ಕರ್ನಾಟಕ

ಕಡಿಮೆ ರೇಟು, ಬಿಗ್‌ ಬೈಟು! ಕಣ್ಮುಚ್ಚಿ ತಿನ್ನಿ, ಇದು ಕುಂದಾಪ್ರ ರುಚಿ

Pinterest LinkedIn Tumblr


ಒಮ್ಮೊಮ್ಮೆ ಎಂಥ ಪ್ರತಿಷ್ಠಿತ ಹೋಟೆಲಿಗೆ ಹೋದರೂ ಅಲ್ಲಿನ ತಿಂಡಿಗಳ ರುಚಿ ನಾಲಿಗೆಗೆ ಹಿಡಿಸುವುದಿಲ್ಲ. ಇಡ್ಲಿಗೆ ಸೋಡಾ ಬೆರೆಸಿರುತ್ತಾರೆ, ಚಟ್ನಿ ಸ್ವಾದವಿರುವುದಿಲ್ಲ, ದೋಸೆಯ ಹಿಟ್ಟು ಹುಳಿ ಬಂದ ಕಾರಣಕ್ಕೆ ಅದರ ರುಚಿಯೂ ಕೆಟ್ಟಿರುತ್ತದೆ. ಪ್ರತಿ ಗುಟುಕಿನಲ್ಲೂ ಕೆನೆ ಸಿಕ್ಕಿ ಕಾಫಿ, ಟೀ ಕೂಡ ರುಚಿ ಕಳೆದುಕೊಂಡಿರುತ್ತದೆ. ತಗೊಂಡೆ¾àಲೆ ಬಿಡೋಕಾಗುತ್ತಾ ಎಂದು ಗೊಣಕಿಕೊಂಡೇ ತಿಂದ ಬಳಿಕ ಹೊಟ್ಟೆಯ ಆರೋಗ್ಯವೂ ಹಾಳಾಗುತ್ತದೆ. ದುಬಾರಿ ಮೊತ್ತ ತೆತ್ತೂ, ಕೊಟ್ಟ ದುಡ್ಡಿಗೆ ಮೋಸ ಹೋಗಿರುತ್ತೇವೆ.

ಆದರೆ, ಇಲ್ಲೊಂದು ಹೋಟೆಲಿನಲ್ಲಿ ನಿಮಗೆ ಮೊದಲೇ ಭರವಸೆ ನೀಡುತ್ತಾರೆ: ನಮ್ಮ ಹೋಟೆಲಿನಲ್ಲಿ ಇಡ್ಲಿಗೆ ಸೋಡಾ ಹಾಕುವುದಿಲ್ಲ, ಚಟ್ನಿಗೆ ಈರುಳ್ಳಿ, ಬೆಳ್ಳುಳ್ಳಿ ಬಳಸುವುದಿಲ್ಲ, ಕಾಫಿ ತಯಾರಿಸಲು ಬ್ರ್ಯಾಂಡೆಡ್‌ ಕಾಫಿಪುಡಿ ಹಾಗೂ ನಂದಿನಿ ಹಾಲನ್ನೇ ಬಳಸುತ್ತೇವೆ ಹಾಗೂ ಎÇÉಾ ತಿನಿಸುಗಳನ್ನು ಅತ್ಯುತ್ತಮ ಗುಣಮಟ್ಟದ ಪದಾರ್ಥಗಳನ್ನೇ ಬಳಸಿ ತಯಾರಿಸುತ್ತೇವೆ ಎಂದು. ಚಂದ್ರಾ ಲೇಔಟ್‌ ಸಮೀಪವಿರುವ “ಬಿಗ್‌ ಬೈಟು’ ಹೋಟೆಲಿಗೆ ಬಂದರೆ ಇಂಥ ಭರವಸೆಯ ಫ‌ಲಕವನ್ನೇ ನೋಡಬಹುದು.

ಈ ಹೋಟೆಲ್‌ ಶುರುವಾಗಿ ಮೂರು ತಿಂಗಳಾಗಿದೆ ಅಷ್ಟೇ. ಆದರೆ, ಹತ್ತಾರು ವರ್ಷ ಹಳೆಯ ಹೋಟೆಲಿನಷ್ಟೇ ಒಳ್ಳೆಯ ಹೆಸರು ಮಾಡುತ್ತಿದೆ. ಈ ಹೋಟೆಲಿನ ಸ್ಥಾಪಕರು

ಕುಂದಾಪುರ ಸಮೀಪದ ಶಶಿ ಬಸ್ರೂರು ಹಾಗೂ ಅವರ ಭಾವ ನಟರಾಜ್‌ ಟಿ. ಹೊಸದಾಗಿ ಹೋಟೆಲ… ಉದ್ಯಮಕ್ಕೆ ಕಾಲಿಟ್ಟಿರುವ ಇವರು ರುಚಿ ಹಾಗೂ ಗುಣಮಟ್ಟದ ಬಗ್ಗೆ

ತೆಗೆದುಕೊಳ್ಳುವ ಕಾಳಜಿಯನ್ನು ನೋಡಿದರೆ ಇವರಿಗೆ ಹೋಟೆಲಿನ ಬಗ್ಗೆ ಇರುವ ಆಸ್ಥೆ ಗೊತ್ತಾಗುತ್ತದೆ.

ಹೊಸದಾಗಿ ಶುರು ಮಾಡಿ¨ªಾರೆ ಅಂದ ಮಾತ್ರಕ್ಕೆ ಇವರೇನು ಅನನುಭವಿಗಳಲ್ಲ. ಶಶಿ ಬಸೂÅರು, ಈ ಮೊದಲು “ಬೈಟು ಕಾಫಿ’ ಹೋಟೆಲಿನ ಮ್ಯಾನೇಜ್‌ಮೆಂಟ್‌ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಗುಟ್ಟನ್ನು ಅರಿತಿ¨ªಾರೆ.

ಏನೇನೆಲ್ಲ ಸಿಗುತ್ತೆ?
ಇಲ್ಲಿ ಇಡ್ಲಿ-ವಡಾ, ಖಾರಾಬಾತ್‌, ಕೇಸರಿ ಬಾತ್‌, ಚೌಚೌ ಬಾತ್‌, ಮಸಾಲ ರೈಸ್‌, ಘೀ ಮಸಾಲ ದೋಸೆ, ಬೋಂಡ ಸೂಪ್‌, ಜಾಮೂನ್‌ ದೊರೆಯುತ್ತದೆ. ಶಶಿ ಅವರು ಹೇಳುವಂತೆ ಗರಿಗರಿಯಾದ ತುಪ್ಪದ ಮಸಾಲೆ ದೋಸೆ ಹಾಗೂ ಚಟ್ನಿ ಮತ್ತು ಮೃದುವಾದ ಇಡ್ಲಿ ಇಲ್ಲಿನ ಸ್ಪೆಷಾಲಿಟಿ. ಅನೇಕ ಗ್ರಾಹಕರು ಕೂಡಾ ಇಲ್ಲಿನ ದೋಸೆಯ ರುಚಿಗೆ ಫ‌ುಲ… ಮಾರ್ಕ್ಸ್ ನೀಡಿ¨ªಾರೆ.

5 ರೂಗೆ ಬಿಸಿ ಕಾಫಿ

ಇಲ್ಲಿನ ಮತ್ತೂಂದು ವಿಶೇಷ ಎಂದರೆ ಕೇವಲ ಐದು ರೂಪಾಯಿಗೆ ಹಾಫ್ ಕಾಫಿ ಅಥವಾ ಟೀ ಸಿಗುತ್ತದೆ. ಘಮಘಮಿಸುವ ಫಿಲ್ಟರ್‌ ಕಾಫಿ ಮತ್ತು ರುಚಿಯಾದ ಟೀ ಕಡಿಮೆ ಬೆಲೆಯಲ್ಲಿ ದೊರೆಯುವುದರಿಂದ ಇಲ್ಲಿಗೆ ಗ್ರಾಹಕರು ಹೆಚ್ಚು.

“ಒಳ್ಳೆ ಹುಡ್ಗ’ನೂ ಫಿದಾ!
ಬಿಗ್‌ಬಾಸ್‌ ವಿಜೇತ, ಒಳ್ಳೆ ಹುಡುಗ ಖ್ಯಾತಿಯ ಪ್ರಥಮ… ಕೂಡಾ ಇಲ್ಲಿನ ಗ್ರಾಹಕರಾಗಿ¨ªಾರೆ. ಅನೇಕ ಕಾಯಂ ಗ್ರಾಹಕರು ಇಲ್ಲಿನ ಕಾಫಿಯ ರುಚಿಗೆ ಅಭಿಮಾನಿಗಳು. ಈ ಹೋಟೆಲಿನ ತಿನಿಸುಗಳ ಬೆಲೆ ಕಡಿಮೆಯಿದ್ದು, ಎಲ್ಲ ವರ್ಗದವರಿಗೂ ಕೈಗೆಟುಕುವಂತಿದೆ.

ಹೋಟೆಲ… ಉದ್ಯಮಕ್ಕೆ ಯಾಕೆ ಬಂದಿರಿ ಎನ್ನುವ ಪ್ರಶ್ನೆಗೆ ಅವರ ಉತ್ತರ ಹೀಗಿದೆ- “ಹೊಟ್ಟೆಪಾಡಿನ ಕಾರಣಕ್ಕೆ ಈ ಮೊದಲು ನಾನೂ ಹಲವು ಕಡೆ ಕೆಲಸ ಮಾಡಿದ್ದೇನೆ. ಹಲವಾರು ಹೋಟೆಲುಗಳಲ್ಲಿ ಹೆಚ್ಚು ದುಡ್ಡು ಚಾರ್ಜ್‌ ಮಾಡುತ್ತಾರೆ ಮತ್ತು ಕಳಪೆ ಗುಣಮಟ್ಟದ ಆಹಾರ ನೀಡುತ್ತಾರೆ. ಇದನ್ನು ನೋಡಿದಾಗ ನಾನೇ ಒಂದು ಹೋಟೆಲ… ತೆರೆದು ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಆಹಾರ ನೀಡಿದರೆ ಹೇಗೆ ಎನ್ನುವ ಆಲೋಚನೆ ಬಂದು ಈ ಹೋಟೆಲ… ಉದ್ಯಮಕ್ಕೆ ಕಾಲಿಟ್ಟೆ’ ಎನ್ನುತ್ತಾರೆ ಶಶಿ ಬಸೂÅರು.

ಯಾವಾಗ ಓಪನ್‌ ಇರುತ್ತೆ?
ಬೆಳಗ್ಗೆ 7 ರಿಂದ 12.30
ಸಂಜೆ 4 ರಿಂದ 9.30
ಸೋಮವಾರ ರಜೆ.

ಎಲ್ಲಿದೆ?
ನಂ3. ಆನಂದ ಜಿಮ್‌ ಬಿಲ್ಡಿಂಗ್‌
6 ನೇ ಕ್ರಾಸ್‌, ಮಾರುತಿ ನಗರ
80 ಅಡಿ ರಸ್ತೆ, ನಾಗರಬಾವಿ ರಸ್ತೆ,
ಚಂದ್ರಾ ಲೇಔಟ್‌
ಮೊಬೈಲ್‌ ಸಂಖ್ಯೆ: 9901576728

ಸ್ವಾತಿ ಕೆ.ಎಚ್‌.

-ಉದಯವಾಣಿ

Comments are closed.