ಕರ್ನಾಟಕ

ಕೇಶ ಕಳೆದುಕೊಂಡ ಮಹಿಳೆ: ಸಲೂನ್‌ನಿಂದ 31 ಸಾವಿರ ಪರಿಹಾರ

Pinterest LinkedIn Tumblr


ಬೆಂಗಳೂರು: ತಲೆಗೂದಲು ನುಣುಪುಗೊಳಿಸಲೆಂದು ಚಿಕಿತ್ಸೆ ಪಡೆದುಕೊಂಡ ಮಹಿಳೆ ಕೇಶರಾಶಿ ಕಳೆದುಕೊಂಡಿದ್ದು, ಈಗ ಸಲೂನ್‌ ಆಕೆಗೆ 31 ರೂ. ಸಾವಿರ ಪರಿಹಾರ ನೀಡಬೇಕಾಗಿದೆ.

ಚಿಕಿತ್ಸೆ ನೀಡಿದ ಪಾರ್ಲರ್‌ ವಿರುದ್ಧ ಸಂತ್ರಸ್ತ ಮಹಿಳೆಯು ಗ್ರಾಹಕರ ವೇದಿಕೆಯಲ್ಲಿ ಪ್ರಕರಣ ದಾಖಲಿಸಿ 15 ಲಕ್ಷ ರೂ. ಪರಿಹಾರ ಕೋರಿದ್ದರು. ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆಯು ಜಯನಗರದ ಕ್ರಾಪ್‌ ಯುನಿಸೆಕ್ಸ್‌ ಸಲೂನ್‌ ಮತ್ತು ಸ್ಪಾಗೆ ಕಳೆಪೆ ಚಿಕಿತ್ಸೆ ನೀಡಿರುವುದಕ್ಕಾಗಿ ಗ್ರಾಹಕಿಗೆ 31 ರೂ. ಸಾವಿರ ಪರಿಹಾರ ನೀಡಬೇಕು ಎಂದು ಆದೇಶಿಸಿದೆ.

ವಿಲ್ಸನ್‌ ಗಾರ್ಡನ್‌ ನಿವಾಸಿ ನಿಶಾ ಬತವಿಯಾ ಅವರು ಕೇಶ ನುಣುಪುಗೊಳಿಸುವ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಮೂರೇ ದಿನಗಳಲ್ಲಿ ಕೂದಲು ಒರಟಾಗಿದ್ದಲ್ಲದೆ ಉದುರಲು ಶುರುವಾಗಿತ್ತು. ಮತ್ತೆ ಸಲೂನ್‌ಗೆ ಹೋದಾಗ ಉತ್ತಮ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದರು.

ಬಳಿಕ ಪ್ರಸಾದನ ಕಂಪೆನಿ ಲೊರೆಯಲ್‌ನವರು ಬಂದು ನಿಶಾ ಅವರ ಕೂದಲನ್ನು ಪರೀಕ್ಷೆಗೆ ಒಳಪಡಿಸಿದರು. ಕೂದಲು ಉದುರುವುದನ್ನು ತಡೆಯಲು ಕಂಪೆನಿಯ ಉತ್ಪನ್ನ ನೀಡಿದರು. ಹೀಗೆ ಐದು ಸರಿ ಆದ ಬಳಿಕ ಇನ್ನೇನು ಮಾಡಲು ಸಾಧ್ಯವಿಲ್ಲ . ಟ್ರೈಕಾಲಜಿಸ್ಟ್‌ ಅವರಿಂದ ಚಿಕಿತ್ಸೆ ಪಡೆಯುವಂತೆ ಸೂಚಿಸಿದರು. ನಿಶಾ ಅವರು ಸಲೂನ್‌ ಮತ್ತು ಲೊರೆಯಲ್‌ ಕಂಪೆನಿ ವಿರುದ್ಧ ಗ್ರಾಹಕರ ವೇದಿಕೆಗೆ ಮನವಿ ಸಲ್ಲಿಸಿದರು.

ಆದರೆ ವೇದಿಕೆ ವಿಚಾರಣೆಗೆ ಕರೆದಾಗ ಸಲೂನ್‌ ಪ್ರತಿನಿಧಿಗಳು ಹಾಜರಾಗಲಿಲ್ಲ, ಲೊರೆಯಲ್‌ ಕಂಪೆನಿಯವರು ಹಾಜರಾಗಿ, ಈ ದೂರು ಅಸ್ಪಷ್ಟ. ದೂರುದಾರರಿಗೂ ನಮಗೂ ನೇರ ಸಂಬಂಧವಿಲ್ಲ. ಅವರು ನಮ್ಮ ಕಂಪೆನಿಯ ಉತ್ಪನ್ನ ಖರೀದಿಸಿಲ್ಲ. ಸಲೂನ್‌ ಖರೀದಿಸಿ ಬಳಸಿರುವುದು. ಸಲೂನ್‌ನವರು ಗ್ರಾಹಕರಿಗೆ ಯಾವ ಪ್ರದಾದನ ಸರಿ ಹೊಂದುತ್ತದೆ ಎಂದು ತಿಳಿದುಕೊಂಡು ಬಳಸಬೇಕು ಎಂದು ವಾದಿಸಿದರು.

ಹೀಗೆ 15 ತಿಂಗಳ ವ್ಯಾಜ್ಯದ ಬಳಿಕ ಸಲೂನ್‌ ಮಾಡಿರುವ ತಪ್ಪಿಗಾಗಿ 31 ಸಾವಿರ ರೂ. ಪರಿಹಾರ ನೀಡಬೇಕು ಎಂದು ಗ್ರಾಹಕರ ವೇದಿಕೆ ತೀರ್ಪು ನೀಡಿದೆ.

Comments are closed.