ರಾಷ್ಟ್ರೀಯ

ಚಂದ್ರಬಾಬು ನಾಯ್ಡುರದು ಅವಕಾಶವಾದಿ ರಾಜಕಾರಣ: ಬಿಜೆಪಿ

Pinterest LinkedIn Tumblr


ಹೈದರಾಬಾದ್‌: ಕೇಂದ್ರದ ಎನ್‌ಡಿಎ ಸರಕಾರದಿಂದ ಹಿಂದೆ ಸರಿಯುವ ಟಿಡಿಪಿ ಪಕ್ಷದ್ದು ಪಕ್ಕಾ ಅವಕಾಶವಾದಿ ಪ್ರವೃತ್ತಿಯಾಗಿದೆ ಎಂದು ತೆಲಂಗಾಣ ಬಿಜೆಪಿ ವಕ್ತಾರ ಕೃಷ್ಣ ಸಾಗರ್‌ ರಾವ್‌ ಹೇಳಿದ್ದಾರೆ.

“ಇದನ್ನು ಚಂದ್ರಬಾಬು ನಾಯ್ಡರ ಅವಕಾಶವಾದಿ ರಾಜಕೀಯವೆಂದು ಬಿಜೆಪಿ ಪರಿಗಣಿಸುತ್ತದೆ. ಅಲ್ಲದೇ ಇದು ಅನುಕೂಲಸಿಂಧು ರಾಜಕೀಯ” ಎಂದು ರಾವ್‌ ಹೇಳಿದ್ದಾರೆ.

2014ರ ಲೋಕ ಸಭೆ ಚುನಾವಣೆಯ ಹಿಂದಿನ ವರ್ಷ ಎನ್‌ಡಿಎ ಸೇರಿದ್ದ ಟಿಡಿಪಿ ತನ್ನ ಅವಕಾಶವಾದಿ ಮನಸ್ಥಿತಿ ತೋರಿದೆ ಎಂದ ರಾವ್‌ “ಈಗ ಮತ್ತೊಮ್ಮೆ ಚುನಾವಣೆಗೂ ಒಂದು ವರ್ಷ ಮುನ್ನ ನಾಯ್ಡು ತಮ್ಮ ಅನುಕೂಲ ನೋಡಿಕೊಂಡು ಹಿಂದೆ ಸರಿದಿದ್ದಾರೆ. ಆಂಧ್ರ ಪ್ರದೇಶದಲ್ಲಿ ಬಿಜೆಪಿ ತನ್ನ ಸ್ವಂತ ಬಲದಿಂದ ಬೆಳೆದು ಪ್ರವರ್ಧಮಾನಕ್ಕೆ ಬರುವ ಭೀತಿಯಿಂದ ನಾಯ್ಡು ಹಿಂದೆ ಸರಿದಿದ್ದಾರೆ” ಎಂದು ರಾವ್‌ ತಿಳಿಸಿದ್ದಾರೆ.

“ಟಿಡಿಪಿ ಹಿಂದೆ ಸರಿದಿರುವ ಕಾರಣ ರಾಜ್ಯದಲ್ಲಿ ತನ್ನ ಸ್ವಂತ ಬಲದಿಂದಲೇ ಬೆಳೆಯಲು ಬಿಜೆಪಿಗೆ ಅವಕಾಶ ದೊರೆತಂತಾಗಿದೆ” ಎಂದು ಇದೇ ವೇಳೆ ರಾವ್‌ ತಿಳಿಸಿದ್ದಾರೆ.

” ಈ ಮೂಲಕ ನಮಗೊಂದು ಸುವರ್ಣಾವಕಾಶ ದೊರಕಿದ್ದು ರಾಜ್ಯದ ಮೇಲೆ ರಾಜ್ಯಗಳಲ್ಲಿ ಗೆಲುವಿನ ನಗೆ ಬೀರುತ್ತಿರುವ ಬಿಜೆಪಿ ಆಂಧ್ರ ಪ್ರದೇಶದಲ್ಲೂ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಅವಕಾಶವೆಂದು ಭಾವಿಸಲಿದ್ದೇವೆ ” ಎಂದ ರಾವ್‌ ವಿಶೇಷ ಸ್ಥಾನಮಾನದ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆಪಾದಿಸಿದ್ದಾರೆ.

ಆದರೆ ವಿಶೇಷ ಸ್ಥಾನಮಾನಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದರೂ ಈ ವಿಚಾರವಾಗಿ ನಾಯ್ಡು ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಜೇಟ್ಲಿ ತಿಳಿಸಿದ್ದರು.

Comments are closed.