ಕರ್ನಾಟಕ

ಕೆಜೆಪಿ-ಬಿಜೆಪಿ ಇಬ್ಬಾಗದಿಂದ ಸಿದ್ದರಾಮಯ್ಯ ಸಿಎಂ ಆದರು: ಈಶ್ವರಪ್ಪ

Pinterest LinkedIn Tumblr


ಬೆಳಗಾವಿ: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದು ಹಿಂದುಳಿದ ಮತಗ ಳಿಂದಲ್ಲ. ಕೆಜೆಪಿ – ಬಿಜೆಪಿ ಇಬ್ಬಾಗದಿಂದ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಶನಿವಾರ ಬಿಜೆಪಿ ಹಿಂದುಳಿದ ವರ್ಗಗಗಳ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಪುನರುಚ್ಚರಿಸಿದರು.

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕೆಜೆಪಿಯಿಂದ ಸಿದ್ದ ರಾಮಯ್ಯ ಮುಖ್ಯಮಂತ್ರಿಯಾದರು. ನಾನು ಹಿಂದುಳಿದ ವರ್ಗಗಳಿಂದ ಮುಖ್ಯ ಮಂತ್ರಿಯಾಗಿದ್ದೇನೆ ಎಂದು ಸಿಎಂ ಭಾವಿಸಿದ್ದಾರೆ. ಲೋಕಸಭಾ ಚುನಾವಣೆ ಯಲ್ಲಿ ಬಿಜೆಪಿ ನಾಯಕರು ಒಗ್ಗಟ್ಟಾಗಿ ಕೇಂದ್ರದಲ್ಲಿ ಪ್ರಧಾನಿಯಾಗಿ‌ ಮೋದಿ ಆಯ್ಕೆ ಮಾಡಿ‌, ಸಿದ್ದರಾಮಯ್ಯ‌‌ ಹಾಗೂ ಕಾಂಗ್ರೆಸ್ ಗೆ ಮುಖಭಂಗ ಮಾಡಿರುವುದನ್ನು‌ ಮರೆತಿದ್ದಾರೆ.

ಸಿದ್ದರಾಮಯ್ಯನರು ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳುತ್ತಾರೆ. ಆದರೆ ಕೆಪಿಸಿಸಿ‌ ‌ಅಧ್ಯಕ್ಷ ಡಾ.ಪರಮೇಶ್ವರ ಅವರಿಗೆ ಕೇಳಿದರೆ ಅವರೇ ಬೇರೆ ಹೇಳುತ್ತಾರೆ ಎಂದು ಲೇವಡಿ ‌ಮಾಡಿದರು. ಸಿದ್ದರಾಮಯ್ಯ ಅಧಿಕಾರಕ್ಕೆ‌ ಬರುವಾಗ ಹಿಂದುಳಿದವರ ಬಗ್ಗೆ ಅನುಕಂಪ ತೋರಿದ್ದರು. ಆದರೆ ಅಧಿಕಾರಕ್ಕೆ ಬಂದ‌ ಮೇಲೆ ಏನು ಕೊಡುಗೆ ನೀಡಿದ್ದಿರಿ ಎಂದು ಶ್ವೇತ ಪತ್ರ ಹೊರಡಿಸಿ ಎಂದು ಸವಾಲ್ ಹಾಕಿದರು. ಕುಲಕುಲವೆಂದು ಹೋಡೆದಾಡ ಬೇಡಿ ಎಂದು ಶರಣರ ವಚನವನ್ನು ಮರೆತು ‌ವೀರಶೈವ ಲಿಂಗಾಯತರ‌‌ ಮಧ್ಯೆ ಬೆಂಕಿ‌ಹಚ್ಚಿದ್ದಾರೆ ಎಂದು ಸಿಡಿಮಿಡಿಗೊಂಡರು.

ಬಿಜೆಪಿ ಸರಕಾರದ ಅವಧಿಯಲ್ಲಿ ಸಾಕಷ್ಟು ಹಿಂದುಳಿದ ವರ್ಗಗಗಳಿಗೆ ಅಭಿವೃದ್ಧಿ ಕಾರ್ಯಮಾಡಿದ್ದೇವೆ. ಲೋಕಸಭಾ ಚುನಾ ವಣೆ ಕಾಂಗ್ರೆಸ್ ಸೋಲಿಗೆ ಹಿಂದುಗಳ ವರ್ಗಗಗಳಿಂದ ಸಾಧ್ಯವಾಯಿತು. ಕರ್ನಾಟಕದಲ್ಲಿ ಹಿಂದುಳಿದವರು ಬಿಜೆಪಿ ಬೆಂಬಲ ಇದ್ದಾರೆ ಎಂದು ತೋರಿಸಲು ಏ.3 ರಂದು ಕಾಗಿನೆಲೆಯಲ್ಲಿ ಬೃಹತ ಹಿಂದುಳಿದ ವರ್ಗಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

Comments are closed.