ರಾಷ್ಟ್ರೀಯ

20 ಎಸೆತಗಳಲ್ಲಿ 102 ರನ್ ಸಿಡಿಸಿದ ಸಹಾ

Pinterest LinkedIn Tumblr


ಹೊಸದಿಲ್ಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ಇನ್ನೇನು ದಿನಗಳು ಮಾತ್ರ ಬಾಕಿ ಉಳಿದಿರುವಂತೆಯೇ ಎಲ್ಲ ಎಂಟು ಫ್ರಾಂಚೈಸಿಗಳು ಕಠಿಣ ಅಭ್ಯಾಸದಲ್ಲಿ ನಿರತವಾಗಿದೆ.

ಈ ನಡುವೆ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿರುವ ವೃದ್ಧಿಮಾನ್ ಸಹಾ ದೇಶೀಯ ಕ್ರಿಕೆಟ್‌ವೊಂದರಲ್ಲಿ ಕೇವಲ 20 ಎಸೆತಗಳಲ್ಲಿ 102 ರನ್ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ಕಾಲಿಘಟ್‌ನಲ್ಲಿ ನಡೆಯುತ್ತಿರುವ ಜೆಸಿ ಮುಖರ್ಜಿ ಟ್ರೋಫಿಯಲ್ಲಿ ಮೋಹನ್ ಬಗಾನ್ ಪರ ಬಿಎನ್ಆರ್ ರಿಕ್ರೇಯೆಷನ್ ಕ್ಲಬ್ ವಿರುದ್ಧ ಸಹಾ ಸಿಡಿಲಬ್ಬರದ ಶತಕ ದಾಖಲಿಸಿದ್ದಾರೆ.

20 ಎಸೆತಗಳಲ್ಲಿ ಶತಕ ಬಾರಿಸಿರುವ ಸಹಾ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಹಾಗೂ 14 ಸಿಕ್ಸರ್‌ಗಳು ಸೇರಿದ್ದವು. ಈ ಮೂಲಕ 151 ರನ್‌ಗಳ ಗೆಲುವಿನ ಗುರಿಯನ್ನು ಕೇವಲ ಏಳು ಓವರ್‌ಗಳಲ್ಲಿ ಬೆನ್ನತ್ತಿತ್ತು.

2018 ಐಪಿಎಲ್‌ಗಾಗಿ ನಡೆದ ಹರಾಜಿನಲ್ಲಿ ಸಹಾ ಅವರನ್ನು ಬರೋಬ್ಬರಿ ಐದು ಕೋಟಿ ರೂ.ಗಳನ್ನು ನೀಡಿ ಸನ್‌ರೈಸರ್ಸ್ ಹೈದರಾಬಾದ್ ಖರೀದಿಸಿತ್ತು.

ಅಂದ ಹಾಗೆ ದೇಶಿಯ ದರ್ಜೆಯಲ್ಲಿ 164 ಟಿ-20 ಪಂದ್ಯಗಳನ್ನಾಡಿರುವ ಸಹಾ 130.73 ಸ್ಟ್ರೈಕ್‌ರೇಟ್‌ನಲ್ಲಿ 164 ರನ್ ಗಳಿಸಿದ್ದಾರೆ. ಇದರಲ್ಲಿ ಶತಕ ಹಾಗೂ 14 ಅರ್ಧಶತಕ ಸೇರಿವೆ.

ಹಾಗೆಯೇ ಐಪಿಎಲ್‌ನಲ್ಲಿ ಚೆನ್ನೈ, ಕೋಲ್ಕತ್ತಾ ಹಾಗೂ ಪಂಜಾಬ್ ತಂಡಗಳನ್ನು ಪ್ರತಿನಿಧಿಸಿರುವ ಸಹಾ 104 ಪಂದ್ಯಗಳಲ್ಲಿ 1557 ರನ್ ಗಳಿಸಿದ್ದಾರೆ.

ಅಷ್ಟೇ ಯಾಕೆ ಐಪಿಎಲ್ ಫೈನಲ್‌ನಲ್ಲಿ ಶತಕ ಬಾರಿಸಿರುವ ಏಕಮಾತ್ರ ಬ್ಯಾಟ್ಸ್‌ಮನ್ ಆಗಿದ್ದಾರೆ. ಆದರೆ ದುರದೃಷ್ಟವಶಾತ್ 2014ರಲ್ಲಿ ನಡೆದ ಕೆಕೆಆರ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಪಂಜಾಬ್ ಸೋಲನ್ನಪ್ಪಿತ್ತು.

Comments are closed.