ಅಂತರಾಷ್ಟ್ರೀಯ

ಚೀನಾದಲ್ಲಿ ಜಗತ್ತಿನ ಅತ್ಯಂತ ಉದ್ದದ ಸಮುದ್ರ ಸೇತುವೆ

Pinterest LinkedIn Tumblr


ನಿರ್ಮಾಣ ಕ್ಷೇತ್ರದಲ್ಲಿ ಸದ್ಯ ಚೀನಾವನ್ನು ಹಿಂದಿಕ್ಕಲು ಯಾವ ದೇಶದಿಂದಲೂ ಸಾಧ್ಯವಿಲ್ಲ. ಈ ವಲಯದಲ್ಲಿ ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿರುವ ಚೀನಾದಲ್ಲಿ ಜಗತ್ತಿನ ಅತ್ಯಂತ ಉದ್ದದ ಸಮುದ್ರ ಸೇತುವೆ ನಿರ್ಮಾಣಗೊಂಡಿದೆ. ಈ ಸೇತುವೆ ಉದ್ದ ಬರೋಬ್ಬರಿ 55 ಕಿಮೀ. ಇದರ ಬಗ್ಗೆ ಒಂದಿಷ್ಟು ಮಾಹಿತಿ.

ಸೇತುವೆಯ ಒಟ್ಟು ಉದ್ದ : 55 ಕಿ.ಮೀ.
ಈ ಸೇತುವೆ ನಿರ್ಮಾಣಕ್ಕೆ ಬಳಕೆಯಾದ ಉಕ್ಕು: 4,20,000ಟನ್‌
ಸೇತುವೆಯ ಬಾಳಿಕೆ : 120ವರ್ಷ
60ಪಟ್ಟು : ಪ್ಯಾರಿಸ್‌ನ ಐಫೆಲ್‌ ಟವರ್‌ ನಿರ್ಮಾಣಕ್ಕೆ ಬಳಕೆಯಾದ ಉಕ್ಕಿಗಿಂತ ಜಾಸ್ತಿ
ನೀರಿನಡಿ ಇರುವ ಸುರಂಗ ಮಾರ್ಗದ ಉದ್ದ : 6.7 ಕಿ.ಮೀ.
ಅಂದಾಜು ವೆಚ್ಚ : 98,150 ಕೋಟಿ.
ವಾಟರ್‌ಟೈಟ್‌ ತಂತ್ರಜ್ಞಾನ ಬಳಸಿ ನಿರ್ಮಿಸಿದ ಸುರಂಗಕ್ಕೆ ಬಳಸಿದ ಪೈಪ್‌ ಗಳು: 80,000ಟನ್‌

ಸಂಪರ್ಕಿಸುವ ಪ್ರದೇಶ
ಇದು ಹಾಂಕಾಂಗ್‌ ಅನ್ನು ದಕ್ಷಿಣ ಚೀನಾದ ಝೂಹಾಯ್‌ ನಗರದ ಜತೆ ಸಂಪರ್ಕಿಸುತ್ತದೆ. ಮಾರ್ಗ ಮಧ್ಯೆ ಮಕಾವು ಮತ್ತು ಮೇನ್‌ಲಾÂಂಡ್‌ ಚೀನಾವನ್ನು ಸಂಧಿಸುತ್ತದೆ. ಈ ಮಾರ್ಗ ನೀರಿನಡಿಯ ಸುರಂಗ, ಕಡಿದಾದ ರಸ್ತೆಗಳನ್ನು ಬಳಸಿಕೊಂಡು ಸಾಗುತ್ತದೆ.

ಕಾರ್ಮಿಕರಿಗೆ ಶಿಕ್ಷೆ
ಈ ಕಾಮಗಾರಿ ವೇಳೆ ಕಳಪೆ ಗುಣಮಟ್ಟದ ಸಿಮೆಂಟ್‌ ಬಳಸಿದ್ದಕ್ಕಾಗಿ 19 ಕಾರ್ಮಿಕರು ಶಿಕ್ಷೆಗೆ ಗುರಿಯಾಗಿದ್ದಾರೆ. ಹಲವು ನಿರ್ಮಾಣ ಕೆಲಸಗಾರರು ಕಾಮಗಾರಿ ವೇಳೆ ಮೃತಪಟ್ಟಿದ್ದಾರೆ.

-ಉದಯವಾಣಿ

Comments are closed.