ಅಂತರಾಷ್ಟ್ರೀಯ

ಮಾನವನ ಮುಖ ಹೋಲುವ ಮಂಗ ಚೀನಾದಲ್ಲಿ ಪತ್ತೆ

Pinterest LinkedIn Tumblr


ಕೆಲವೇ ದಿನಗಳ ಕೆಳಗೆ ಮನುಷ್ಯನ ಮುಖವನ್ನೇ ಹೋಲುವ ನಾಯಿಯ ಕುರಿತು ಓದಿದ್ದಿರಿ. ಚೀನಾದ ಮೃಗಾಲಯವೊಂದರಲ್ಲಿ ಮನುಷ್ಯನ ಮುಖವನ್ನೇ ಹೋಲುವ ಕೋತಿಯೊಂದು ಈಗ ಸುದ್ದಿಮಾಡುತ್ತಿದೆ.

ಇದರ ವಿಡಿಯೋವೊಂದು ಸಾಮಾಜಿಕ ಜಲತಾಣಗಳಲ್ಲಿ ಹರಿದಾಡಲಾಗಿ, ಇದರ ಮುಖಭಾವ ಮತ್ತು ಚೇಷ್ಟೆಗಳನ್ನು ಕಣ್ತುಂಬಿ ಕೊಳ್ಳಲೆಂದೇ ಜನಸಾಗರ ಈ ಮೃಗಾಲಯದತ್ತ ಹರಿದು ಬರುತ್ತಿದೆ. ಈ ಮಂಗನ ಕಣ್ಣು ಬಾಯಿ, ಮೂಗು ಮನುಷ್ಯರ ಕಣ್ಣು, ಬಾಯಿ, ಮೂಗಿನಂತೆಯೇ ಇರುವುದನ್ನು ನೋಡಿ ಜನರು ದಿಗ್ಭ್ರಮೆ ಗೊಳಗಾಗಿದ್ದಾರಂತೆ. ಇನ್ನೂ ಕೆಲವರು ಮೃಗಾಲಯ ಕಾವಲುಗಾರನೇ ಈತನಿರಬಹುದು ಎಂಬ ಅನಮಾನವನ್ನೂ ವ್ಯಕ್ತಪಡಿಸಿದ್ದಾರಂತೆ. ಇದು ಏನಾದರೂ ಮುಖಭಾವ ತೋರಿಸಿದರೆ ಮಾನವನೊಬ್ಬ ಮಾತನಾಡಿದಂತೆ ಭಾಸವಾಗುತ್ತದೆಯಂತೆ.

-ಉದಯವಾಣಿ

Comments are closed.