ಕರ್ನಾಟಕ

ರಾಜ್ಯದ ಕೆಲವೆಡೆ 2-3 ದಿನ ಗುಡುಗು ಸಹಿತ ಮಳೆ ಸಾಧ್ಯತೆ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಪೂರ್ವ ಮುಂಗಾರು ಪ್ರವೇಶವಾಗಿದ್ದು, ಇನ್ನೂ ಎರಡು-ಮೂರು ದಿನ ದಕ್ಷಿಣ ಒಳನಾಡು ಸೇರಿದಂತೆ ಆಯ್ದ ಭಾಗಗಳಲ್ಲಿ ಗುಡುಗುಸಹಿತ ಮಳೆ ಮುಂದುವರಿಯುವ ಸಾಧ್ಯತೆ ಇದೆ.

ಬೇಸಿಗೆ ಹಿನ್ನೆಲೆಯಲ್ಲಿ ಒಂದೆಡೆ ಗರಿಷ್ಠ ತಾಪಮಾನ ಮತ್ತೂಂದೆಡೆ ಚುನಾವಣಾ ಕಾವು ಏರತೊಡಗಿದೆ. ಈ ಮಧ್ಯೆ ಸುರಿದ ತುಂತುರು ಮಳೆ ತಂಪೆರೆಯಿತು. ಇನ್ನೂ ಎರಡು ಮೂರು ದಿನಗಳು ಮುಂದುವರಿಯುವ ನಿರೀಕ್ಷೆ ಇರುವುದರಿಂದ ಉಷ್ಣಾಂಶ ತಕ್ಕಮಟ್ಟಿಗೆ ಇಳಿಮುಖ ಆಗಲಿದೆ.

ಮಹಾರಾಷ್ಟ್ರದ ವಿದರ್ಭದಿಂದ ರಾಜ್ಯದ ದಕ್ಷಿಣ ಒಳನಾಡು ಮತ್ತು ತೆಲಂಗಾಣ ನಡುವೆ ಕಡಿಮೆ ಒತ್ತಡದ ತಗ್ಗು (ಟ್ರಫ್) ಕಂಡುಬಂದಿದೆ. ಇದರೊಂದಿಗೆ ಮೇಲ್ಮೆ„ಸುಳಿಗಾಳಿ ಕೂಡ ಸೇರಿಕೊಂಡಿದೆ. ಇದರಿಂದ ನಗರ ಸೇರಿದಂತೆ ದಕ್ಷಿಣ ಒಳನಾಡಿನ ಆಯ್ದ ಭಾಗಗಳಲ್ಲಿ ಗುಡುಗುಸಹಿತ ಮಳೆಯಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ರಮೇಶ್‌ಬಾಬು ತಿಳಿಸಿದ್ದಾರೆ.

ಇದು ಪೂರ್ವ ಮುಂಗಾರು ಆರಂಭದ ಲಕ್ಷಣವಾಗಿದ್ದು, ಇನ್ನೂ ಎರಡು ಮೂರು ದಿನ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಇದರ ಪ್ರಭಾವ ಹೆಚ್ಚಿದ್ದು, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಕಡಿಮೆ ಇರಲಿದೆ. ಇನ್ಮುಂದೆ ಹೆಚ್ಚು-ಕಡಿಮೆ ಇದೇ ರೀತಿ ವಾತಾವರಣ ಇರಲಿದೆ ಎಂದೂ ಅವರು ಹೇಳಿದರು.

ಈ ಮಧ್ಯೆ ಚಿತ್ರದುರ್ಗದಲ್ಲಿ 65.5 ಮಿ.ಮೀ., ಚಿಕ್ಕಮಗಳೂರು 29, ಚಾಮರಾಜನಗರ 18.5, ಹಾಸನ 6.5, ಬೆಂಗಳೂರು ನಗರ 6 ಮತ್ತು ಗ್ರಾಮಾಂತರ 12 ಮಿ.ಮೀ. ಮಳೆ ದಾಖಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ತಿಳಿಸಿದೆ.

-ಉದಯವಾಣಿ

Comments are closed.