ಕರ್ನಾಟಕ

ನಲಪಾಡ್​ ಗೂಂಡಾಗಿರಿ ಬಗ್ಗೆ ಸಿಸಿಬಿ ಪೊಲೀಸರಿಗೆ ಹೇಳಿಕೆ ನೀಡಿದ ವಿದ್ವತ್​

Pinterest LinkedIn Tumblr


ಬೆಂಗಳೂರು: ಶಾಸಕ ಹ್ಯಾರಿಸ್​ ಪುತ್ರ ಮಹಮದ್​ ನಲಪಾಡ್​ ಮತ್ತು ತಂಡದ ಗೂಂಡಾಗಿರಿ ಪ್ರಕರಣದಲ್ಲಿ ಹಲ್ಲೆಗೊಳಗಾದ ವಿದ್ವತ್​ ಹೇಳಿಕೆಯನ್ನು ಸಿಸಿಬಿ ಪೊಲೀಸರು ಶನಿವಾರ ದಾಖಲಿಸಿಕೊಂಡಿದ್ದಾರೆ.

ಸತತ 3 ಗಂಟೆಗಳ ಕಾಲ ಸಿಸಿಬಿ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ವತ್, ಫೆ.17ರಂದು ಐವರು ಸ್ನೇಹಿತರ ಜತೆ ಫರ್ಜಿ ಕೆಫೆಗೆ ಊಟಕ್ಕೆ ತೆರಳಿದ್ದಾಗ ನಡೆದ ಘಟನೆಯನ್ನು ಅವರ ದಾಟಿಯಲ್ಲಿ ಹೀಗೆ ವಿವರಿಸಿದ್ದಾರೆ.

ಕಿಸ್ ಮೈ ಫುಟ್‌, ಸೇ ಸಾರಿ ಎಂದ ನಲಪಾಡ್​
ರಾತ್ರಿ 10.30ಕ್ಕೆ ಹೋಟೆಲ್​​​​ನಿಂದ ನಿರ್ಗಮಿಸುವಾಗ ನಲಪಾಡ್​ ಮತ್ತು ಸ್ನೇಹಿತರು ಕೆಫೆಗೆ ಬಂದರು. ಫ್ರಾಕ್ಚರ್​​ ಆಗಿದ್ದ ನನ್ನ ಕಾಲಿಗೆ ನಲಪಾಡ್​​​​ ಕಾಲು ಟಚ್​​ ಆದಾಗ, ಬ್ರದರ್ ನೋಡ್ಕೊಂಡು ಓಡಾಡಿ ಎಂದು ಹೇಳಿದೆ. ಆಗ ನಾನ್ಯಾರು ಗೊತ್ತಾ? ಲೋಕಲ್ ಎಂಎಲ್​​​ಎ ಮಗ ಅಂತಾ ಆವಾಜ್​​​​​​​​​​​​​​ ಹಾಕಿದ್ರು ಬಳಿಕ ನಿನಗೆ ಗತಿ ಕಾಣಿಸ್ತೀನಿ ಅಂತಾ ಕಪಾಳಕ್ಕೆ ಹೊಡೆದ್ರು. ಅವರ ಸ್ನೇಹಿತರು ಬೈದು ನನ್ನ ಮೇಲೆ ಹಲ್ಲೆ ನಡೆಸಿದ್ರು.
ಇಷ್ಟಾದ ನಂತರವೂ ನಲಪಾಡ್​ ‘ಕಿಸ್ ಮೈ ಫುಟ್‌. ಸೇ ಸಾರಿ’ (ನನ್ನ ಪಾದಕ್ಕೆ ಮುತ್ತಿಟ್ಟ್ಉ ಕ್ಷಮೆ ಕೇಳು), ‘ಐ ವಿಲ್ ಕಿಲ್ ಯೂ’ (ನಿನ್ನ ಕೊಂದು ಬಿಡುತ್ತೇನೆ) ಎಂದು ನನ್ನ ಮೇಲೆ ಹಲ್ಲೆ ಮಾಡಿದರು.

ಬೌನ್ಸರ್​ಗಳು ಬಿಡಿಸಿದರು; ಆಸ್ಪತ್ರೆಯಲ್ಲೂ ಧಮ್ಕಿ
ನಲಪಾಡ್​ ಸ್ನೇಹಿತರು ನನಗೆ ಗಾಜಿನ ಮಗ್‌, ಐಸ್ ಮಗ್‌ ಮತ್ತು ಬಿಯರ್‌ ಬಾಟಲ್‌ಗಳಿಂದ ಹೊಡೆಯುತ್ತಿದ್ದಾಗ ಬೌನ್ಸರ್​​ಗಳು ಬಂದು ಥಳಿತದಿಂದ ಬಿಡಿಸಿದರೂ, ಮತ್ತೆ ಮತ್ತೆ ಬಂದು ನನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಿದರು. ಅಷ್ಟರಲ್ಲಾಗಲೇ ತೀವ್ರವಾಗಿ ಗಾಯಗೊಂಡಿದ್ದ ನನ್ನನ್ನು ಸ್ನೇಹಿತರು ಮಲ್ಯ ಆಸ್ಪತ್ರೆಗೆ ದಾಖಲಿಸಿದರು. ಆ ವೇಳೆ ಸ್ನೇಹಿತ ಗುರು ರಾಜ್‌ಕುಮಾರ್‌ (ರಾಜ್​ ಕುಮಾರ್​ ಮೊಮ್ಮಗ), ನನ್ನ ಅಣ್ಣ ಸಾತ್ವಿಕ್​​​ಗೆ ಹಲ್ಲೆ ಕುರಿತ ಮಾಹಿತಿ ತಿಳಿಸಿದ. ಆಸ್ಪತ್ರೆ ಸೇರಿ ನಾಲ್ಕೈದು ನಿಮಿಷದಲ್ಲೇ ಎಮರ್ಜೆನ್ಸಿ ವಾರ್ಡ್​​ಗೆ ಬಂದ ನಲಪಾಡ್​ ಗ್ಯಾಂಗ್​ ಮತ್ತೆ ಧಮ್ಕಿ ಹಾಕಿದರು.

ಪುನೀತ್​ ರಾಜ್​ಕುಮಾರ್​ ಮೈ ಕ್ಲೋಸ್​ ಫ್ರೆಂಡ್
ಆಸ್ಪತ್ರೆಯಲ್ಲಿ ನಲಪಾಡ್​ ನನಗೆ ಧಮ್ಕಿ ಹಾಕುತ್ತಿರುವಾಗ ‘ ಅಣ್ಣ ಸಾತ್ವಿಕ್​​ ಸ್ಥಳಕ್ಕೆ ಬಂದರು. ನಲಪಾಡ್​ ಅವನ​​​​​ ಜತೆಯೂ ಜಗಳವಾಡಿ ಆತನನ್ನೂ ಸಾಯಿಸ್ತೀವಿ ಎಂದು ಬೆದರಿಕೆ ಹಾಕಿದರು. ಆಗ ಗುರು ರಾಜ್​ಕುಮಾರ್​ ಮಧ್ಯ ಪ್ರವೇಶಿಸಿ, ನಾನು ರಾಜ್​​ಕುಮಾರ್​ ಮೊಮ್ಮಗ, ಇದೆಲ್ಲಾ ಸರಿ ಇರುವುದಿಲ್ಲ ಎಂದು ಹೇಳಿದಾಗ ನಲಪಾಡ್​, ‘ಬ್ರದರ್‌ ಐ ನೋ ಪುನೀತ್‌ರಾಜ್‌ಕುಮಾರ್‌. ಮೈ ವೆರಿ ಕ್ಲೋಸ್ ಫ್ರೆಂಡ್’ ಎಂದು ಹೊರಟು ಹೋದರು.

Comments are closed.