ರಾಷ್ಟ್ರೀಯ

ಅಮೆರಿಕದಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿರುವ ಗೋವಾ ಸಿಎಂ ಪರ್ರೀಕರ್‌

Pinterest LinkedIn Tumblr


ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌ ಅವರು ಅಮೆರಿಕದಲ್ಲಿ ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ; ಅವರು ಬೇಗನೆ ಮನೆಗೆ ಮರಳುವರೆಂಬ ವಿಶ್ವಾಸವಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್‌ ಪ್ರಭು ಹೇಳಿದ್ದಾರೆ.

62ರ ಹರೆಯದ ಪರ್ರೀಕರ್‌ ಅವರು ಮೇದೋಜೀರಕ ಗ್ರಂಥಿಯ ತೊಂದರೆಯಿಂದ ಬಳಲುತ್ತಿದ್ದು ಅಮೆರಿಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ; ಮಾರ್ಚ್‌ ಮೊದಲ ವಾರ ಅವರನ್ನು ಅಲ್ಲಿನ ಆಸ್ಪತ್ರೆಗೆ ಸೇರಿಸಲಾಗಿತ್ತು.

ಪರ್ರೀಕರ್‌ ಅವರು ಫೆ.14ರಂದು ಅಸ್ವಸ್ಥರಾಗಿ ಮುಂಬಯಿಯ ಲೀಲಾವತಿ ಆಸ್ಪತ್ರೆಗೆ ಸೇರಿದ್ದರು. ಫೆ.22ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಅದೇ ದಿನ ಅವರು ಗೋವೆಯ ವಿಧಾನಸಭೆಯಲ್ಲಿ ಸಂಕ್ಷಿಪ್ತ ಬಜೆಟ್‌ ಮಂಡಿಸಿದ್ದರು.

-ಉದಯವಾಣಿ

Comments are closed.