ಅಂತರಾಷ್ಟ್ರೀಯ

ಹಿಂದೂ ಮಹಿಳೆ ಪಾಕಿಸ್ತಾನದ ಸೆನೆಟರ್

Pinterest LinkedIn Tumblr


ಕರಾಚಿ: ಮುಸ್ಲಿಂ ರಾಷ್ಟ್ರ ಪಾಕಿಸ್ತಾನದ ಇತಿಹಾಸದಲ್ಲಿ ಮೊದಲನೇ ಬಾರಿ ಸೆನೆಟರ್ ಆಗಿ ಹಿಂದೂ ಮಹಿಳೆ ಆಯ್ಕೆಯಾಗಿದ್ದಾರೆ. ಪಾಕಿಸ್ತಾನ ಸಿಂಧ್ ಪ್ರಾಂತ್ಯದ 39 ವರ್ಷದ ಕೃಷ್ಣ ಕುಮಾರಿ ಕೊಹ್ಲಿ ಪಾಕಿಸ್ತಾನದ ಸೆನೆಟರ್ ಆಗಿ ಆಯ್ಕೆಯಾದವರು.

ಕೃಷ್ಣಕುಮಾರಿ ಅವರು ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ)ಯ ಸದಸ್ಯೆ. ಹಿಂದೂಗಳಿಗಾಗಿ ಕಾಯ್ದಿರಿಸಿದ್ದ ಸಿಂಧ್ ಪ್ರಾಂತ್ಯದಿಂದ ಗೆಲುವು ಸಾಧಿಸಿದ್ದರು ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

ಕುಮಾರಿ ಸಿಂಧ್ ಪ್ರಾಂತ್ಯದ ತಾರ್ ಜಿಲ್ಲೆಯ ನಾಗರ್ ಪಾಕರ್ ಕುಗ್ರಾಮದವರು. 1979ರ ಫೆಬ್ರವರಿಯಲ್ಲಿ ಜುಗ್ನೊ ಕೊಹ್ಲಿ ಜನಿಸಿದ್ದರು.

Comments are closed.