ಅಂತರಾಷ್ಟ್ರೀಯ

ಅಪಾಯಕಾರಿ ಸ್ಥಿತಿಯತ್ತ ಪಾಕಿಸ್ತಾನದ ಆರ್ಥಿಕತೆ

Pinterest LinkedIn Tumblr


ವಾಷಿಂಗ್‌ಟನ್‌: ದಿನೇ ದಿನೇ ಅಧೋಗತಿಯತ್ತ ಸಾಗುತ್ತಿರುವ ಪಾಕಿಸ್ತಾನದ ಆರ್ಥಿಕತೆ ಕುರಿತಂತೆ ಕಳಕಳಿ ವ್ಯಕ್ತಪಡಿಸಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್‌) ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಪಾಕಿಸ್ತಾನಕ್ಕೆ ಆಗ್ರಹಿಸಿದೆ.

ಈ ನಿಟ್ಟಿನಲ್ಲಿ ಪಾಕ್‌ ತ್ವರಿತಗತಿಯಲ್ಲಿ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಐಎಂಎಫ್‌ ಅಭಿಪ್ರಾಯಪಟ್ಟಿದೆ. ದೇಶದ ವಿತ್ತೀಯ ಕೊರತೆ ಅದರ ಜಿಡಿಪಿಯ ಶೇ 5.5ರ ಮಟ್ಟ ತಲುಪುವ ಸಾಧ್ಯತೆ ಇದ್ದು ಅಪಾಯಕಾರಿ ಆರ್ಥಿಕ ಪರಿಸ್ಥಿತಿ ನೆಲೆಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಸರಕಾರದ ಆದಾಯಕ್ಕಿಂತ ಖರ್ಚು ವೆಚ್ಚ ಹೆಚ್ಚಾದ ಸಮದರ್ಭ ವಿತ್ತೀಯ ಕೊರತೆ ತಲೆದೋರುತ್ತದೆ. ಭಾರತದ ವಿತ್ತೀಯ ಕೊರತೆ ಸದ್ಯದ ಮಟ್ಟಿಗೆ ಶೇ 3.3ರಷ್ಟಿದೆ.

ಪಾಕ್‌ನ ವಿದೇಶೀ ವಿನಿಮಯ ತಗ್ಗಿದ್ದು ಸಾಲ ಪಡೆದ ಹಣವನ್ನು ಮರಳಿಸಲು ಪಾಕ್‌ನ ಸಾಮರ್ಥ್ಯ ಕುಸಿಯುತ್ತಿದೆ ಎಂದು ಐಎಂಎಫ್‌ ಎಚ್ಚರಿಕೆ ನೀಡಿದೆ.

Comments are closed.