ ದೇಶಕ್ಕೆ ಮರಳಲಿದ್ದೇವೆ. ಆದಕ್ಕೂ ಮುನ್ನ ಐಸಿಸ್‌ ಹಿಡಿತದಲ್ಲಿರುವ ಶೇ 100ರಷ್ಟು ಪ್ರದೇಶವನ್ನು ಮರಳಿ ಹಿಡಿತಕ್ಕೆ ಪಡೆಲಿದ್ದೇವೆ. ಮಧ್ಯ ಪೂರ್ವದಲ್ಲಿ ಏಳು ಲಕ್ಷ ಕೋಟಿ ಡಾಲರ್‌ಗಳನ್ನು ವ್ಯಯಿಸಿದ್ದೇವೆ. ಪ್ರದೇಶದಲ್ಲಿ ನಮ್ಮ ದೇಶ ನಿರ್ಮಿಸಿಕೊಟ್ಟಿರುವ ಶಾಲೆಗಳನ್ನು ಭಯೋತ್ಪಾದಕರು ಪದೇ ಪದೇ ದ್ವಂಸಗೊಳಿಸಿದ್ದರೆ. ಅದೇ ಅಮರಿಕದಲ್ಲಿ ಶಾಲೆ ನಿರ್ಮಿಸಲು ಅಗತ್ಯ ಬಿದ್ದಾಗ ಹಣ ಸಿಗುವುದಿಲ್ಲ” ಎಂದು ಟ್ರಂಪ್ ತಿಳಿಸಿದ್ದಾರೆ.

ಯುದ್ಧದಲ್ಲಿ ಸಾಕಷ್ಟು ಹಣ

ವ್ಯಯಿಸಿದ ಕಾರಣ ಮೂಲ ಸೌಯರ್ಕ ಅಭಿವೃದ್ಧಿಗೆ ಸಾಕಷ್ಟು ಹಣದ ಅಭಾವ ಸೃಷ್ಟಿಯಾಗಿರುವುದಾಗಿ ಟ್ರಂಪ್ ತಿಳಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಅಮೆರಿಕ ರಕ್ಷಣಾ ಇಲಾಖೆ ವಕ್ತಾರೆ ದಾನಾ ವೈಟ್‌, “ಕಾಲಿಫೇಟ್‌ ಎಂದು ಕರೆಯಲಾಗುವ ವಿಚಾರವನ್ನು ಸಂಪೂರ್ಣ ಧ್ವಂಸಗೊಳಿಸುವುದೇ ನಮ್ಮ ಯೋಜನೆಯಾಗಿದೆ. ಜಾಗತಿಕ ಮಟ್ಟದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿರುವ ಸಂಘಟನೆ ಇದಾಗಿದೆ. ಐಸಿಸ್‌ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದ್ದು ಅದನ್ನು ಸಂಪೂರ್ಣ ನಿರ್ನಾಮ ಮಾಡುತ್ತೇವ” ಎಂದು ಹೇಳಿದ್ದಾರೆ.

ಕಳೇದ ವರ್ಷಕ್ಕೆ ಹೋಲಿಸಿದಲ್ಲಿ ಸಾಕಷ್ಟು ದುರ್ಬಲವಾಗಿರುವ ಐಸಿಸ್‌ಅನ್ನು ಹಗುರವಾಗಿ ಪರಿಗಣಿಸಲಗದು. ಅವಕಾಶ ಸಿಕ್ಕಲ್ಲಿ ಮತ್ತೆ ಬೇರೂರಕು ಯತ್ನಿಸುತ್ತಿರುವ ಐಸಿಸ್‌ ತನ್ನ ಸೋಲಿನಿಂದ ಚೇತರಿಸಿಕೊಳ್ಳಲು ಬಿಡಬಾರದು ಎಂದು ವೈಟ್‌ ತಿಳಿಸಿದ್ದಾರೆ.

ಭಯೋತ್ಫಾದಕರ ವಿರುದ್ಧ ಹೋರಾಟದಲ್ಲಿ ಸಿರಿಯಾ ಪಡೆಗಳಿಗೆ ಅಮೆರಿಕ ನೆರವು ಮುಂದುವರೆಸಲಿದೆ ಎಂದ ವೈಟ್‌ ತಿಳಿಸಿದ್ದಾರೆ.

ಇದೇ ವೇಳೆ ಪ್ರದೇಶದಲ್ಲಿ ಹತ್ತಾರು ಸಹಸ್ರ ಅಮಾಯಕರನ್ನು ರಷ್ಯಾ ಕೊಲೆ ಮಾಡುತ್ತಿದೆ ಎಂದು ಅಮೆರಿಕ ತನ್ನ ಎಂದಿನ ಆಪಾದನೆಯನ್ನು ಮುಂದುವರೆಸಿದೆ.

“ತನ್ನದೇ ಜನರನ್ನು ಕೊಲ್ಲುತ್ತಿರುವ ಬಶರ್‌-ಅಲ್‌-ಅಸ್ಸಾದ್‌ ಸರಕಾರವನ್ನು ರಷ್ಯಾ ಬೆಂಬಲಿಸುತ್ತಿದೆ. ಇದಕ್ಕೆ ಇರಾನ್‌ ಬೆಂಬಲವೂ ಇದೆ. ರಷ್ಯಾದಿಂದ ಸದ್ಯಕ್ಕೆ ಯಾವುದೇ ಪ್ರಯೋಜನವಿದೆ ಎಂದು ನಮಗೆ ಅನಿಸುವುದಿಲ್ಲ” ಎಂದು ಅಮೆರಿಕ ಸರಕಾರ ವಕ್ತಾರೆ ಹೀಥರ್‌ ನುಯೆರ್ಟ್‌ ತಿಳಿಸಿದ್ದಾರೆ.

Comments are closed.